ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಾಲಿವುಡ್’ನಲ್ಲೂ ತೀವ್ರ ಖಂಡನೆ ವ್ಯಕ್ತವಾಗಿದೆ. ಹಿರಿಯ ಕಲಾವಿದ ಜಾವೇದ್ ಅಖ್ತರ್, ನಟಿ ಶಬಾನಾ ಆಝ್ಮಿ, ಸೋನಮ್ ಕಪೂರ್ , ದಿಯಾ ಮಿರ್ಝಾ ಮತ್ತಿತರು ಗೌರಿ ಹತ್ಯೆಯನ್ನು ಖಂಡಿಸಿದ್ದಾರೆ.
ಮುಂಬೈ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಾಲಿವುಡ್’ನಲ್ಲೂ ತೀವ್ರ ಖಂಡನೆ ವ್ಯಕ್ತವಾಗಿದೆ.
ಹಿರಿಯ ಕಲಾವಿದ ಜಾವೇದ್ ಅಖ್ತರ್, ನಟಿ ಶಬಾನಾ ಆಝ್ಮಿ, ಸೋನಮ್ ಕಪೂರ್ , ದಿಯಾ ಮಿರ್ಝಾ ಮತ್ತಿತರು ಗೌರಿ ಹತ್ಯೆಯನ್ನು ಖಂಡಿಸಿದ್ದಾರೆ.
ಧಾಬೊಲ್ಕರ್, ಪನ್ಸಾರೆ, ಕಲ್ಬುರ್ಗಿ, ಈಗ ಗೌರಿ ಲಂಕೇಶ್. ಒಂದೇ ವಿಚಾರಧಾರೆಯ ವ್ಯಕ್ತಿಗಳ ಹತ್ಯೆಯಾಗುತ್ತಿದೆ. ಹಾಗಾದರೆ ಕೊಲ್ಲುತ್ತಿರುವವರು ಯಾರು? ಎಂದು ಅಖ್ತರ್ ಪ್ರಶ್ನಿಸಿದ್ದಾರೆ.
ಗೌರಿ ಹತ್ಯೆ ಆಘಾತಕಾರಿಯಾಗಿದೆ. ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಶಬಾನಾ ಆಝ್ಮಿ, ಸೋನಮ್ ಕಪೂರ್ ಹಾಗೂ ದಿಯಾ ಮಿರ್ಝಾ ಟ್ವೀಟಿಸಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಜಾವೇದ್ ಜಾಫ್ರಿ ಹಾಗೂ ಇನ್ನೂ ಹಲವರು ಗೌರಿ ಹತ್ಯೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
