ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಆಂಧ್ರ ಸರ್ಕಾರದಿಂದ ಮತ್ತೊಂದು ನೋಟಿಸ್!
ಆಂಧ್ರ ಮಾಜಿ ಸಿಎಂ ನಾಯ್ಡು ಮನೆ ಧ್ವಂಸಕ್ಕೆ ಸರ್ಕಾರದಿಂದ ಮತ್ತೊಂದು ನೋಟಿಸ್ ಜಾರಿ| ಉಂಡವಳ್ಳಿ ಗ್ರಾಮದಲ್ಲಿರುವ ನಾಯ್ಡು ನಿವಾಸದ ಗೋಡೆಗೆ ಅಂಟಿಸಿದ ಅಧಿಕಾರಿಗಳು
ಅಮರಾವತಿ[ಸೆ.22]: ನಿಯಮಬಾಹಿರವಾಗಿ ಕೃಷ್ಣಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸ ಧ್ವಂಸಕ್ಕೆ ನಿರ್ಧರಿಸಲಾಗಿದ್ದು, 7 ದಿನಗಳ ಒಳಗಾಗಿ ಮನೆ ಖಾಲಿ ಮಾಡುವಂತೆ ಸೂಚಿಸಿ ಜಗನ್ ಸರ್ಕಾರ ಮತ್ತೊಮ್ಮೆ ನೋಟಿಸ್ ನೀಡಿದೆ.
ಈ ಬಗ್ಗೆ ಆಂಧ್ರಪ್ರದೇಶ ರಾಜಧಾನಿ ಪ್ರಾಂತ್ಯದ ಅಭಿವೃದ್ಧಿ ಪ್ರಾಧಿಕಾರ ನಾಯ್ಡು ನಿವಾಸದ ಮಾಲೀಕ ಲಿಂಗಮನೇನಿ ರಮೇಶ್‌ಗೆ ನೋಟಿಸ್ ನೀಡಿದೆ. ನಾಯ್ಡು ನಿವಾಸದಲ್ಲಿ ಯಾರೂ ಇಲ್ಲದ ಕಾರಣ ಈ ಕುರಿತಾದ ಆಯುಕ್ತರ ನೋಟಿಸ್ ಅನ್ನು ಉಂಡವಳ್ಳಿ ಗ್ರಾಮದಲ್ಲಿರುವ ನಾಯ್ಡು ನಿವಾಸದ ಗೋಡೆ ಮೇಲೆ ಅಂಟಿಸಲಾಗಿದೆ.
ಜೂ.27ರಂದು ಈ ಕುರಿತು ಎಪಿಸಿಆರ್‌ಡಿ ಶೋಕಾಸ್ ನೋಟಿಸ್ ರವಾನಿಸಿತ್ತು.