ಮಾರ್ಚಲ್ಲಿ ಕಾರು ಮಾರಾಟ ಭಾರಿ ಏರಿಕೆ, ಬೈಕ್‌ ವ್ಯಾಪಾರ ಕುಸಿತ

By Kannadaprabha News  |  First Published Apr 9, 2021, 8:03 AM IST

ಈ ವರ್ಷದ ಮಾರ್ಚ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾರು ಮಾರಾಟವಾಗಿದೆ.  ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.28.39ರಷ್ಟುಪ್ರಗತಿ ಕಂಡುಬಂದಿದೆ ಎಂದು ವಾಹನ ಡೀಲರ್‌ಗಳ ಸಂಘಗಳ ಒಕ್ಕೂಟ ಮಾಹಿತಿ ನೀಡಿದೆ.
 


 ನವದೆಹಲಿ (ಏ.09): ಮಾರ್ಚಲ್ಲಿ ಕಾರು, ಜೀಪಿನಂತಹ 2,79,745 ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.28.39ರಷ್ಟುಪ್ರಗತಿ ಕಂಡುಬಂದಿದೆ ಎಂದು ವಾಹನ ಡೀಲರ್‌ಗಳ ಸಂಘಗಳ ಒಕ್ಕೂಟ ಮಾಹಿತಿ ನೀಡಿದೆ.

ಉಳಿದೆಲ್ಲಾ ವಾಹನಗಳಿಗೆ ಹೋಲಿಸಿದರೆ ಟ್ರ್ಯಾಕ್ಟರ್‌ಗಳ ಮಾರಾಟದಲ್ಲಿ ಅತಿ ಹೆಚ್ಚು ಪ್ರಗತಿ ಕಂಡುಬಂದಿದೆ. ಕಳೆದ ವರ್ಷ ಮಾಚ್‌ರ್‍ನಲ್ಲಿ 53,463 ವಾಹನಗಳು ಬಿಕರಿಯಾಗಿದ್ದರೆ, ಈ ವರ್ಷ 69082 ಟ್ರ್ಯಾಕ್ಟರ್‌ಗಳು ಖರೀದಿಯಾಗಿವೆ. ಒಟ್ಟಾರೆ ಶೇ.29.21ರಷ್ಟುಪ್ರಗತಿ ಕಂಡುಬಂದಿದೆ. ಆದರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.35.26 ರಷ್ಟುಇಳಿಕೆಯಾಗಿದೆ. 2020ರ ಮಾಚ್‌ರ್‍ನಲ್ಲಿ 18,46,613 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಆದರೆ ಈ ವರ್ಷ ಅದು 11,95,445ಕ್ಕೆ ಕುಸಿದಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

Latest Videos

undefined

ಎಪ್ರಿಲ್ ತಿಂಗಳ ಸಖತ್ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಕಾರ್ ಖರೀದಿ ಮೇಲೆ 1 ಲಕ್ಷ ರೂ.ವರೆಗೆ ಲಾಭ ..

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.42.2ರಷ್ಟುಕುಸಿತವಾಗಿದೆ. 1,16,559 ವಾಹನಗಳು ಕಳೆದ ವರ್ಷ ಮಾರಾಟವಾಗಿದ್ದರೆ, ಅದು ಈ ವರ್ಷ 67,372ಕ್ಕೆ ಇಳಿದಿದೆ.

click me!