Anusha Kb | Updated: Apr 14, 2025, 1:35 PM IST
ಬಾಲಿವುಡ್ ಬೆಡಗಿ , ಗ್ಲಾಮರ್ ಗೊಂಬೆ ಜಾನ್ಹವಿ ಕಪೂರ್‌ಗೆ ಐದು ಕೋಟಿ ರೂಪಾಯಿ ಮೌಲ್ಯದ ಭಾರಿ ಐಶಾರಾಮಿ ಕಾರೊಂದು ಉಡುಗೊರೆಯಾಗಿ ಬಂದಿದೆ. ಇತ್ತೀಚೆಗೆ ಲ್ಯಾಂಬೊರ್ಗಿನಿ ಕಾರೊಂದು ಹಠಾತ್ತನೆ ಜಾನ್ಹವಿ ಕಪೂರ್ ಮನೆಯ ಮುಂದೆ ಬಂದು ನಿಂತಿತ್ತು. ಕಾರಿಗೆ ಗಿಫ್ಟ್ಗಳಿಗೆ ಕಟ್ಟುವ ರ್ಯಾಪ್ ಕಟ್ಟಲಾಗಿತ್ತು, ಕಾರಿನ ಒಳಗೂ ಸಹ ದೊಡ್ಡ ಗಿಫ್ಟ್ ಬಾಕ್ಸ್ ಇಡಲಾಗಿತ್ತು. ಅಪರೂಪದ ಪರ್ಪಲ್ ಬಣ್ಣದ ಐಶಾರಾಮಿ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮೊದಲಿಗೆ ಜಾಹ್ನವಿನೇ ಹೊಸ ಕಾರು ಖರೀದಿ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಇದು ಜಾಹ್ನವಿ ಖರೀದಿಸಿದ್ದಲ್ಲ ಬದಲಿಗೆ ಅವರಿಗೆ ಉಡುಗೊರೆಯಾಗಿ ಬಂದ ಕಾರು. ಅಂದಹಾಗೆ ಜಾನುಗೆ ಈ ದುಬಾರಿ ಉಡುಗೊರೆ ಕೊಟ್ಟಿರೋದು ಜಾನು ಬಾಯ್‌ಫ್ರೆಂಡ್ ಅಲ್ಲ ಬದಲಿಗೆ ಯುವ ಉದ್ಯಮಿ ಅನನ್ಯಾ ಬಿರ್ಲಾ. ಅನನ್ಯಾ ಮತ್ತು ಜಾನ್ಹವಿ ಕಪೂರ್ ಬಹಳ ವರ್ಷಗಳಿಂದಲೂ ಆತ್ಮೀಯ ಗೆಳತಿಯರು. ಇದೀಗ ಗೆಳತಿಗೆ ದುಬಾರಿ ಗಿಫ್ಟ್ ಕೊಡಿಸಿದ್ದಾರೆ ಅನನ್ಯಾ.
ಪ್ರೆಮಂ ಬೆಡಗಿ ಅನುಪಮಾ ಪರಮೇಶ್ವರನ್ ಖಾಸಗಿ ಫೋಟೊವೊಂದು ವೈರಲ್ ಆಗಿ ಕಿಚ್ಚು ಹಚ್ಚಿದೆ. ಕನ್ನಡದ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದ ಅನುಪಮಾ ಸದ್ಯ ಡ್ರ್ಯಾಗನ್ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ಕರ್ಲಿ ಹೇರ್ ಬ್ಯೂಟಿ ಚಿಯಾನ್ ವಿಕ್ರಂ ಪುತ್ರ ಧ್ರುವ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ರೂಮರ್ ಇದೆ. ಅದರ ನಡುವೆಯೇ ಇವರಿಬ್ಬರೂ ಚುಂಬಿಸ್ತಾ ಇರೋ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಈ ಇಬ್ಬರು ಬೈಸನ್ ಸಿನಿಮಾದಲ್ಲಿ ನಟಿಸ್ತಾ ಇದ್ದು, ಇಬ್ಬರ ನಡುವೆ ಕುಚ್ ಕುಚ್ ನಡೀತಿದೆ ಅನ್ನೋ ಗುಸು ಗುಸುಗೆ ಈ ಫೋಟೋದಿಂದ ಮತ್ತಷ್ಟು ಜೀವ ಬಂದಿದೆ.
ಗ್ಲೋಬಲ್ ಸ್ಟಾರ್ ಅನ್ನೋ ಪಟ್ಟ ಪಡೆದು ಹಾಲಿವುಡ್ ನಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಾ ಚೋಪ್ರಾ ಕ್ರಿಶ್-4 ಮೂಲಕ ಮತ್ತೆ ಬಾಲಿವುಡ್ಗೆ ಕಂಬ್ಯಾಕ್ ಮಾಡ್ತಾ ಇದೆ. ಹೃತಿಕ್ ರೋಷನ್ ಈ ಸಿನಿಮಾದಲ್ಲಿ ನಟಿಸೋದ್ರ ಜೊತೆಗೆ ನಿರ್ದೇಶನ ಮಾಡೋದಕ್ಕೂ ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ನಟಿಸೋದಕ್ಕೆ ಪ್ರಿಯಾಂಕಾಗೆ ಬರೊಬ್ಬರಿ 30 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಇದೊಂದೇ ಅಲ್ಲ ಸದ್ಯ ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು ನಟನೆಯ SSMB29 ಸಿನಿಮಾದಲ್ಲಿ ನಟಿಸ್ತಾ ಇರೋ ಪಿಗ್ಗಿ ಅದಕ್ಕೂ 30 ಕೋಟಿ ಚಾರ್ಜ್ ಮಾಡಿದ್ದಾರಂತೆ. ಅಲ್ಲಿಗೆ ಪ್ರಿಯಾಂಕಾ ಸಂಭಾವನೆ ವಿಷ್ಯ ಕೇಳಿ ಬಿ ಟೌನ್ ಬೆಡಗಿಯರೆಲ್ಲಾ ದಂಗಾಗಿದ್ದಾರೆ.