ಚಿಕ್ಕಮಗಳೂರಿನ ಜಿಲ್ಲಾಡಳಿತದ ಯಡವಟ್ಟು: ಸ್ವಾಮಿ ವಿವೇಕಾನಂದರ ಮೂರ್ತಿ ವಿರೂಪಗೊಳಿಸಿ ಅಪಮಾನ
ಸ್ವಾ ಮಿ ವಿವೇಕಾನಂದ ಅಂದರೆ ಎಲ್ಲರಿಗೂ ನೆನಪಾಗುವುದು ವಿವೇಕಾನಂದರ ಮಂದಸ್ಮಿತವಾದ ನಗೆ, ಶಾಂತ ಭಾವ ಕಣ್ಣೀನಲ್ಲಿರುವ ಹೊಳಪು, ಮುಖದಲ್ಲಿ ವ್ಯಕ್ತವಾಗುವ ಕಾಂತಿ, ಆದರೆ ಇದಕ್ಕೆ ತದ್ವಿರುದ್ಧದಂತೆ ಇರುವ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನ ಚಿಕ್ಕಮಗಳೂರಿನ ಜಿಲ್ಲಾಡಳಿತ ನಿರ್ಮಾಣ ಮಾಡಿದ್ದಾರೆ.
ಚಿಕ್ಕಮಗಳೂರು(ಜು.28): ಸ್ವಾ ಮಿ ವಿವೇಕಾನಂದ ಅಂದರೆ ಎಲ್ಲರಿಗೂ ನೆನಪಾಗುವುದು ವಿವೇಕಾನಂದರ ಮಂದಸ್ಮಿತವಾದ ನಗೆ, ಶಾಂತ ಭಾವ ಕಣ್ಣೀನಲ್ಲಿರುವ ಹೊಳಪು, ಮುಖದಲ್ಲಿ ವ್ಯಕ್ತವಾಗುವ ಕಾಂತಿ, ಆದರೆ ಇದಕ್ಕೆ ತದ್ವಿರುದ್ಧದಂತೆ ಇರುವ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನ ಚಿಕ್ಕಮಗಳೂರಿನ ಜಿಲ್ಲಾಡಳಿತ ನಿರ್ಮಾಣ ಮಾಡಿದ್ದಾರೆ.
ವಾಯ್ಸ್: ಸ್ವಾಮಿ ವಿವೇಕಾನಂದರು ಮಂದಸ್ಮಿತ ನಗೆ ಶಾಂತ ಸ್ವಭಾವ. ಕಣ್ಣಿನಲ್ಲಿ ಹೊಳಪು, ಮುಖದಲ್ಲಿ ಕಾಂತಿಯುಳ್ಳ ಅಪಾರ ಜ್ಞಾನಿ. ಆದರ್ಶ ಪುರುಷ. ಇಂಥ ಜ್ಞಾನ ಸ್ವರೂಪಿಯ ಪುತ್ಥಳಿಯನ್ನು ಚಿಕ್ಕಮಗಳೂರಿನ ದಂಟರಮಕ್ಕಿ ಕೆರೆ ದಂಡೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.. 25 ಲಕ್ಷ ವೆಚ್ಚದಲ್ಲಿ ಚಿಕ್ಕಮಗಳೂರಿನ ನಗರಸಭೆ, ನೀರಾವರಿ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಪ್ರತಿಷ್ಠಾಪಿಸಿವೆ. ಆಶ್ಚರ್ಯ ಏನ್ ಗೊತ್ತಾ. ಇದು ಸ್ವಾಮಿ ವಿವೇಕಾನಂದರ ಮೂರ್ತಿಯೇ ಅನ್ನೋ ಅನುಮಾನ ಮೂಡುತ್ತಿದೆ.. ಯಾಕಂದ್ರೆ ಯಾವ ಌಂಗಲ್ನಲ್ಲಿ ನೋಡಿದ್ರೂ ಈ ಮೂರ್ತಿ ಶಾಂತಸ್ವರೂಪಿ ಸ್ವಾಮಿ ವಿವೇಕಾನಂದರ ರೂಪ ಹೋಲುತ್ತಿಲ್ಲ.
ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ವಿರೂಪಗೊಳಿಸಿ ಪ್ರತಿಷ್ಠಾಪಿಸಿದ್ದು ವಿವೇಕಾನಂದರಿಗೇ ಅವಮಾನ ಮಾಡಿದಂತೆ ಎಂದು ಸ್ಥಳೀಯರು ಕಿಡಿ ಕಾರುತ್ತಿದ್ದಾರೆ. ಸ್ಥಳೀಯ ಶಾಸಕ ಸಿ.ಟಿ ರವಿ ಸೇರಿದಂತೆ ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶಪಡಿಸಿದ್ದು , ಕೂಡಲೇ ಈ ಪುತ್ಥಳಿ ಮರುಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಆದರ್ಶಪುರುಷನ ಮೂರ್ತಿ ಪ್ರತಿಷ್ಠಾಪಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹೊರಟ ಅಧಿಕಾರಿಗಳು ಈಗ ಯಡವಟ್ಟು ಮಾಡಿಕೊಂಡು ಆಕ್ರೋಶಕ್ಕೆ ತುತ್ತಾಗಿದ್ದಾರೆ.. ಇನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪುತ್ಥಳಿಯನ್ನ ಪುನಶ್ಚೇತನಗೊಳಿಸಬೇಕಿದೆ.