Asianet Suvarna News Asianet Suvarna News

ರಾಜ್ಯದಲ್ಲಿ ಕೇವಲ 6 ಹೊಸ ಕೇಸು, 10 ದಿನದಲ್ಲೇ ಅತಿ ಕಡಿಮೆ!

ರಾಜ್ಯದಲ್ಲಿ ಮತ್ತೆರಡು ಬಲಿ| ಬೆಂಗಳೂರು, ಮಂಗಳೂರಲ್ಲಿ ಮಹಿಳೆಯರು ಸಾವು| ಕೇವಲ 6 ಹೊಸ ಕೇಸು|10 ದಿನದಲ್ಲೇ ಅತಿ ಕಡಿಮೆ

6 New coronavirus cases in Karnataka toll reaches to 360
Author
Bangalore, First Published Apr 20, 2020, 7:12 AM IST

ಬೆಂಗಳೂರು(ಏ.20): ರಾಜ್ಯದಲ್ಲಿ ಭಾನುವಾರ ಕಳೆದ ಹತ್ತು ದಿನಗಳಲ್ಲೇ ಅತಿ ಕಡಿಮೆ ಅಂದರೆ ಕೇವಲ ಆರು ಕೊರೋನಾ ಸೋಂಕು ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಆದರೆ, ಈ ಸಮಾಧಾನಕರ ಸಂಗತಿ ನಡುವೆಯೂ ಮತ್ತಿಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಮೃತರ ಸಂಖ್ಯೆ 16ಕ್ಕೆ ಏರಿಕೆಯಾದರೆ, ಒಟ್ಟು ಸೋಂಕಿತರ ಸಂಖ್ಯೆ 390 ಆಗಿದೆ.

ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಮಹಿಳೆಯರು ಸೋಂಕಿನಿಂದ ಮೃತಪಟ್ಟಿದ್ದು, ಇದರಿಂದ ಬೆಂಗಳೂರಿನಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾದರೆ, ದಕ್ಷಿಣ ಕನ್ನಡದಲ್ಲಿ ಮೊದಲ ಸಾವು ಸಂಭವಿಸಿದಂತಾಗಿದೆ.

ಬ್ರೆಕಿಂಗ್: ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 65 ವರ್ಷದ ಬೆಂಗಳೂರಿನ ಮೃತ ಮಹಿಳೆಗೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಅವರಿಗೆ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗಿತ್ತು. ಮೃತಪಟ್ಟ50 ವರ್ಷದ ಮತ್ತೊಬ್ಬ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದವರಾಗಿದ್ದು, ಅವರು ಕೂಡ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬಂದಾಗ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು. ಅವರಿಗೆ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

10 ದಿನದಲ್ಲೇ ಕನಿಷ್ಠ ಪ್ರಕರಣ:

ಭಾನುವಾರ ಮೈಸೂರಿನಲ್ಲಿ ನಾಲ್ಕು, ದಕ್ಷಿಣ ಕನ್ನಡದಲ್ಲಿ ಎರಡು ಹೊಸ ಪ್ರಕರಣ ಸೇರಿ ಕೇವಲ ಆರು ಪ್ರಕರಣಗಳು ಮಾತ್ರ ದೃಢಪಟ್ಟಿವೆ. ಇದು ಕಳೆದ ಹತ್ತು ದಿನಗಳಲ್ಲೇ ಅತಿ ಕಡಿಮೆ ಸಂಖ್ಯೆಯ ಪ್ರಕರಣವಾಗಿದೆ. ಏ.8ರಂದು ಕೂಡ ಕೇವಲ ಆರು ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ದಿನೇ ದಿನೇ ಏರುತ್ತಲೇ ಸಾಗಿದ್ದ ಸೋಂಕಿತರ ಸಂಖ್ಯೆ ಶುಕ್ರವಾರ ಒಂದೇ ದಿನ 44ರ ಗರಿಷ್ಠವನ್ನು ತಲುಪಿತ್ತು. ನಂತರ ಶನಿವಾರ ಪತ್ತೆಯಾದ ಪ್ರಕರಣಗಳ ಸಂಖ್ಯೆ 25ಕ್ಕೆ ಇಳಿದಿತ್ತು. ಇದೀಗ ಭಾನುವಾರ ಆರು ಪ್ರಕರಣಗಳು ಮಾತ್ರ ಪತ್ತೆಯಾಗಿರುವುದು ಇನ್ನಷ್ಟುಸಮಾಧಾನ ಮೂಡಿಸಿದೆ.

ಮೈಸೂರಿನ ನಾಲ್ಕರಲ್ಲಿ ಎರಡು ಪ್ರಕರಣ ದೆಹಲಿ ಪ್ರಯಾಣದಿಂದ, ಇನ್ನೆರಡು ಪ್ರಕರಣ ಸೋಂಕಿತರ ದ್ವಿತೀಯ ಸಂಪರ್ಕದ್ದಾಗಿವೆ. ದಕ್ಷಿಣ ಕನ್ನಡದ ಎರಡು ಪ್ರಕರಣಗಳಲ್ಲಿ ಒಂದು ಉಸಿರಾಟದ ತೊಂದರೆಯಿಂದ ಪತ್ತೆಯಾದರೆ, ಮತ್ತೊಂದು ದ್ವಿತೀಯ ಸಂಪರ್ಕದಿಂದ ದೃಢಪಟ್ಟಿದ್ದಾಗಿದೆ.

ಡಿಸ್ಚಾಜ್‌ರ್‍ ಆದವರು 111 ಜನ:

ಭಾನುವಾರ ಮತ್ತೆ ಏಳು ಜನರು ಕೋವಿಡ್‌ ವೈರಸ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇದರೊಂದಿಗೆ ಒಟ್ಟು 390 ಸೋಂಕಿತರ ಪೈಕಿ ಇದುವರೆಗೆ ಡಿಸ್ಚಾಜ್‌ರ್‍ ಆದವರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಉಳಿದ 263 ಜನರು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೆಡೆ ಗುಣಮುಖರಾದವರಲ್ಲಿ ಕೆಲವರಿಗೆ ಮತ್ತೆ ಸೋಂಕು ಪತ್ತೆಯಾದ ಪ್ರಕರಣಗಳು ವರದಿಯಾಗಿರುವುದರಿಂದ ಬಿಡುಗಡೆಯಾದವರು ಮುಂದಿನ 14 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶವವ್ಯಾಪಿ ಲಾಕ್‌ಡೌನ್‌ ಭಾಗಶಃ ಓಪನ್‌: ಏನೇನು ಶುರು?

ಇನ್ನು, ರಾಜ್ಯದಲ್ಲಿ ಇದುವರೆಗೆ ಒಟ್ಟು 21,367 ಮಾದರಿಗಳ ಪರೀಕ್ಷೆ ಮಾಡಲಾಗಿದ್ದು, ಅವುಗಳಲ್ಲಿ 1762 ಪ್ರಕರಣಗಳು ನೆಗೆಟಿವ್‌, 390 ಜನರಿಗೆ ಪಾಸಿಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕದ 3873 ಜನ ಮತ್ತು ದ್ವಿತೀಯ ಸಂಪರ್ಕದ 9673 ಜನರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಿ ನಿಗಾ ವಹಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಸೋಂಕಿತರಲ್ಲಿ ಶೇ.72 ಜನ ಪುರುಷರು

ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕು ದೃಢಪಟ್ಟ390 ಜನರ ಪೈಕಿ ಶೇ.72ರಷ್ಟುಜನ ಪುರುಷರಾಗಿದ್ದು, ಉಳಿದ ಶೇ.28ರಷ್ಟುಜನರು ಮಹಿಳೆಯಾಗಿದ್ದಾರೆ. ಅಲ್ಲದೆ, ಒಟ್ಟು ಪ್ರಕರಣಗಳಲ್ಲಿ ಶೇ.16.24ರಷ್ಟುಜನರು ಹಿರಿಯ ನಾಗರಿಕರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ.

Follow Us:
Download App:
  • android
  • ios