ಹರಿಪ್ರಿಯಾ-ವಸಿಷ್ಠ ಸಿಂಹ ಮನೆಗೆ ಹೊಸ ಅತಿಥಿ, ಪತ್ನಿಗಾಗಿ 1.4 ಕೋಟಿ ಕಾರು ಖರೀದಿ!

By Suvarna NewsFirst Published Apr 29, 2024, 4:12 PM IST
Highlights

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಜೋಡಿ ಮದುವೆಯಾಗಿ ಒಂದು ವರ್ಷಗಳು ಉರುಳಿದೆ. ಇದೀಗ ಈ ಜೋಡಿ ಮನೆಗೆ ದುಬಾರಿ ಅತಿಥಿ ಆಗಮನವಾಗಿದೆ. ಪತ್ನಿಗಾಗಿ ವಸಿಷ್ಠ ಸಿಂಹ 1.4 ಕೋಟಿ ರೂ ಮರ್ಸಡೀಸ್ ಬೆಂಜ್ ಕಾರು ಖರೀದಿಸಿದ್ದಾರೆ.

ಬೆಂಗಳೂರು(ಏ.29) ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಪತಿ ಹಾಗೂ ನಟ ವಸಿಷ್ಠ ಸಿಂಹ ಕ್ಯೂಟ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಪಾತ್ರಗಳಿಗೆ ಜೀವ ತುಂಬಿ ಅಭಿಮಾನಿಗಳ ಮನ ಗೆದ್ದಿರುವ ಈ ಜೋಡಿ ಮದುವೆಯಾಗಿ ವರ್ಷಗಳೇ ಉರುಳಿದೆ. ಇದೀಗ ಈ ಜೋಡಿ ಮನೆಗೆ ದುಬಾರಿ ಅತಿಥಿ ಆಗಮನವಾಗಿದೆ. ವಸಿಷ್ಠ ಹಾಗೂ ಹರಿಪ್ರಿಯಾ ದುಬಾರಿ ಮರ್ಸಿಡೀಸ್ ಬೆಂಜ್ GLE 450d ಕಾರು ಖರೀದಿಸಿದ್ದಾರೆ. ಬಿಳಿ ಬಣ್ಣದ ಎಸ್‌ಯುವಿ ಕಾರು ಖರೀದಿಸಿ ಸಿಂಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.

ಕಾರು ಖರೀದಿಸಿದ ಸಂಭ್ರವನ್ನು ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.ವಸಿಷ್ಠ ಹಾಗೂ ಹರಿಪ್ರಿಯಾ ಡೀಲರ್‌ಬಳಿ ತೆರಳಿ ಹೊಸ ಕಾರನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಸೆಲೆಬ್ರೆಟಿ ಜೋಡಿಗೆ ಅದ್ಧೂರಿಯಾಗಿ ಕಾರು ವಿತರಿಸಲಾಗಿದೆ. ಕಾರು ಖರೀದಿಸಲು ಆಗಮಿಸಿ, ದಾಖಲೆ ಪತ್ರಗಳ ಪ್ರಕ್ರಿಯೆ ಮಗಿಸಿದ್ದಾರೆ. ಬಳಿಕ ಕಾರನ್ನು ಅನ್‌ಬಾಕ್ಸ್ ಮಾಡಿದ್ದಾರೆ. ಕಾರಿನ ಮುಂದೆ ಫೋಟೋಗೆ ಫೋಸ್ ನೀಡಿದ ಈ ಜೋಡಿ ಬಳಿಕ ಬಿಗಿದಪ್ಪಿ ಸಂಭ್ರಮ ಹಂಚಿಕೊಂಡಿದ್ದಾರೆ. 

ಕನ್ನಡ ಕಿರುತೆರೆಗೆ ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ: ಸ್ಪಷ್ಟನೆ ಕೊಟ್ರು ನೀರ್ ದೋಸೆ ನಟಿ

ಅಭಿಮಾನಿಗಳು ಹರಿಪ್ರಿಯಾ ಹಾಗೂ ವಸಿಷ್ಠ ಜೋಡಿಗೆ ಶುಭಹಾರೈಸಿದ್ದಾರೆ. ಹೊಸ ಕಾರು ಖರೀದಿಸಿದ ಸೆಲೆಬ್ರೆಟಿ ಜೋಡಿಗೆ ಅಭಿನಂದನೆ ಸಲ್ಲಿಸಿದ್ದಾರೆ.  ಹೊಸ ಕಾರಿನಲ್ಲಿ ವಸಿಷ್ಠ ಹಾಗೂ ಹರಿಪ್ರಿಯಾ ಜೋಡಿ ಹೊಸ ಕಾರಿನಲ್ಲಿ ರೌಂಡ್ ಹೊಡೆದಿದ್ದಾರೆ. ಈ ಕಾರಿನ ಬೆಲೆ 1.15 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಬೆಂಗಳೂರಿನಲ್ಲಿ ಆನ್‌ರೋಡ್ ಬೆಲೆ ಸರಿಸುಮಾರು 1.42 ಕೋಟಿ ರೂಪಾಯಿ.

ಮರ್ಸಡೀಸ್ ಬೆಂಜ್ GLE 450d  ಕಾರು 4ಮ್ಯಾಟಿಕ್ ಕಾರಾಗಿದೆ. 2999 cc ಎಂಜಿನ್ ಹೊಂದಿರುವ ಈ ಕಾರಿನ ಗರಿಷ್ಠ ವೇಗ 250 ಕಿ.ಮೀ ಪ್ರತಿ ಗಂಟೆಗೆ. 0-100 ಕಿ.ಮೀ ವೇಗವನ್ನು ಕೇವಲ 5.6 ಸೆಕೆಂಡ್‌ನಲ್ಲಿ ತೆಗೆದುಕೊಳ್ಳಲಿದೆ.  ಆದರೆ ನಗರ ಪ್ರದೇಶದಲ್ಲಿ ಈ ಕಾರಿನ ಮೈಲೇಜ್ 7.11 ಕಿ.ಮೀ, ಹೆದ್ದಾರಿಗಳಲ್ಲಿ 11.17 ಕಿ.ಮೀ ಮೈಲೇಜ್ ನೀಡಲಿದೆ. 

2999 cc, 6 ಸಿಲಿಂಡರ್ ಇನ್‌ಲೈನ್, 4 ವೇಲ್ವ್ DOHC ಎಂಜಿನ್ ಹೊಂದಿರುವ ಈ ಕಾರು 362 bhp ಪವರ್ ಹಾಗೂ 750 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ಸುರಕ್ಷತಾ ಫೀಚರ್ಸ್ ಈ ಕಾರು ಹೊಂದಿದೆ. ಫಾರ್ವರ್ಡ್ ಕೊಲೀಶನ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್,  ಕ್ರಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.  ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ಹೊಂದಿದೆ. ಒಟ್ಟು 9 ಏರ್‌ಬ್ಯಾಗ್ ಮೂಲಕ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಜೊತೆ 'ರೇಲ್ವೇ ಸ್ಟೇಷನ್'ನಲ್ಲಿ ಕಂಡ ಕನ್ನಡದ ನಟ ವಸಿಷ್ಠ ಸಿಂಹ

ಆ್ಯಪಲ್-ಆ್ಯಂಡ್ರಾಯ್ಡ್ ಸ್ಮಾರ್ಟ್ ಕೆನೆಕ್ಟ್, ಎಲ್‌ಸಿಡಿ ಡಿಸ್‌ಪ್ಲೆ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 6 ಮ್ಯೂಸಿಕ್ ಸೌಂಡ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.


 

 
 
 
 
 
 
 
 
 
 
 
 
 
 
 

A post shared by Vasishta N Simha (@imsimhaa)

click me!