Asianet Suvarna News Asianet Suvarna News

ಮುಂಬೈ ಮಳೆಗೆ ಸಿಕ್ಕಿಬಿದ್ದ ಪೇಜಾವರ ಶ್ರೀಗಳಿಗೆ ಮುಸ್ಲಿಂ ಟ್ಯಾಕ್ಸಿ ಚಾಲಕ ಸಹಾಯ!

ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಮಳೆಯಲ್ಲಿ ಸಿಲುಕಿದ್ದ ಪೇಜಾವರ ಶ್ರೀಗಳಿಗೆ ಮುಸ್ಲಿಂ ಟ್ಯಾಕ್ಸಿ ಚಾಲಕರೋರ್ವರು ಸಹಾಯ ಹಸ್ತ ಚಾಚಿದ್ದಾರೆ. 

Mumbai Rain Kannadiga muslim Taxi Driver helps Pejawar Sri
Author
Bengaluru, First Published Jul 3, 2019, 7:47 AM IST

ಉಡುಪಿ [ಜು.3]: ಮುಂಬಯಿ ಮಹಾನಗರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಈ ಸಂದರ್ಭ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ನಗರದ ಬೊರಿವಲಿ ರೈಲು ನಿಲ್ದಾಣದಲ್ಲಿ ಕೆಲಹೊತ್ತು ಬಾಕಿಯಾಗಿದ್ದರು. ಕೊನೆಗೆ ಕನ್ನಡಿಗ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಸುರಕ್ಷಿತವಾಗಿ ಡೊಂಬಿವಿಲಿಗೆ ತಲುಪಿಸಿದ ಘಟನೆ ನಡೆದಿದೆ.

ಪೇಜಾವರ ಶ್ರೀಗಳು ಬರೋಡಾದಿಂದ ಡೊಂಬಿವಿಲಿಗೆ ರೈಲಿನಲ್ಲಿ ಪ್ರಯಾಣಿಸುತಿದ್ದರು. ಅವರಿಗೆ ಮಧ್ಯಾಹ್ನ 3ಕ್ಕೆ ಡೊಂಬಿವಿಲಿಯ ಕಾರ್ಯಕ್ರಮವೊಂದರಲ್ಲಿ »ಗವಹಿಸಬೇಕಾಗಿತ್ತು. ಆದರೆ ಭಾರೀ ಮಳೆಯಿಂದಾಗಿ ಸುಮಾರು 50 ಕಿ.ಮೀ.ನಷ್ಟುಹಿಂದೆ ಬೊರಿವಿಲಿಯಲ್ಲಿ ರೈಲು ಮುಂದಕ್ಕೆ ಹೋಗಲಾಗದೇ ನಿಂತುಬಿಟ್ಟಿತು. 

ಆಗ 8 ಗಂಟೆಯಾಗಿತ್ತು. ಕೊನೆಗೆ ಟ್ಯಾಕ್ಸಿಯಲ್ಲಿ ಡೊಂಬಿವಿಲಿಗೆ ಹೊರಡಲು ಶ್ರೀಗಳು ಸಿದ್ಧರಾದಾಗ ಮಳೆಯಿಂದಾಗಿ ಅಲ್ಲಿನ ಟ್ಯಾಕ್ಸಿ ಚಾಲಕರು ಒಪ್ಪಲಿಲ್ಲ. ಆಗ ಅವರನ್ನು ಗುರುತಿಸಿ ಕರ್ನಾಟಕದ ಕಲಬುರಗಿಯ ಟ್ಯಾಕ್ಸಿ ಚಾಲಕ ಶರ್ಫುದ್ದೀನ್‌ ಮಲಿಕ್‌ ಶ್ರೀಗಳನ್ನು ಡೊಂಬಿವಿಲಿಗೆ ತಲುಪಿಸಲು ಮುಂದೆ ಬಂದರು. ಮಾತ್ರವಲ್ಲದೆ ಭಾರೀ ಮಳೆಯಲ್ಲಿಯೂ ಶ್ರೀಗಳನ್ನು 12 ಗಂಟೆಗೆ ಡೊಂಬಿವಿಲಿಗೆ ತಲುಪಿಸಿದರು.

Follow Us:
Download App:
  • android
  • ios