Asianet Suvarna News Asianet Suvarna News

ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಕೋಳಿ ಮಾಂಸ ಬೆಲೆ ಏರಿಕೆ!

ಚಿಕನ್‌ ಕೆ.ಜಿಗೆ 40ರಿಂದ 50ರು. ಏರಿಕೆ| ನಷ್ಟದಲ್ಲಿದ್ದ ಕುಕ್ಕಟೋದ್ಯಮ ಚೇತರಿಕೆಯತ್ತ| ಕೋಳಿ ಮಾಂಸದ ಬೆಲೆ ಶೇ 35-50ರಷ್ಟುಏರಿಕೆ

Amid Of Lockdown Relaxation Chicken Price Increases
Author
Bangalore, First Published May 20, 2020, 7:18 AM IST

ಬೆಂಗಳೂರು(ಮೇ.20): ಕೋವಿಡ್‌-19 ಹಾಗೂ ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರು. ನಷ್ಟಅನುಭವಿಸಿದ್ದ ಕುಕ್ಕಟೋದ್ಯಮ ಇದೀಗ ಚೇತರಿಸಿಕೊಳ್ಳುತ್ತಿದ್ದು, ಕೋಳಿ ಮಾಂಸದ ಹೋಲ್‌ಸೇಲ್‌ ಮತ್ತು ಚಿಲ್ಲರೆ ಮಾರುಕಟ್ಟೆದರದಲ್ಲಿ ಶೇ.35ರಿಂದ 50ರಷ್ಟುಏರಿಕೆ ಕಂಡಿದೆ.

ಲಾಕ್‌ಡೌನ್‌ಗೂ ಮೊದಲು ಹೋಲ್‌ಸೇಲ್‌ ಮಾರಾಟದಲ್ಲಿ ಬಾಯ್ಲರ್‌ ಕೋಳಿ ಕೆಜಿಗೆ 80ರಿಂದ 90 ರು. ಮತ್ತು ಮೊಟ್ಟೆಕೋಳಿ ಕೆಜಿಗೆ 60ರಿಂದ 70 ರು.ಇತ್ತು. ಹಾಗೆಯೇ ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಯ್ಲರ್‌ ಕೋಳಿ ಕೆಜಿಗೆ 120ರಿಂದ 130 ಮತ್ತು ಮೊಟ್ಟೆಕೋಳಿಗೆ 95ರಿಂದ 100 ರು.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಹೋಲ್‌ಸೇಲ್‌ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಶೇ.35ರಿಂದ 50ರಷ್ಟುಹೆಚ್ಚಳವಾಗಿದೆ.

ಆತಂಕ ಮೂಡಿಸಿದ ವಿದೇಶಿ ಹಕ್ಕಿ ಸಾವು, ಪತ್ತೆಯಾಗದ ಕಾರಣ

ಪ್ರಸ್ತುತ ಕೋಳಿ ಕೆ.ಜಿಗೆ ಹೋಲ್‌ಸೇಲ್‌ ದರ 125ರಿಂದ 130 ರು. ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಕೆ.ಜಿ ಬಾಯ್ಲರ್‌ ಕೋಳಿ(ಮಾಂಸದ ಕೋಳಿ)ಗೆ 155ರಿಂದ 170 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಪ್ರತಿ ಕೆ.ಜಿ ಕೋಳಿಗೆ 180 ರು.ನಿಂದ 190 ರು.ನಂತೆ ಮಾರಾಟವಾಗುತ್ತಿದೆ. ರೆಡಿ ಚಿಕನ್‌ಗೆ ಪ್ರತಿ ಕೆ.ಜಿಗೆ 220ರಿಂದ 230 ರು. ಇದೆ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಶೇ.50ರಷ್ಟುಉತ್ಪಾದನೆ ಕುಸಿತ

ಕಳೆದ ಮೂರು ತಿಂಗಳನಿಂದ ಹಕ್ಕಿಜ್ವರ ಮತ್ತು ಕೊರೋನಾ ಭೀತಿಯಲ್ಲಿ ಕುಕ್ಕುಟೋದ್ಯಮದಲ್ಲಿ ಶೇ.80ರಷ್ಟುಕುಸಿತವಾಗಿತ್ತು. ಇತ್ತೀಚೆಗೆ ಉದ್ಯಮ ಚೇತರಿಸಿಕೊಳ್ಳುತ್ತಿದ್ದರೂ ಶೇ.45ರಿಂದ 50ರಷ್ಟುರೈತರು ಕೋಳಿ ಸಾಕಾಣಿಕೆಯಿಂದ ದೂರ ಉಳಿದಿದ್ದಾರೆ. ಹೀಗಾಗಿ ಕೋಳಿ ಮಾಂಸ ಉತ್ಪಾದನೆಯಲ್ಲಿ ಶೇ.50ರಷ್ಟುಕುಸಿತ ಕಂಡಿದೆ. ಈ ನಡುವೆ ಹೋಟೆಲ್‌, ರೆಸ್ಟೋರೆಂಟ್‌, ಮಾಲ್‌ಗಳು ಬಂದ್‌ ಆಗಿದ್ದರೂ ಕೋಳಿ ಮಾಂಸದ ಬೇಡಿಕೆ ಕಡಿಮೆಯಾಗಿಲ್ಲ ಎಂದು ಆರ್‌.ಟಿ.ನಗರದ ಕೋಳಿ ಮಾಂಸದ ವ್ಯಾಪಾರಿ ನೂರುಲ್ಲಾಖಾನ್‌ ತಿಳಿಸಿದ್ದಾರೆ.

ಕೇರಳದಿಂದ ಬಂದ 1 ಕೋಳಿಯಿಂದ ಮಂಡ್ಯದಲ್ಲಿ ಹಕ್ಕಿಜ್ವರ

ಹಕ್ಕಿಜ್ವರದ ಗಾಳಿ ಸುದ್ದಿಗೂ ಮೊದಲು ಕುರಿ ಮಾಂಸಕ್ಕೆ ಕೆಜಿಗೆ ಕೇವಲ 450ರಿಂದ 500 ರು.ಇತ್ತು. ಆ ನಂತರ 850ರಿಂದ 900 ರು.ಗಳಿಗೆ ಏರಿಕೆ ಮಾಡಲಾಗಿತ್ತು. ಬಿಬಿಎಂಪಿ ಮಧ್ಯಪ್ರವೇಶದಿಂದ ಇದೀಗ 700 ರು.ನಿಗದಿ ಪಡಿಸಲಾಗಿದೆ. ಮಟನ್‌ ಬೆಲೆ ಏರಿಕೆಯೂ ಕೂಡ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಲು ಕಾರಣ.

- ದೇವರಾಜ್‌, ಕೋಳಿ ಮಾಂಸದ ವ್ಯಾಪಾರಿ, ಎಚ್‌ಎಸ್‌ಆರ್‌ ಲೇಔಟ್‌

Follow Us:
Download App:
  • android
  • ios