ಯೋಗೀಶ್​​ ಪತ್ನಿ ಮಲ್ಲಮ್ಮಗೆ ಪತ್ರ ಬರೆಯಲು ನೆರವು ನೀಡಿದ್ದ ವಕೀಲ ಆನಂದ್​ ವಿರುದ್ಧ ಸಚಿವ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದ್ದು, ಸ್ವತಃ ಸಚಿವ ವಿನಯ್ ಕುಲಕರ್ಣಿ ಅವರೇ ಯೋಗೀಶ್ ಗೌಡ ಕುಟುಂಬದ ವಕೀಲರಿಗೆ ಫೋನ್'ನಲ್ಲಿ ಬೆದರಿಕೆ ಹಾಕಿದ ಆಡಿಯೋ ಸುವರ್ಣ ನ್ಯೂಸ್'ಗೆ ಸಿಕ್ಕಿದೆ.

ಯೋಗೀಶ್​​ ಪತ್ನಿ ಮಲ್ಲಮ್ಮಗೆ ಪತ್ರ ಬರೆಯಲು ನೆರವು ನೀಡಿದ್ದ ವಕೀಲ ಆನಂದ್​ ವಿರುದ್ಧ ಸಚಿವ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮಂತ್ರಿ ಪದವಿ ಇದ್ದರೆ ಒಂದು ಹೋದ್ರೆ ಒಂದು.. ನಾನು ನೋಡ್ಕೋತಿನಿ’ ‘ನಾನು ಸುಮ್ಮನೆ ಕುಳಿತಿಲ್ಲ, ನಂಗೂ ಗೊತ್ತು ಏನ್​ ಮಾಡಬೇಕು ಅಂತ’ ‘ಯಾವ ಸೂ... ಮಕ್ಕಳು ಬರ್ತಾರೆ ಬರಲಿ’ ಎಂದು ವಿನಯ್ ಕುಲಕರ್ಣಿ ಆವಾಜ್ ಹಾಕಿದ್ದಾರೆ.