news
By Suvarna Web Desk | 06:38 PM November 06, 2017
ಸಿರಿಧಾನ್ಯ ಉದ್ಯಮದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ ಅಭಿಶೇಕ್

Highlights

ಇತ್ತೀಚಿನ ದಿನಗಳಲ್ಲಿ ಜನರು ಜಂಕ್'ಫುಡ್'ಗಳಿಂದ ಆರೋಗ್ಯಕರ ಆಹಾರ ಪದ್ಧತಿಯತ್ತ ವಾಲುತ್ತಿದ್ದಾರೆ. ಜಂಕ್'ಫುಡ್ ತಿಂದು ತಿಂದು ಆರೋಗ್ಯ ಕೆಡಿಸಿಕೊಂಡು ಈಗ ಅದರಿಂದ ದೂರವಾಗುತ್ತಿದ್ದಾರೆ. ಸಾವಯವ ಆಹಾರ ಪದ್ಧತಿಯನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ. ಆರೋಗ್ಯ ದೃಷ್ಟಿಯಿಂದಲೂ ಇದು ಪೌಷ್ಟಿಕವಾದ ಆಹಾರ. ಕಡಿಮೆ ನೀರಿನಲ್ಲಿಯೂ ಸುಲಭವಾಗಿ ಬೆಳೆಯಬಹುದಾದ ಬೆಳೆ ಇದಾಗಿದೆ.

ಬೆಂಗಳೂರು (ನ.06): ಇತ್ತೀಚಿನ ದಿನಗಳಲ್ಲಿ ಜನರು ಜಂಕ್'ಫುಡ್'ಗಳಿಂದ ಆರೋಗ್ಯಕರ ಆಹಾರ ಪದ್ಧತಿಯತ್ತ ವಾಲುತ್ತಿದ್ದಾರೆ. ಜಂಕ್'ಫುಡ್ ತಿಂದು ತಿಂದು ಆರೋಗ್ಯ ಕೆಡಿಸಿಕೊಂಡು ಈಗ ಅದರಿಂದ ದೂರವಾಗುತ್ತಿದ್ದಾರೆ. ಸಾವಯವ ಆಹಾರ ಪದ್ಧತಿಯನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿಗೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ. ಆರೋಗ್ಯ ದೃಷ್ಟಿಯಿಂದಲೂ ಇದು ಪೌಷ್ಟಿಕವಾದ ಆಹಾರ. ಕಡಿಮೆ ನೀರಿನಲ್ಲಿಯೂ ಸುಲಭವಾಗಿ ಬೆಳೆಯಬಹುದಾದ ಬೆಳೆ ಇದಾಗಿದೆ.

ಜಂಕ್'ಫುಡ್'ಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ ಅದರ ಬದಲಿಗೆ ಪೌಷ್ಟಿಕ ಆಹಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಭಿಶೇಕ್ ಎಂಬುವವರು ಸಿರಿಧಾನ್ಯಗಳ ಬಗ್ಗೆ ಜನ ಜಾಗೃತಿ ಕಾರ್ಯಾಗಾರಗಳನ್ನು ನಡೆಸಿದರು. ಅದರ ಬಗ್ಗೆ ಜನರಿಗೆ ತಿಳಿಸಿಕೊಟ್ಟರು. ಕೆಲ ಭಾಗದ ರೈತರ ಜೊತೆ ಮಾತನಾಡಿ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದರು. ಅದರಿಂದ ತಯಾರಿಸಲಾದ ಆಹಾರ ಪದಾರ್ಥಗಳನ್ನು ಜನರಿಗೆ ತಲುಪಿಸುವ ಬ್ಯುಸಿನೆಸ್'ಗಳನ್ನು ನಡೆಸುತ್ತಿದ್ದಾರೆ. ಮೂಲತಃ ಅಭಿಶೇಕ್ ವೃತ್ತಿಯಿಂದ ಸಿವಿಲ್ ಎಂಜಿನೀಯರ್ ಆಗಿದ್ದವರು. ಈಗ ಸಿರಿಧಾನ್ಯಗಳ (ಮಿಲೆಟ್) ಬ್ಯುಸಿನೆಸ್ ನಡೆಸುತ್ತಿದ್ದಾರೆ. ರೈತರಿಗೆ ಮಾರುಕಟ್ಟೆಯನ್ನು ಒದಗಿಸಿಕೊಡುತ್ತಿದ್ದಾರೆ.

ಒಂದಷ್ಟು ಮಹಿಳೆಯರನ್ನು ಸೇರಿಸಿಕೊಂಡು ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಸದ್ಯಕ್ಕೆ ಬೆಂಗಳೂರಿನ ಬಸವನ ಗುಡಿಯಲ್ಲಿ ಇದನ್ನು ತಯಾರಿಸಲಾಗುತ್ತಿದೆ. ಇಲ್ಲಿನ ಸುತ್ತಮುತ್ತ ಪ್ರದೇಶಗಳಲ್ಲಿರುವ ಶಾಲಾ-ಕಾಲೇಜು, ಸಾಫ್ಟ್'ವೇರ್ ಕಂಪನಿಗಳಿಗೆ ಪೂರೈಸುವ ಜವಾಬ್ದಾರಿಯನ್ನು ಅಭಿಶೇಕ್ ಹೊತ್ತಿದ್ದಾರೆ. ದಿನಾ ಬೆಳಿಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ಇದರಲ್ಲೇ ಬ್ಯುಸಿ ಇರುತ್ತಾರೆ. ಒಟ್ಟಿನಲ್ಲಿ ರೈತರು ಹಾಗೂ ಮಹಿಳೆಯರು ಸ್ವಾವಲಂಬಿಗಳಾಗಿ ಉದ್ಯಮ ನಡೆಸಲು ಅಭಿಶೇಕ್ ಬೆಂಬಲವಾಗಿ ನಿಂತಿದ್ದಾರೆ. ಅವರಿಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತಿದ್ದಾರೆ.  

Show Full Article


Recommended


bottom right ad