ಜಗದ ಕವಿ ಕುವೆಂಪುಗೆ ಡೂಡಲ್ ಗೌರವ

ಜಗದ ಕವಿಯನ್ನು ನೆನೆದ ಗೂಗಲ್ ಡೂಡಲ್, ಗೂಗಲ್ ಪೇಜ್ ನಲ್ಲಿ ಕವಿಶೈಲನಿಗೆ ನಮನ ಸಲ್ಲಿಸಿದೆ.

Google Doodle honours Kuppali Venkatappa Puttappa

ಇಂದು ರಾಷ್ಟ್ರಕವಿ ಕುವೆಂಪು ಅವರ 113ನೇ ವರ್ಷದ ಹುಟ್ಟುಹಬ್ಬ, ಈ ಹಿನ್ನೆಲೆ ಗೂಗಲ್ ಸಂಸ್ಥೆಯು ಕುವೆಂಪು ಅವರಿಗೆ ಗೌರವ ಸಲ್ಲಿಸಿದ್ದು, ಗೂಗಲ್ ಡೂಡಲ್​ನಲ್ಲಿ ಕುವೆಂಪು ಅವರ ಚಿತ್ರವನ್ನು ಪ್ರಕಟಿಸಿದೆ. ‘ಜಗದ ಕವಿ’ಯನ್ನು ನೆನೆದ ಗೂಗಲ್ ಡೂಡಲ್, ಗೂಗಲ್ ಪೇಜ್ ನಲ್ಲಿ ಕವಿಶೈಲನಿಗೆ ನಮನ ಸಲ್ಲಿಸಿದೆ. ಕವಿ ಶೈಲದ ಬಂಡೆ ಮೇಲೆ ಕೂತು ಕುವೆಂಪು ಬರೆಯುತ್ತಿರುವ ಚಿತ್ರವನ್ನ ಡೂಡಲ್​ನಲ್ಲಿ ಹಾಕಲಾಗಿದೆ. ಜೊತೆಗೆ ಕನ್ನಡದಲ್ಲಿ ಗೂಗಲ್ ಎಂದು ಬರೆಯಲಾಗಿದೆ. ವರನಟ ಡಾ.ರಾಜ್​ಕುಮಾರ್ ನಂತರ ರಾಷ್ಟ್ರಕವಿ ಕುವೆಂಪು ಅವರಿಗೆ ಗೂಗಲ್ ನಮನ ಸಲ್ಲಿಸಿರುವುದು ಕನ್ನಡಿಗರಿಗೆ, ಕನ್ನಡ ಸಾಹಿತ್ಯಕ್ಕೆ ಸಂದ ಗೌರವ ಇದಾಗಿದೆ.

Latest Videos
Follow Us:
Download App:
  • android
  • ios