ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!

ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂ ವಿಲ್ಲರ್ ಗಳೇ ಇವ್ರ ಟಾರ್ಗೆಟ್.  ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್‌ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು! 

Share this Video
  • FB
  • Linkdin
  • Whatsapp

ಬೆಂಗಳೂರು (ನ.06): ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂವೀಲರ್‌ಗಳೇ ಇವ್ರ ಟಾರ್ಗೆಟ್. ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್ ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು! 

Add Asianetnews Kannada as a Preferred SourcegooglePreferred

ಹೌದು, ನೀವೀಗ ನೋಡ್ತಿರೋ ಸಿಸಿಟಿವಿ ದೃಶ್ಯಗಳು ಸಿಲಿಕಾನ್ ಸಿಟಿಯ ಮಾನ್ಯತಾ ಟೆಕ್ ಪಾರ್ಕ್ ಬಳಿಯಲ್ಲಿರೋ ನಂದಗೋಕುಲ ಬಡಾವಣೆಯದ್ದು. ರಜೆ ದಿನಗಳಲ್ಲಿ ಇಲ್ಲಿ ಜನ ಸಂಚಾರ ಕಡಿಮೆ ಇರುತ್ತೆ. ಮೂರು ಜನ ಯುವಕರ ಗುಂಪು ಅಲ್ಲೇ ದೂರದಲ್ಲಿದ್ದ ಬಾಡಿಗೆ ಟೂವೀಲರ್ ಗಾಡಿಯನ್ನ ತಳ್ಳಿಕೊಂಡು ಬಂದು ಎರಡು ಲೀಟರ್ ವಾಟರ್ ಬಾಟಲ್‌ಗೆ ಬೌನ್ಸ್ ಗಾಡಿಯಲ್ಲಿದ್ದ ಪೆಟ್ರೋಲ್ ಅನ್ನ ಕದಿಯುತ್ತಿರೋ ದೃಶ್ಯಗಳು ಇವು. 

ಇದನ್ನೂ ವೀಕ್ಷಿಸಿ | ನೀವು ಮೈಮರೆತರೆ ಮನೆ ಮುಂದೆಯೇ ಹೆಣ್ಮಗು ಕದಿತಾರೆ! CCTVಯಲ್ಲಿ ದೃಶ್ಯ ಸೆರೆ...

ಸ್ಕೂಟರ್ ಇಂಜಿನ್ ಕೆಳಗೆ ಪೆಟ್ರೋಲ್ ಪೈಪ್ ಕಿತ್ತು ಇವ್ರ ತಂದಿರೋ ಪೈಪ್ ಹಾಕಿ ಪೆಟ್ರೋಲ್ ಕದಿಯುತ್ತಾರೆ. ಇಷ್ಟು ಆರಾಮವಾಗಿ ಪೆಟ್ರೋಲ್ ಕದಿಯೋ ಇವ್ರು ಪಾರ್ಕಿಂಗ್ ಮಾಡಿರೋ ನಿಮ್ಮ ಗಾಡಿಗಳಲ್ಲಿ ಪೆಟ್ರೋಲ್ ಕದಿಯೋದಿಲ್ಲ ಅನ್ನೋದಕ್ಕೆ ಏನ್ ಗ್ಯಾರೆಂಟಿ. 

ಇವತ್ತು ಪೆಟ್ರೋಲ್ ಕದಿಯುತ್ತಿರೋರು ಮುಂದೆ ಬೈಕ್ ಗಳನ್ನ ಎಗರಿಸೋದಿಲ್ಲ ಅಂತಾ ಹೇಳೋದಕ್ಕೆ ಆಗೋಲ್ಲ.. ಪೊಲೀಸ್ರು ಇವ್ರನ್ನ ಅದಷ್ಟು ಬೇಗ ಮಟ್ಟಹಾಕಬೇಕು.

Related Video