ರಾಜ್ಯದ ಎಲ್ಲಾ ವಿಭಾಗಗಳಲ್ಲಿ KSRTCಯಿಂದ ‘ಸ್ಯಾನಿಟೈಸರ್‌ ಬಸ್‌’!

ಕೊರೋನಾ: ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಕೆಎಸ್ಸಾರ್ಟಿಸಿಯಿಂದ ‘ಸ್ಯಾನಿಟೈಸರ್‌ ಬಸ್‌’!| ಈ ಬಸ್‌ನಲ್ಲೇ ನಿಲ್ದಾಣಗಳಿಗೆ ಪ್ರವೇಶ ಕಡ್ಡಾಯ| ಸೋಂಕು ನಿವಾರಕ ದ್ರಾವಣ ಸಿಂಪಡಿಸಲಿರುವ ಬಸ್‌

KSRTC To Start Sanitiser Bus Facility In Each Section

ಬೆಂಗಳೂರು(ಏ.04): ಕೆಟ್ಟು ನಿಂತಿರುವ ಬಸ್‌ಗಳನ್ನು ಕೊರೋನಾ ಸೋಂಕು ತಡೆಗಟ್ಟಲು ‘ಸ್ಯಾನಿಟೈಸರ್‌ ಬಸ್‌’ಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಬೆಂಗಳೂರು ಘಟಕದಲ್ಲಿ ಮೊದಲ ಬಸ್‌ ಸಿದ್ಧವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.

ಬಸ್‌ ನಿಲ್ದಾಣಕ್ಕೆ ಬರುವ ಸಿಬ್ಬಂದಿಗಳು, ಪ್ರಯಾಣಿಕರು ಸಾನಿಟೈಸರ್‌ ಬಸ್‌ ಹಾದು ಹೋಗುವುದು ಕಡ್ಡಾಯವಾಗಲಿದೆ. ಸೋಂಕು ನಿವಾರಕ ದ್ರಾವಣವನ್ನು ‘ಸ್ಯಾನಿಟೈಸರ್‌ ಬಸ್‌’ ಸಿಂಪಡೆಣೆ ಮಾಡಲಿದೆ.

ಅಂಗಡಿಗಳಿಗೆ ಅಕ್ಕಿ, ಬೇಳೆ, ಬಿಸ್ಕತ್‌ ಪೂರೈಕೆ ಕೊರತೆ!

ಶುಕ್ರವಾರ ಶಾಂತಿನಗರದ ನಿಗಮದ ಕೇಂದ್ರೀಯ ವಿಭಾಗ ಡಿಪೋದಲ್ಲಿ ಆಯೋಜಿಸಿದ್ದ ವಿಭಾಗೀಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಸಾನಿಟೈಸರ್‌ ಸುರಂಗ ಮಾದರಿಯಲ್ಲಿಯೇ ಕೆಟ್ಟು ನಿಂತಿರುವ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಸ್ಯಾನಿಟೈಸರ್‌ ಬಸ್ಸುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಸ್ಯಾನಿಟೈಸರ್‌ ಬಸ್ಸು ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಬಸ್‌ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘ಇದೇ ರೀತಿ ರಾಜ್ಯದ ಎಲ್ಲಾ ಕೆಎಸ್‌ಆರ್‌ಟಿಸಿ ವಿಭಾಗಗಳಲ್ಲಿಯೂ ‘ಸ್ಯಾನಿಟೈಸರ್‌ ಬಸ್‌’ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಬಸ್‌ ನಿಲ್ದಾಣಕ್ಕೆ ಬರುವ ಸಿಬ್ಬಂದಿಗಳು, ಪ್ರಯಾಣಿಕರು ಸಾನಿಟೈಸರ್‌ ಬಸ್‌ ಹಾದು ಹೋಗುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.

ಮೊದಲ ಬಾರಿ ಹೋಂ ಮೇಡ್ ಮಾಸ್ಕ್ ಧರಿಸಿದ ಮೋದಿ, ಮಹತ್ವದ ಸಂದೇಶ ರವಾನೆ!

ಲಾಕ್‌ಡೌನ್‌ ತೆರವಾದ ಜಿಲ್ಲೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಬಸ್‌ ಕಾರ್ಯಾಚರಣೆ ಮಾಡಬೇಕಾಗಬಹುದು. ಹಾಗಾಗಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕು. ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಸ್ಕ್‌ಗಳನ್ನು ಸಾಕಷ್ಟುಸಂಖ್ಯೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios