
ಬೆಂಗಳೂರು: ಜಗತ್ತಿನ ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಎಂದು ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ದುಡ್ಡಿನ ಮಳೆಯೇ ಸುರಿಯುತ್ತದೆ. ಇನ್ನು ಇದೇ ವೇಳೆ ನೆರೆಯ ಪಾಕಿಸ್ತಾನದಲ್ಲಿ, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯು ನಡೆಯುತ್ತಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ನಡುವಿನ ಹೋಲಿಕೆ ಮಾಡಿದರೆ, ಅಜಗಜಾಂತರ ವ್ಯತ್ಯಾಸವಿದೆ.
ಐಪಿಎಲ್ ಮುಂದೆ ಪಿಎಸ್‌ಎಲ್ ಏನೇನೂ ಅಲ್ಲ!
ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಪಾಕಿಸ್ತಾನದಲ್ಲಿ ಪಾಕಿಸ್ತಾನ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ಎರಡೂ ಟಿ20 ಲೀಗ್‌ನಲ್ಲೂ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಾರೆ. ತಮ್ಮ ತಂಡದ ಪರ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಫ್ರಾಂಚೈಸಿಯು ಒಳ್ಳೆಯ ಗಿಫ್ಟ್ ಕೊಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇತ್ತೀಚೆಗೆ ಪಿಎಸ್‌ಎಲ್ ಫ್ರಾಂಚೈಸಿ, ತಮ್ಮ ತಂಡದ ಶತಕ ಬಾರಿಸಿದ ಜೇಮ್ಸ್ ವಿನ್ಸಿಗೆ ಕೊಟ್ಟ ಗಿಫ್ಟ್ ಈಗ ವೈರಲ್ ಆಗಿದೆ.
IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ! ಮತ್ತೊಂದು ರೆಕಾರ್ಡ್ ಮೇಲೆ ಕಣ್ಣು
ಪಿಎಸ್‌ಎಲ್: ಶತಕ ಬಾರಿಸಿ ಪಂದ್ಯ ಗೆಲ್ಲಿಸಿದ ವಿನ್ಸ್‌ಗೆ ಸಿಕ್ಕಿದ್ದು ಹೇರ್ ಡ್ರೈಯರ್!
ಸದಾ ವಿಚಿತ್ರ ಕಾರಣಗಳಿಗೆ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟ್ ಮತ್ತೆ ಟ್ರೆಂಡಿಂಗ್‌ನಲ್ಲಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ಕ್ರಿಕೆಟಿಗ ಜೇಮ್ ವಿನ್ಸಿಗೆ ಉಡುಗೊರೆಯಾಗಿ ಹೇರ್ ಡ್ರೈಯರ್ ನೀಡಲಾಗಿದ್ದು, ವ್ಯಾಪಕ ಟ್ರೋಲ್‌ಗೆ ಗುರಿಯಾಗಿದೆ. ಮುಲ್ತಾನ್ ವಿರುದ್ಧ ಪಂದ್ಯದಲ್ಲಿ ಕರಾಚಿ ಕಿಂಗ್‌ನ ವಿನ್ಸಿ ಶತಕ ಸಿಡಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಯೋಜಕರು ಇದಕ್ಕೆ ಟ್ರೋಫಿ, ನಗದು ನೀಡಿದ್ದಾರೆ. ಬಳಿಕ ತಂಡದ ವತಿಯಿಂದ ಡ್ರೆಸ್ಸಿಂಗ್ ರೂಂನಲ್ಲಿ ವಿನ್ಸ್‌ಗೆ ಶ್ರೇಷ್ಠ ಆಟಗಾರ ಪ್ರಶಸ್ತಿ ರೂಪದಲ್ಲಿ ಹೇರ್ ಡ್ರೈಯರ್ ನೀಡಲಾಗಿದೆ. ಪ್ರಶಸ್ತಿ ಪಡೆಯುತ್ತಿದ್ದಂತೆ ಸಹ ಆಟಗಾರರ ಜೊತೆ ವಿನ್ ಜೋರಾಗಿ ನಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಇನ್ನು ಪಿಎಸ್‌ಎಲ್ ಹಾಗೂ ಐಪಿಎಲ್‌ನ ನಗದು ಬಹುಮಾನದ ವಿಚಾರಕ್ಕೆ ಬರುವುದಾದರೇ, 2025ರ ಐಪಿಎಲ್ ಚಾಂಪಿಯನ್ ತಂಡಕ್ಕೆ ನಗದು ಬಹುಮಾನದ ರೂಪದಲ್ಲಿ 20 ಕೋಟಿ ರುಪಾಯಿ ಸಿಗುತ್ತದೆ. ಇನ್ನು ಇನ್ನು 2025ರ ಪಿಎಸ್‌ಎಲ್ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತ ಕೇವಲ 4.30 ಕೋಟಿ ರುಪಾಯಿಗಳಾಗಿವೆ. ಇನ್ನು ಐಪಿಎಲ್ ಆಟಗಾರರಿಗೆ ಹಾಗೂ ಪಿಎಸ್‌ಎಲ್ ಆಟಗಾರರಿಗೆ ಸಿಗುವ ಸಂಭಾವನೆ ವಿಚಾರದಲ್ಲೂ ಭೂಮಿ-ಆಕಾಶದಷ್ಟು ವ್ಯತ್ಯಾಸವಿದೆ. 2025ರ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಿಷಭ್ ಪಂತ್, ಈ ಐಪಿಎಲ್‌ನಲ್ಲಿ ಬರೋಬ್ಬರಿ 27 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಇನ್ನು ಪಿಎಸ್‌ಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ವಿಶೇಷ ಕಾಂಟ್ರ್ಯಾಕ್ಟ್ ಸಿಗುತ್ತದೆ. ಈ ಆಧಾರದಲ್ಲಿ ಹೇಳುವುದಾದರೇ, ಈ ಬಾರಿಯ ಪಿಎಸ್‌ಎಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರನೆಂದರೆ ಅದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್. ಡೇವಿಡ್ ವಾರ್ನರ್‌ಗೆ ಈ ಬಾರಿಯ ಪಿಎಸ್‌ಎಲ್‌ನಲ್ಲಿ 2.58 ಕೋಟಿ ರುಪಾಯಿ ಸಂಭಾವನೆ ಸಿಗುತ್ತಿದೆ.
ಜಸ್ಪ್ರೀತ್ ಬುಮ್ರಾ ಜತೆ ಜಗಳವಾಡಿದ ಕರುಣ್ ನಾಯರ್ಗೆ ಬಿಸಿಸಿಐ ಸಂಬಳ ಎಷ್ಟು?
ಐಪಿಎಲ್ ಟೂರ್ನಿ ಆರಂಭವಾಗಿ ಇದುವರೆಗೂ 17 ಯಶಸ್ವಿ ಆವೃತ್ತಿಗಳು ಮುಗಿದಿದ್ದು, ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಭರ್ಜರಿಯಾಗಿ ನಡೀತಿದೆ. ಇನ್ನೊಂದೆಡೆ ಐಪಿಎಲ್‌ಗೆ ಸ್ಪರ್ಧೆ ನೀಡುವ ಉದ್ದೇಶದಿಂದಲೇ ಆರಂಭವಾದಂತಿರುವ ಪಿಎಸ್‌ಎಲ್ ಹಲವು ಗೊಂದಲಗಳ ನಡುವೆಯೂ 9 ಸೀಸನ್ ಕಂಡಿದೆ. ಒಟ್ಟಿನಲ್ಲಿ ಐಪಿಎ;ಲ್ ಹಾಗೂ ಪಿಎಸ್‌ಎಲ್ ನಡುವೆ ಹೋಲಿಕೆ ಮಾಡುವುದು ಸಾಧ್ಯವೇ ಇಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.