ಬೈಕ್ ಸಂಚಾರ ಸೇರಿದಂತೆ ಐಟಿ, ಬಿಟಿ ಕಂಪನಿಗಳ ರೀ ಓಪನ್‌ಗೆ ಒಪ್ಪಿಗೆ ನೀಡಿ ಲಾಕ್‌ಡೌನ್ ರಿಲ್ಯಾಕ್ಸ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಪಡೆದುಕೊಂಡಿದೆ.

ಬೆಂಗಳೂರು, (ಏ.18): ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸದ ಮಧ್ಯೆ ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಅದನ್ನು ವಾಪಸ್ ಪಡೆದಿದೆ.

ಇದುವರೆಗೂ ಲಾಕ್‌ಡೌನ್ ಹೇಗಿತ್ತೋ ಅದೇ ಮಾದರಿಯಲ್ಲಿ ಇರಲಿದೆ ಎಂದು ರಾಜ್ಯ ಸರ್ಕಾರ ಮರು ಪ್ರಕಟಣೆ ಹೊರಡಿಸಿದೆ.

ಬಿಎಸ್‌ವೈ ಸುದ್ದಿಗೋಷ್ಠಿ: ರಾಜ್ಯದಲ್ಲಿ ಲಾಕ್‌ಡೌನ್ ಭಾಗಶಃ ಸಡಿಲ...!

ಇಂದು (ಶನಿವಾರ) ಸಿಎಂ ಬಿಎಸ್ ಯಡಿಯೂರಪ್ಪ ಅವರು ತಜ್ಞರ ಸಭೆ ಬಳಿಕ, ಬೈಕ್ ಸಂಚಾರ, ಐಟಿ, ಬಿಟಿ ಕಂಪನಿಗಳು ಓಪನ್‌ ಮಾಡುವುದು ಸೇರಿದಂತೆ ಕೆಲವೊಂದಕ್ಕೆ ಅನುಮತಿ ನೀಡಿದ್ದರು. ಇದು ಸಾರ್ವಜನಕರಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು.

ಅಲ್ಲದೇ ನಿಮ್ಮ ಸುವರ್ಣನ್ಯೂಸ್ ಲಾಕ್‌ಡೌನ್ ಸಡಿಲಿಕೆ ಸರಿ ನಾ? ಎನ್ನುವ ವಿಷಯನ್ನಿಟ್ಟುಕೊಂಡು ಫೋನ್ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿತ್ತು. ಈ ವೇಳೆ ಎಲ್ಲರೂ ಇದು ಸರಿಯಾದ ನಿರ್ಧಾರವಲ್ಲ, ಯಡಿಯೂರಪ್ಪನವರು ತಪ್ಪು ಮಾಡುತ್ತಿದ್ದಾರೆ ಅಂತೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

ಇದರಿಂದ ಎಚ್ಚೆತ್ತ ಬಿಎಸ್‌ವೈ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತಮ್ಮ ನಿರ್ಧಾರಗಳನ್ನು ಹಿಂಪಡೆದಿದ್ದಾರೆ.

ಮೇ 3 ರವರೆಗೂ ದೇಶದಲ್ಲಿ ಲಾಕ್‌ಡೌನ್ ಮುಂದುವರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಂಡಿದ್ದಾರೆ. ಆದ್ರೆ ಇಂದು ರಾಜ್ಯದಲ್ಲಿ ಏಕಾಏಕಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುದ್ದಿಗೋಷ್ಟಿ ನಡೆಸಿ ರಿಲ್ಯಾಕ್ಸ್ ನಿರ್ಧಾರ ಪ್ರಕಟಿಸಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು.

ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತ ಬಿಎಸ್‌ವೈ ನೇತೃತ್ವದ ಸರ್ಕಾರ, ಸಡಿಲಿಕೆ ನೀಡಿದ್ದನ್ನು ವಾಪಸ್‌ ಪಡೆದಿದ್ದು, ಲಾಕ್‌ಡೌನ್ ಮಾರ್ಗಸೂಚಿಗಳು ಯಥಾವತ್ ಆಗಿ ಮುಂದುವರಿಯಲಿವೆ.

Scroll to load tweet…

ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನಗಳು ಇಂತಿವೆ..
1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ.

2. ಐ.ಟಿ.ಬಿ.ಟಿ. ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ (Work from Home)ನೀತಿಯನ್ನು ಮುಂದುವರೆಸಲಾಗುವುದು.