Asianet Suvarna News Asianet Suvarna News

ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ!

 ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.5ರಷ್ಟುಭಾಗ ಜಲಾವೃತಗೊಂಡು ಪ್ರಾಣಿಗಳು ಚೆಲ್ಲಾಪಿಲ್ಲಿ| ಪ್ರವಾಹ ಪೀಡಿತ ಕಾಜಿರಂಗ ವನ್ಯದಿಂದ ತಪ್ಪಿಸಿಕೊಂಡ ಹುಲಿ ಮನೆಯಲ್ಲಿ ವಿಶ್ರಾಂತಿ| 

Tiger escapes Assam flooded Kaziranga Park takes shelter in a house
Author
Bangalore, First Published Jul 19, 2019, 9:17 AM IST

ನವದೆಹಲಿ[ಜು.19]: ಭಾರೀ ಪ್ರಮಾಣದ ಮುಂಗಾರು ಮಳೆಯಿಂದ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.5ರಷ್ಟುಭಾಗ ಜಲಾವೃತಗೊಂಡು ಪ್ರಾಣಿಗಳು ಚೆಲ್ಲಾಪಿಲ್ಲಿಯಾದ ಬೆನ್ನಲ್ಲೇ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಎದುರಾದ ಭಾರೀ ಪ್ರವಾಹಕ್ಕೆ ತತ್ತರಿಸಿದ ಹುಲಿಯೊಂದು ರಕ್ಷಿತಾರಣ್ಯದ ಪಕ್ಕದಲ್ಲೇ ಇರುವ ಮನೆಯೊಂದಕ್ಕೆ ಲಗ್ಗೆ ಇಟ್ಟಿದೆ.

ಭಾರತದ ವನ್ಯಜೀವಿ ಟ್ರಸ್ಟ್‌ ಟ್ವೀಟ್‌ ಮಾಡಿದ ಈ ಫೋಟೋದಲ್ಲಿ ಮನೆಯೊಳಕ್ಕೆ ನುಗ್ಗಿರುವ ವ್ಯಾಘ್ರವೊಂದು ಬೆಡ್‌ ಮೇಲೆ ರಿಲ್ಯಾಕ್ಸ್‌ ಮೂಡ್‌ನಲ್ಲಿರುವಂತೆ ಗೋಚರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ.

ಅಲ್ಲದೆ, ಕತ್ತಲಾಗುವವರೆಗೂ ಕಾದು ಆ ಬಳಿಕ ಮನೆಯ ಬೆಡ್‌ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹುಲಿಗೆ ಕಾಡಿಗೆ ಬಿಡಲಾಗುತ್ತದೆ ವೈಲ್ಡ್‌ಲೈಫ್‌ ಟ್ರಸ್ಟ್‌ ಆಫ್‌ ಇಂಡಿಯಾ ತಿಳಿಸಿದೆ.

Follow Us:
Download App:
  • android
  • ios