36 ತಾಸು ಕರ್ನಾಟಕ ಫುಲ್ ಲಾಕ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ
ಇಂದು ಫುಲ್ ಲಾಕ್!| ನಾಳೆ ಬೆಳಗ್ಗೆ 7ರವರೆಗೆ 36 ತಾಸುಗಳ ‘ಕಫä್ರ್ಯ’| ಅಗತ್ಯ ವಸ್ತು, ಸೇವೆ ಲಭ್ಯ| ಸಂಚಾರ ನಿಷಿದ್ಧ| ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ
ಬೆಂಗಳೂರು(ಮೇ..24): ‘ಲಾಕ್‌ಡೌನ್ 4.0’ ಸಡಿಲಿಸಿದ ನಂತರ ಮೊದಲ ಬಾರಿಗೆ ಭಾನುವಾರ ಇಡೀ ದಿನ ರಾಜ್ಯಾದ್ಯಂತ ಪೂರ್ಣ ಪ್ರಮಾಣದ ಲಾಕ್‌ಡೌನ್ ಜಾರಿಯಾಗಲಿದೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ವಾಸ್ತವವಾಗಿ ಶನಿವಾರ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಗ್ಗೆ ಏಳರವರೆಗೆ 36 ಗಂಟೆಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬಂದಿದೆ.
ವಾರದ ರಜೆಯಾಗಿರುವುದರಿಂದ ಜನರು ಪ್ರಯಾಣ ಮಾಡುವುದು, ವಾಣಿಜ್ಯ ಪ್ರದೇಶ ಸೇರಿದಂತೆ ವಿವಿಧ ಕಡೆ ಸಂಚರಿಸುವುದನ್ನು ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್ ಜಾರಿಗೆ ತರಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ, ಆಟೋ, ಟ್ಯಾಕ್ಸಿ, ರೈಲ್ವೆ ಸೇವೆ, ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ. ಖಾಸಗಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿರುತ್ತದೆ. ಆದರೆ ಈ ಮೊದಲೇ ನಿಗದಿಯಾಗಿರುವ ವಿವಾಹ ಸಮಾರಂಭಗಳನ್ನು ಷರತ್ತಿನ ಮೇರೆಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಶ್ರಮಿಕ್ ವಿಶೇಷ ರೈಲು ಸಂಚಾರ, ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿದೇಶದಿಂದ ವಿಮಾನಗಳ ಆಗಮನ ಇರಲಿದೆ.
ಈ ಹಿಂದೆ ಇದ್ದಂತೆ ಅನೇಕ ಕಡೆ ವಾಹನಗಳ ಸಂಚಾರ ನಿರ್ಬಂಧ, ಏಕಮುಖ ರಸ್ತೆ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಅನವಶ್ಯಕವಾಗಿ ಸಂಚರಿಸುವ ವಾಹನಗಳ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಏಕದಿನದ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು ಮುಂದಾಗಿವೆ.
ಚೀನಾದಲ್ಲಿ ಕೊರೋನಾ ಲಸಿಕೆ ಮೊದಲ ಪ್ರಯೋಗ ಯಶಸ್ವಿ!
ಏನೇನಿರುತ್ತದೆ?
* ಹೂವು, ಹಾಲು, ತರಕಾರಿ, ದಿನಸಿ, ದಿನ ಪತ್ರಿಕೆ
* ಆಸ್ಪತ್ರೆಗಳು, ಔಷಧ ಅಂಗಡಿಗಳು
* ಹೋಟೆಲ್‌ಗಳಲ್ಲಿ ಪಾರ್ಸಲ್ ಸೇವೆ, ಮಾಂಸದ ಅಂಗಡಿ
* ಆರೋಗ್ಯ ತುರ್ತು ಸೇವೆ ಬಸ್, ಆಂಬ್ಯುಲೆನ್ಸ್
* ಆನ್‌ಲೈನ್ ಮೂಲಕ ತಿಂಡಿ, ತಿನಿಸು
* ಅಡುಗೆ ಅನಿಲ ಪೂರೈಕೆ
ಕೊರೋನಾ ರಣಕೇಕೆ: ರಾಜ್ಯದಲ್ಲಿ ಒಂದೇ ದಿನ 216 ಕೇಸ್, ಹೊರರಾಜ್ಯದವರ ಪಾಲು 196!
ಏನು ಇರಲ್ಲ?
* ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ
* ಮದ್ಯ ಮಾರಾಟ
* ಕೈಗಾರಿಕೆಗಳು, ಉದ್ಯಮಗಳು
* ಪ್ರಯಾಣಿಕರ ಬಸ್, ರೈಲ್ವೆ
* ಆಟೋ, ಟ್ಯಾಕ್ಸಿ
* ಉದ್ಯಾನವನ, ಆಯ್ದ ಕ್ರೀಡಾ ತರಬೇತಿ