Asianet Suvarna News Asianet Suvarna News

ಖಾಕಿಯೊಳಗಿನ ತಾಯಿಕರುಳು: ಕ್ಯಾನ್ಸರ್ ರೋಗಿಗಳ ವಿಗ್‌ಗಾಗಿ ತಲೆ ಬೋಳಿಸಿದಳು!

ಕ್ಯಾನ್ಸರ್ ಪೀಡಿತರಿಗಾಗಿ ತಲೆ ಬೋಳಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ!| ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನಕದ್ದ ಪೊಲೀಸ್ ಅಧಿಕಾರಿ| ಈ ಮೊದಲೂ ಕೂದಲು ದಾನ ಮಾಡುತ್ತಿದ್ದ ಅಪರ್ಣಾ ಲವಕುಮಾರ್ 

Kerala woman cop shaves her head for cancer patients wigs Internet applauds the hero
Author
Bangalore, First Published Sep 27, 2019, 4:58 PM IST

ತ್ರಿಶೂರ್[ಸೆ.27]: ಅಪರ್ಣಾ ಲವಕುಮಾರ್ ಈ ಹೆಸರು ನೀವೆಂದಾದರೂ ಕೇಳಿದ್ದೀರಾ? ಬಹುಶಃ ಇಲ್ಲ.... ಕ್ಯಾನ್ಸರ್ ಪೀಡಿತರಿಗೆ ನೈಸರ್ಗಿಕ ಕೂದಲಿನ ವಿಗ್ ಮಾಡಿಸುವ ಸಲುವಾಗಿ ಈ ಪೊಲೀಸ್ ಹಿರಿಯ ಅಧಿಕಾರಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಸದ್ಯ ಇವರ ಈ ಮನವೀಯ ನಡೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಕೇರಳ ತ್ರಿಶೂರ್ ಜಿಲ್ಲೆಯ ಇರಿಂಜಲಕೂಡಾದ ನಿವಾಸಿಯಾಗಿರುವ ಅಪರ್ಣಾ ಲವಕುಮಾರ್, ತಮ್ಮ ಮೊಣಕಾಲುದ್ದದ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ಬೋಳಿಸಿಕೊಂಡಿರುವುದು ನೆಟ್ಟಿಗರ ಮನ ಗೆದ್ದಿದೆ. ಇನ್ನು ತಮ್ಮ ತಲೆ ಕೂದಲು ಬೋಳಿಸುವ ಮೊದಲು ಇವರು ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. 

ಮಂಗಳೂರು: ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ಕೇಶ ದಾನ ಮಾಡಿದ ವಿದ್ಯಾರ್ಥಿನಿ

ಸುದ್ದಿ ವಾಹಿನಿಯೊಂದಕ್ಕೆ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಪರ್ಣಾ ಲವಕುಮಾರ್ 'ನಾನು ಈ ಕುರಿತು ಯಾರಿಗೂ ಮಾಹಿತಿ ನೀಡಿರಲಿಲ್ಲ. ಮಾಹಿತಿ ನೀಡಿದ್ದರೆ ಇದನ್ನು ತಡೆಯುವ ಯತ್ನ ನಡೆಯುತ್ತಿತ್ತು. ಕೂದಲು ಬೋಳಿಸುವುದು ದೊಡ್ಡ ವಿಷಯವೆಂದು ನನಗೆ ಅನಿಸಲಿಲ್ಲ. ಹೀಗಾಗಿ ಸಲೂನ್ ಒಂದಕ್ಕೆ ತೆರಳಿ ಕೂದಲು ಕತ್ತರಿಸಿಕೊಂಡೆ. ಅನೇಕರು ಇದಕ್ಕೂ ಉತ್ತಮ ಕೆಲಸ ಮಾಡುತ್ತಾರೆ. ಇತರರಿಗೆ ಆರ್ಥಿಕವಾಗಿ ಸಹಾಯ ಮಾಡುವಷ್ಟು ಸಬಲಳು ನಾನಲ್ಲ, ನನ್ನಿಂದಾಗುವ ಸಹಾಯವನ್ನು ನಾನು ಮಾಡಿದೆ' ಎಂದಿದ್ದಾರೆ.

ಇನ್ನು ಕೂದಲು ಬೋಳಿಸಿದ್ದೇನೆ, ತನಗೆ ಕೂದಲಿಲ್ಲ ಎಂಬ ಬಗ್ಗೆ ಈ ಪೊಲೀಸ್ ಅಧಿಕಾರಿಗೆ ಬೇಸರವಿಲ್ಲ. ಇಷ್ಟೇ ಅಲ್ಲದೇ, ಅಪರ್ಣಾ ಈ ಮೊದಲು ಕೂಡಾ ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಆದರೆ ಈ ಬಾರಿ ಅವರು ಸಂಪೂರ್ಣವಾಗಿ ತಲೆ ಬೋಳಿಸಿಕೊಂಡಿದ್ದಾರೆ. 

ನೀವು ಕಡೆಗಣಿಸಿರಬಹುದಾದ ಈ ಲಕ್ಷಣಗಳು ಕ್ಯಾನ್ಸರಿನ ಸೂಚನೆಯೂ ಆಗಿರಬಹುದು!

10 ವರ್ಷಗಳ ಹಿಂದೆಯೂ ಅಪರ್ಣಾ ಲವಕುಮಾರ್ ಕುಟುಂಬವೊಂದಕ್ಕೆ ಸಹಾಯ ಮಾಡುವ ಸಲುವಾಗಿ ತನ್ನ ಮೂರು ಚಿನ್ನದ ಬಳೆಗಳನ್ನು ಮಾರಿ ಸದ್ದು ಮಾಡಿದ್ದರು. ಅಂದು ಆ ಕುಟುಂಬ ಆಸ್ಪತ್ರೆಯಲ್ಲಿ 60 ಸಾವಿರ ರೂಪಾಯಿ ಬಿಲ್ ಪಾವತಿಸಲಾಗದೆ ಪರದಾಡುತ್ತಿತ್ತು.

Follow Us:
Download App:
  • android
  • ios