Asianet Suvarna News Asianet Suvarna News

ನವೆಂಬರಲ್ಲಿ ಚೀನಾಕ್ಕೆ ಮತ್ತೆ ಕೊರೋನಾ ದಾಳಿ! ತಜ್ಞರಿಂದ ಎಚ್ಚರಿಕೆ

ನವೆಂಬರಲ್ಲಿ ಚೀನಾಕ್ಕೆ ಮತ್ತೆ ಕೊರೋನಾ ದಾಳಿ!  ಚೀನಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞನಿಂದಲೇ ಎಚ್ಚರಿಕೆ | ಚೀನಾವೇ  ಹುಟ್ಟು ಹಾಕಿದ ವೈರಸ್ ಅದಕ್ಕೆ ಉರುಳಾಯ್ತಾ? 

Experts Say China may be hit by second wave of coronavirus in November
Author
Bengaluru, First Published Apr 17, 2020, 12:58 PM IST

ಬೀಜಿಂಗ್‌ (ಏ. 17): ಚೀನಾ ಮತ್ತು ಇತರ ದೇಶಗಳಲ್ಲಿ ಈ ವರ್ಷದ ನವೆಂಬರ್‌ ವೇಳೆಗೆ ಕೊರೋನಾ ವೈರಸ್‌ ಹರಡುವಿಕೆಯ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಚೀನಾದ ಕೊರೋನಾ ವೈರಸ್‌ ಚಿಕಿತ್ಸಾ ತಜ್ಞರ ತಂಡದ ಮುಖ್ಯಸ್ಥ ಝಾಂಗ್‌ ವೆನ್‌ಹಾಂಗ್‌ ಎಚ್ಚರಿಸಿದ್ದಾರೆ.

ಈ ವರ್ಷದ ಬೇಸಿಗೆ ಮುಗಿಯುವ ವೇಳೆಗೆ ಎಲ್ಲ ದೇಶಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಬಹುದು. ನಂತರ ನವೆಂಬರ್‌ನಲ್ಲಿ ಚಳಿಗಾಲ ಬರುವ ವೇಳೆಗೆ ಮತ್ತೆ ಚೀನಾ ಹಾಗೂ ಇತರ ದೇಶಗಳಲ್ಲಿ ಕೊರೋನಾ ವೈರಸ್‌ ದೊಡ್ಡ ಪ್ರಮಾಣದಲ್ಲಿ ಹರಡಬಹುದು. ಆದರೆ, ಈಗ ಗಳಿಸಿರುವ ಅನುಭವದಿಂದಾಗಿ ಅದನ್ನು ಎದುರಿಸುವುದು ಕಷ್ಟವಾಗಲಿಕ್ಕಿಲ್ಲ. ದೀರ್ಘಾವಧಿಯಲ್ಲಿ ಈ ವೈರಸ್‌ನ ದಾಳಿಯನ್ನು ಆಗಾಗ ಎದುರಿಸಲು ದೇಶಗಳು ಸಿದ್ಧತೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದ 108 ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ

ಚೀನಾದಲ್ಲಿ ಕೊರೋನಾ ತಡೆಗೆ ವಿಧಿಸಿದ್ದ ಬಹುತೇಕ ಎಲ್ಲಾ ನಿರ್ಬಂಧಗಳನ್ನೂ ತೆರವುಗೊಳಿಸಿ ಆರ್ಥಿಕತೆಯನ್ನು ಸರಿದಾರಿಗೆ ತರಲಾಗುತ್ತಿದೆ. ಈಗಲೂ ಅಲ್ಲಲ್ಲಿ ಕೆಲ ಪ್ರಕರಣಗಳು ವರದಿಯಾಗುತ್ತಿದ್ದು, ಅವೆಲ್ಲವೂ ಬೇರೆ ದೇಶಗಳಿಂದ ಚೀನಾಕ್ಕೆ ಮರಳುತ್ತಿರುವ ಚೀನೀಯರಿಂದಲೇ ಹರಡುತ್ತಿವೆ. ಹೀಗಾಗಿ ಅದನ್ನು ಸುಲಭವಾಗಿ ಚೀನಾ ನಿಗ್ರಹಿಸುತ್ತಿದೆ.

ಮುಂದಿನ ದಿನಗಳಲ್ಲಿ ಜನರು ಮೊದಲಿನಂತೆ ಬದುಕಲು ಹಾಗೂ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ. ಆದರೆ, ಕೊರೋನಾ ವೈರಸ್ಸನ್ನು ಸಂಪೂರ್ಣ ನಿರ್ಮೂಲನೆ ಮಾಡಲು  ಸಾಧ್ಯವಾಗಲಿಕ್ಕಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.ಚೀನಾದಲ್ಲಿ ಈ ವರೆಗೆ 82341 ಜನರಿಗೆ ಸೋಂಕು ತಗುಲಿದ್ದು, 3342 ಜನ ಸಾವನ್ನಪ್ಪಿದ್ದಾರೆ.

Follow Us:
Download App:
  • android
  • ios