ನನ್ನ ಪರ ಸಮರ್ಥನೆ ಮಾಡಿಕೊಳ್ಳಲು ನಿಮ್ಮ ಚಾನೆಲ್​ ಅವಕಾಶ ಕೊಡ್ತಿಲ್ಲ ಎಂದು ಆರೋಪಿಸಿರುವ  ಸಚಿವರು,  ನಿಮ್ಮ ಚಾನೆಲ್​'ಗೆ ನಾನು ಬರೋದಿಲ್ಲ, ನನಗೆ ನಿಮ್ಮ ಚಾನೆಲ್​ ಬೇಕಾಗಿಲ್ಲ.  ನಿಮ್ಮ ಚಾನೆಲ್'​ಗೆ ತಾಕತ್ತಿದ್ದರೆ ನಾನು ಹೇಳಿದ್ದನ್ನು ಕಟ್​ ಮಾಡದೇ ತೋರಿಸಿ ಎಂದು  ಸುವರ್ಣ ಸೌಧದಲ್ಲಿ  ಸಚಿವರು ಸವಾಲು ಹಾಕಿದ್ದಾರೆ. ಸವಾಲಿನಂತೆ ಸುವರ್ಣ ನ್ಯೂಸ್'ನಲ್ಲಿ ಸಚಿವರು ಹೇಳಿದ್ದನ್ನೆಲ್ಲ ಎಡಿಟ್​ ಮಾಡದೇ ತೋರಿಸುತ್ತಿದ್ದೇವೆ.

ಬೆಳಗಾವಿ (ನ.24): ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕುಲಕರ್ಣಿ ಪ್ರತಿಕ್ರಿಯಿಸಿದ್ದು ನಿಮ್ಮ ಚಾನೆಲ್'ಗೆ ತಾಕತ್ ಇದ್ದರೆ ನಾನು ಹೇಳಿದ್ದನ್ನು ಕಟ್ ಮಾಡದೇ ತೋರಿಸಿ ಎಂದು ಸುವರ್ಣ ನ್ಯೂಸ್'ಗೆ ಸವಾಲ್ ಹಾಕಿದ್ದಾರೆ. ಮಿನಿಸ್ಟರ್ &ಮರ್ಡರ್ ಹೆಸರಿನಲ್ಲಿ ಸುವರ್ಣ ನ್ಯೂಸ್ ನಿನ್ನೆ ಪ್ರಕರಣದ ಕುರಿತಂತೆ ದಿನವಿಡಿ ವರದಿ ಪ್ರಸಾರ ಮಾಡಿತ್ತು.

ಇದೇ ವೇಳೆ ಯೋಗೀಶ್ ಗೌಡ ಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿರುವ ಸಚಿವರು, ವಕೀಲನಿಗೆ ಬೆದರಿಕೆ ಹಾಕಿದ ಆಡಿಯೋದಲ್ಲಿರುವುದು ನನ್ನ ಧ್ವನಿ ಅಲ್ಲ. ಗುರುನಾಥಗೌಡ, ಯೋಗೇಶ್​ ಗೌಡ ರೌಡಿಗಳು. ಅವರ ವಿರುದ್ಧ ಎಷ್ಟು ಕೇಸ್​ಗಳಿವೆ ಗೊತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. 

ನನ್ನ ಪರ ಸಮರ್ಥನೆ ಮಾಡಿಕೊಳ್ಳಲು ನಿಮ್ಮ ಚಾನೆಲ್​ ಅವಕಾಶ ಕೊಡ್ತಿಲ್ಲ ಎಂದು ಆರೋಪಿಸಿರುವ ಸಚಿವರು, ನಿಮ್ಮ ಚಾನೆಲ್​'ಗೆ ನಾನು ಬರೋದಿಲ್ಲ, ನನಗೆ ನಿಮ್ಮ ಚಾನೆಲ್​ ಬೇಕಾಗಿಲ್ಲ. ನಿಮ್ಮ ಚಾನೆಲ್'​ಗೆ ತಾಕತ್ತಿದ್ದರೆ ನಾನು ಹೇಳಿದ್ದನ್ನು ಕಟ್​ ಮಾಡದೇ ತೋರಿಸಿ ಎಂದು ಸುವರ್ಣ ಸೌಧದಲ್ಲಿ ಸಚಿವರು ಸವಾಲು ಹಾಕಿದ್ದಾರೆ. ಸವಾಲಿನಂತೆ ಸುವರ್ಣ ನ್ಯೂಸ್'ನಲ್ಲಿ ಸಚಿವರು ಹೇಳಿದ್ದನ್ನೆಲ್ಲ ಎಡಿಟ್​ ಮಾಡದೇ ತೋರಿಸುತ್ತಿದ್ದೇವೆ.

ವಿನಯ್ ಕುಲಕರ್ಣಿ ಮಾತುಗಳು ನಿಮ್ಮ ಮುಂದೆ...