ಕೇರಳ ಕ್ರೈಸ್ತ ಯುವತಿಯರು ಈಗ ಲವ್ ಜಿಹಾದ್ ಟಾರ್ಗೆಟ್!
ಕೇರಳದಲ್ಲಿ 4 ಸಾವಿರ ಕ್ರೈಸ್ತ ಯುವತಿಯರ ಲವ್ ಜಿಹಾದ್ | ಅಮಿತ್ ಶಾಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ದೂರು | 7 ವರ್ಷದಲ್ಲಿ 4 ಸಾವಿರ ಯುವತಿಯರ ಮತಾಂತರ
ನವದೆಹಲಿ (ಸೆ. 25): ಹಿಂದು ಯುವತಿಯರನ್ನು ಪ್ರೀತಿ- ಪ್ರೇಮದ ಹೆಸರಿನಲ್ಲಿ ಸೆಳೆದು ಇಸ್ಲಾಂಗೆ ಮತಾಂತರಗೊಳಿಸುವ ‘ಲವ್ ಜಿಹಾದ್’ ನಡೆಯುತ್ತಿದೆ ಎಂಬ ವ್ಯಾಪಕ ದೂರುಗಳಿಗೆ ಸಾಕ್ಷಿಯಾಗಿದ್ದ ಕೇರಳದಲ್ಲಿ ಈಗ ಕ್ರೈಸ್ತ ಯುವತಿಯರೂ ದಾಳವಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾಜ್‌ರ್ ಕುರಿಯನ್ ಅವರೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಒಂದು ವರದಿಯ ಪ್ರಕಾರ, 2005ರಿಂದ 2012ರ ನಡುವಣ ಅವಧಿಯಲ್ಲಿ 4 ಸಾವಿರ ಕ್ರೈಸ್ತ ಯುವತಿಯರ ಮತಾಂತರ ನಡೆದಿದೆ ಎಂದೂ ಹೇಳಿದ್ದಾರೆ.
ಈ ಕುರಿತು ಗಮನಹರಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ಮೂಲಭೂತವಾದಿ ಶಕ್ತಿಗಳ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಪರಿಣಾಮಕಾರಿ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇರಳದಲ್ಲಿ ಸಂಘಟಿತ ಮತಾಂತರ ಪ್ರಕರಣಗಳು ನಡೆಯುತ್ತಿವೆ. ಆ ರೀತಿ ಮತಾಂತರಗೊಂಡ ಯುವತಿಯರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇಸ್ಲಾಮಿಕ್ ಮೂಲಭೂತವಾದಿಗಳು ಲವ್ ಜಿಹಾದ್ ಹೆಸರಿನಲ್ಲಿ ಕ್ರೈಸ್ತ ಸಮುದಾಯದ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ತಮ್ಮ ಈ ವಾದಕ್ಕೆ ಕೇರಳದಲ್ಲಿ ಇತ್ತೀಚೆಗೆ ವರದಿಯಾದ ಎರಡೂ ಪ್ರಕರಣಗಳನ್ನೂ ಅವರು ಉದಾಹರಣೆಯಾಗಿ ನೀಡಿದ್ದಾರೆ. ಕ್ರೈಸ್ತ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ದುರುಳರು ಅತ್ಯಾಚಾರವೆಸಗಿ, ಅದರ ವಿಡಿಯೋ ಸೆರೆ ಹಿಡಿದಿದ್ದಾರೆ. ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಒಪ್ಪದೇ ಇದ್ದಾಗ ಆಕೆ ಇದ್ದ ಹಾಸ್ಟೆಲ್‌ನಿಂದಲೇ ಅಪಹರಣ ಮಾಡಲಾಗಿದೆ.
ನಿವೃತ್ತಿ ವಯಸ್ಸು ಇಳಿಸಲು ಕೇಂದ್ರ ಸರ್ಕಾರ ಚಿಂತನೆ
ಕೋಳಿಕೋಡ್‌ನಲ್ಲಿ ಈ ಪ್ರಕರಣ ವರದಿಯಾಗಿದೆ. ಅದೇ ರೀತಿ, ದೆಹಲಿಯಲ್ಲಿ ಮಲಯಾಳಿ ಕ್ರೈಸ್ತ ಯುವತಿಯೊಬ್ಬಳನ್ನು ಅಪಹರಿಸಿ ಪಶ್ಚಿಮ ಏಷ್ಯಾ ದೇಶಕ್ಕೆ ಮೊಹಮ್ಮದ್ ಸಿದ್ದಿಖಿ ಎಂಬಾತ ಕರೆದೊಯ್ದಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಆರೋಪಗಳಿಗೆ ಹಲವು ಕ್ರೈಸ್ತ ಸಮುದಾಯದ ಪೋಷಕರು ನೀಡಿರುವ ದೂರುಗಳನ್ನೂ ಉಲ್ಲೇಖಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಐಸಿಸ್‌ಗೆ ಸೇರ್ಪಡೆಯಾದ ಕೇರಳದ 21 ವ್ಯಕ್ತಿಗಳಲ್ಲಿ ಐವರು ಕ್ರೈಸ್ತ ಧರ್ಮದಿಂದ ಮತಾಂತರಗೊಂಡಿದ್ದವರಾಗಿದ್ದರು ಎಂಬ ವರದಿಗಳು ಇವೆ. ಮತಾಂತರಗೊಂಡವರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸಲಾಗುತ್ತಿದೆ. ಇಡೀ ಜೀವನವನ್ನು ಸ್ವಾತಂತ್ರ್ಯವಿಲ್ಲದೇ ಜೀವಿಸುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.