ಯೂರೋಪ್‌ನಿಂದ ಅಲ್ಲ, ಇನ್ಮುಂದೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಭಾರತದಿಂದಲೇ ವಿದೇಶಕ್ಕೆ ರಫ್ತಾಗಲಿದೆ. ಕಾರಣ ಟಾಟಾ ಇದೀಗ ತಮಿಳುನಾಡಿನಲ್ಲಿ ಬರೋಬ್ಬರಿ 1 ಬಿಲಿಯನ್ ಡಾಲರ್ ಮೊತ್ತವನ್ನು ಉತ್ಪಾದನಾ ಘಟಕಕ್ಕೆ ಹೂಡಿಕೆ ಮಾಡುತ್ತಿದೆ.
ನವದೆಹಲಿ(ಮೇ.02) ಟಾಟಾ ಮಾಲೀಕತ್ವದ ಬ್ರಿಟೀಷ್ ಕಾರು ಜಾಗ್ವಾರ್ ಲ್ಯಾಂಡ್ ರೋವರ್ ಇದೀಗ ಭಾರತದಲ್ಲಿ ಅತೀ ದೊಡ್ಡ ಉತ್ಪಾದನಾ ಘಟಕ ಆರಂಭಿಸುತ್ತಿದೆ. ಈಗಾಗಲೆ ಯೊರೋಪ್‌ನಲ್ಲಿ ಅತೀ ದೊಡ್ಡ ಉತ್ಪಾದನಾ ಘಟಕ ಹೊಂದಿರುವ ಜಾಗ್ವಾರ್ ಇದೀಗ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲು ಹೊಸ ಯೋಜನೆಗೆ ಮುಂದಾಗಿದೆ. ತಮಿಳುನಾಡಿನಲ್ಲಿ ಬರೋಬ್ಬರಿ 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡುತ್ತಿದೆ. ಈ ಮೂಲಕ ಭಾರತದಲ್ಲೇ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಉತ್ಪಾದಿಸಿ, ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ.
ಪುಣೆಯಲ್ಲಿ ಈಗಾಗಲೇ ಜಾಗ್ವಾರ್ ಲ್ಯಾಂಡ್ ರೋವರ್ ಉತ್ಪಾದನಾ ಘಟಕ ಹೊಂದಿದೆ. ಭಾರತದಲ್ಲಿ ವಿತರಣೆಯಾಗುವ ಕಾರುಗಳು ಇಲ್ಲಿಂದಲೆ ಉತ್ಪಾದನೆಯಾಗುತ್ತಿದೆ. ಆದರೆ ಇತರ ದೇಶದಲ್ಲಿ ವಿತರಣೆಯಾಗುವ ಕಾರುಗಳು ಯೊರೋಪ್‌ನಲ್ಲಿ ಮೂಲ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಇದೀಗ ತಮಿಳುನಾಡಿನಲ್ಲಿ ಅತೀ ದೊಡ್ಡ ಉತ್ಪಾದನಾ ಘಟಕ ಆರಂಭಿಸಿ, ಭಾರತದಿಂದಲೇ ವಿದೇಶಕ್ಕೆ ಕಾರು ರಫ್ತು ಮಾಡಲು ತಯಾರಿ ನಡೆಸಿದೆ.
undefined
ರೇಂಜ್ ರೋವರ್‌ನಿಂದ ಜಾಗ್ವಾರ್: ಭಾರತೀಯ ಉದ್ಯಮಿಗಳ ಒಡೆತನದ ಪ್ರಸಿದ್ಧ ವಿದೇಶಿ ಬ್ರ್ಯಾಂಡ್‌ಗಳು!
ಮಾರ್ಚ್ ತಿಂಗಳಲ್ಲಿ ಟಾಟಾ ಈ ಕುರಿತು ಘೋಷಣೆ ಮಾಡಿತ್ತು. ತಮಿಳುನಾಡಿನಲ್ಲಿ 9,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿತ್ತು. ಇದೀಗ ಅಧಿಕೃತಗೊಂಡಿದೆ. ಅತೀ ದೊಡ್ಡ ಉತ್ಪಾದನಾ ಘಟಕ ತಮಿಳುನಾಡಿನಲ್ಲಿ ತಲೆ ಎತ್ತಲಿದೆ. ದಕ್ಷಿಣದಲ್ಲಿ ಟಾಟಾ ಮೋಟಾರ್ಸ್ ವೆಲ್ಲೂರಿನಲ್ಲಿ ಉತ್ಪಾದನಾ ಘಟಕ ಹೊಂದಿದೆ. ಇದೀಗ ಟಾಟಾ ಮಾಲೀಕತ್ವದ ಜಾಗ್ವಾರ್ ರಾಣೀಪತ್‌ನಲ್ಲಿ ಆರಂಭಗೊಳ್ಳಲಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿನ ಟಾಟಾ 2ನೇ ಉತ್ಪಾದಕ ಘಟಕ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಮಿಳುನಾಡಿನಲ್ಲಿ ಆರಂಭಗೊಳ್ಳುತ್ತಿರುವ ಜಾಗ್ವಾರ್ ಲ್ಯಾಂಡ್ ರೋವರ್ ಉತ್ಪಾದನಾ ಘಟಕದಿಂದ ಮೊದಲ ಹಂತದಲ್ಲಿ 5,000 ಉದ್ಯೋಗ ಸೃಷ್ಟಿಯಾಗಲಿದೆ. ಟಾಟಾ ಮೋಟಾರ್ಸ್ ಭಾರತದಲ್ಲಿ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳುತ್ತಿದೆ. 5 ಸ್ಟಾರ್ ಸುರಕ್ಷತಾ ರೇಟಿಂಗ್, ಅತ್ಯುತ್ತಮ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮೂಲಕ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಇದೀಗ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಉತ್ಪಾದನಾ ಘಟಕ ಆರಂಭಿಸಿ ಭಾರತವನ್ನು ಆಟೋಮೇಟಿವ್ ಹಬ್ ಮಾಡಲು ಟಾಟಾ ಮಹತ್ತರ ಕೊಡುಗೆ ನೀಡುತ್ತಿದೆ.
ಲ್ಯಾಂಡ್ ರೋವರ್ ಡಿಫೆಂಡರ್ ಅಮೃತ ಮಹೋತ್ಸವ, 75ನೇ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!