ಹನಿಮೂನ್ ಗೆ ಊಟಿಯಲ್ಲಿ ಇಡೀ ರೈಲಿನ ಟಿಕೆಟ್‌ ಖರೀದಿ ಮಾಡಿದ ಜೋಡಿ

ಬ್ರಿಟನ್‌ನ ಜೋಡಿಯೊಂದು ತಮ್ಮ ಹನಿಮೂನ್‌ ಅನ್ನು ವಿಶೇಷವಾಗಿ ಆಚರಿಸಿಕೊಳ್ಳಲು, ರೈಲಿನ ಅಷ್ಟೂಟಿಕೆಟ್‌ ಖರೀದಿಸಿ, ಊಟಿಯಲ್ಲಿ ಪ್ರಯಾಣಿಸುವ ಮೂಲಕ ಹನಿಮೂನ್‌ ಅನ್ನು ವಿಶಿಷ್ಟವಾಗಿ ಆಚರಿಸಿದೆ. 

British Couple Charters Entire Train For Honeymoon In Ooty

ಕೊಯಮತ್ತೂರು: ತಮಿಳುನಾಡಿನ ಮೆಟ್ಟುಪಾಳ್ಯಂನಿಂದ ಊಟಿ ನಡುವಣ ಸಂಚರಿಸುವ ಟಾಯ್‌ ಟ್ರೈನ್‌ ವಿಶ್ವಪ್ರಸಿದ್ಧ. ಇದರಲ್ಲಿ ಟಿಕೆಟ್‌ ಖರೀದಿಯೂ ಬಹುತೇಕ ಸಂದರ್ಭ ಸಾಹಸದ ಕೆಲಸ. 

ಅಂಥದ್ದರಲ್ಲಿ ಬ್ರಿಟನ್‌ನ ಜೋಡಿಯೊಂದು ತಮ್ಮ ಹನಿಮೂನ್‌ ಅನ್ನು ವಿಶೇಷವಾಗಿ ಆಚರಿಸಿಕೊಳ್ಳಲು, ರೈಲಿನ ಅಷ್ಟೂಟಿಕೆಟ್‌ ಖರೀದಿಸಿ, ಪ್ರಯಾಣಿಸುವ ಮೂಲಕ ಹನಿಮೂನ್‌ ಅನ್ನು ವಿಶಿಷ್ಟವಾಗಿ ಆಚರಿಸಿದೆ. 

ಗ್ರಹಾಂ ವಿಲಿಯಂ ಲಿನ್‌(30) ಹಾಗೂ ಸಿಲ್ವಿಯಾ ಪ್ಲಾಸಿಕ್‌(27) ದಂಪತಿ ಸುಮಾರು 3 ಲಕ್ಷ ರು. ಪಾವತಿಸಿ ಇಡೀ ರೈಲನ್ನೇ ಬುಕ್‌ ಮಾಡಿದ್ದರು. ಐಆರ್‌ಸಿಟಿಸಿ ಆರಂಭಿಸಿರುವ ಹೊಸ ಯೋಜನೆ ಅನ್ವಯ ಯಾರೇ ಬೇಕಾದರೂ, ಪೂರ್ಣ ಶುಲ್ಕ ಪಾವತಿಸಿ ಅಷ್ಟೂಟಿಕೆಟ್‌ ಖರೀದಿಸಿ ಅದರಲ್ಲಿ ಪ್ರಯಾಣಿಸಬಹುದು. 

ಈ ಯೋಜನೆಯಡಿ ಬ್ರಿಟಿಷ್‌ ದಂಪತಿ ಹೊತ್ತ ರೈಲು ಬೆಳಗ್ಗೆ 9.10 ನಿಮಿಷಕ್ಕೆ ಮೆಟ್ಟುಪಾಳ್ಯಂನಿಂದ ಹೊರಟು 48 ಕಿ.ಮೀ ದೂರದ ಊಟಿಯನ್ನು ಮಧ್ಯಾಹ್ನ 2.40ಕ್ಕೆ ತಲುಪಿತು. ಈ ವೇಳೆ ಜೋಡಿಯನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

Latest Videos
Follow Us:
Download App:
  • android
  • ios