
ಯಮಧರ್ಮರಾಯನಿಂದ ಕೊರೋನಾ ಜಾಗೃತಿ: ಮನೆಯಲ್ಲಿರಿ ಇಲ್ಲದಿದ್ರೆ ಯಮಲೋಕಕ್ಕೆ ಬನ್ನಿ..!
ಯಮನ ವೇಷ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಯುವಕರ ತಂಡ| ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮ| ಲಾಕ್‌ಡೌನ್ ಮುಗಿಯುವವರೆಗೂ ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡ ಯಮ|
ಹಾವೇರಿ(ಏ.25):ಯುವಕರ ತಂಡವೊಂದು ಯಮನ ವೇಷ ಹಾಕುವ ಮೂಲಕ ಮಹಾಮಾರಿ ಕೊರೋನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯಕ್ರಮವೊಂದನ್ನ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಹಮ್ಮಿಕೊಂಡಿತ್ತು. ಯುವಕರಿಗೆ ಪೊಲೀಸರೂ ಕೂಡ ಸಾಥ್ ನೀಡಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಲಾಕ್‌ಡೌನ್ ಸಡಿಲಿಕೆ: ಮದ್ಯದ ಕತೆ ಏನು? ವಿನಾಯಿತಿ ಇದೆಯಾ?
ಮನೆಯಲ್ಲಿರಿ ಇಲ್ಲದಿದ್ರೆ ಯಮಲೋಕಕ್ಕೆ ಬನ್ನಿ ಎಂದು ಹೇಳುವ ಮೂಲಕ ಯುವಕರ ತಂಡ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಲಾಕ್‌ಡೌನ್ ಮುಗಿಯುವವರೆಗೂ ಯಾರೂ ಮನೆ ಬಿಟ್ಟು ಹೊರಗಡೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.