Asianet Suvarna News Asianet Suvarna News

ಅಬಕಾರಿ ಪೂರ್ಣ ಸ್ವಾತಂತ್ರ್ಯ ಬಗ್ಗೆ ಮಾತಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದ ಸಚಿವ

ಅಬಕಾರಿ ಇಲಾಖೆಯಲ್ಲಿ ಸಚಿವ ಸಚಿವ ನಾಗೇಶ್ ಅವರಿಗೆ ಸಂಪೂರ್ಣ ಸ್ವಾತಂತ್ರ ಇಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದಂತೆ ಈ ಬಗ್ಗೆ ಸಚಿವರು ಕೋಲಾರದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಖಾತೆಯಲ್ಲಿ ತಮಗಿರೋ ಸ್ವಾತಂತ್ರ್ಯದ ಬಗ್ಗೆ ನಾಗೇಶ್ ಏನ್ ಹೇಳ್ತಾರೆ ಎಂದು ತಿಳಿಯಲು ಈ ಸುದ್ದಿ ಓದಿ.

Excise minister nagesh dines to give reaction about freedom in his Department
Author
Bangalore, First Published Oct 16, 2019, 2:08 PM IST

ಕೋಲಾರ(ಅ.16): ಅಬಕಾರಿ ಇಲಾಖೆಯಲ್ಲಿ ಸಚಿವ ಸಚಿವ ನಾಗೇಶ್ ಅವರಿಗೆ ಸಂಪೂರ್ಣ ಸ್ವಾತಂತ್ರ ಇಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದಂತೆ ಈ ಬಗ್ಗೆ ಸಚಿವರು ಕೋಲಾರದಲ್ಲಿ ಪ್ರತಿಕ್ರಿಯಿಸಿದ್ದಾರೆ

ಅಬಕಾರಿ ಖಾತೆಯಲ್ಲಿ ಸಚಿವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿರುವ ಸಚಿವ ನಾಗೇಶ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದಾರೆ.

ಹೆಚ್ಚಿದ ಉಪಚುನಾವಣೆ ಕಾವು: ಸಿದ್ದರಾಮಯ್ಯಗೆ ಖೆಡ್ಡಾ ತೋಡಿದ ಕೈ ನಾಯಕರು?

ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು:

ನಿಮಗೆ ಅಬಕಾರಿ ಇಲಾಖೆಯಲ್ಲಿ ಪೂರ್ಣ ಸ್ವಾಂತ್ರ್ಯ ಇಲ್ವಾ ಅನ್ನೋ ವರದಿಗಾರರ ಪ್ರಶ್ನೆಗೆ ಉತ್ತರಿಸಿ ಅವರು, ಅದನ್ನೆಲ್ಲ ನೀವು ಕೇಳ್ಬಾರ್ದು, ನಾನು ಹೇಳ್ಬಾರ್ದು ಎನ್ನೋ ಮೂಲಕ ಪ್ರತಿಕ್ರಿಯೆ ನೀಡಲು ನಕಾರವೆತ್ತಿದ್ದಾರೆ.

ಈಗ ಮಾತಾಡಿದ್ರೆ ಕಾಂಟ್ರವರ್ಸಿಯಾಗುತ್ತೆ..!

ಕೋಲಾರದಲ್ಲಿ ತಮ್ಮನ್ನು ಪ್ರಶ್ನಿಸಿದ ವರದಿಗಾರರಿಗೆ ಅಬಕಾರಿ ಸಚಿವ ಹೆಚ್.ನಾಗೇಶ್ ಪ್ರತಿಕ್ರಿಯೆ ನೀಡಲು ನಿರಾಕಿಸಿದ್ದಾರೆ. ನಾನು ಅದನ್ನ ಸರ್ಕಾರದ ಬಳಿ ಮಾತನಾಡುತ್ತೇನೆ. ನಾನು ಈಗ ಆ ವಿಚಾರ ಮಾತನಾಡಿದ್ರೆ  ಕಾಂಟ್ರವರ್ಸಿ ಆಗುತ್ತೆ ಎಂದಿದ್ದಾರೆ.

ಸಿಎಂ ಹೇಳಿಕೆ ಕೊಟ್ಟಿದ್ದೇ ಗೊತ್ತಿಲ್ಲ:

ಸಾಲಮನ್ನಾ ವಿಚಾರವಾಗಿ ಸಂಪೂರ್ಣ ಸಾಲಮನ್ನಾ ಸಾಧ್ಯವಿಲ್ಲ ಎಂದು ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿರುವ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಡೆವಲಪ್‌ಮೆಂಟ್‌ ಕುರಿತು ನನಗೆ ಗೊತ್ತಿಲ್ಲ.ಯಾಕಂದ್ರೆ ನಾನು ಟೀವಿ ನೋಡಿಲ್ಲ ಎಂಬ ಹಾರಿಕೆಯ ಉತ್ತರ ಕೊಟ್ಟಿದ್ದಾರೆ.

ಸಚಿವರ ಟಿವಿ ಸರಿ ಇರ್ಲಿಲ್ಲ:

ನಿನ್ನೆ ರಾತ್ರಿ ನಾನು ಫಾರ್ಮ್ ಹೌಸ್ ನಲ್ಲಿದ್ದೆ‌. ನಮ್ಮ ಟೀವಿ ಔಟ್ ಆಫ್ ಸರ್ವೀಸ್‌ನಲ್ಲಿದೆ. ಕತ್ತಲಾಗಿಬಿಟ್ಟಿತ್ತು,ಕರೆನ್ಸಿ ಹಾಕಿಸಿಲ್ಲ.25 ತಾರೀಖು ಕೆಡಿಪಿ ಮೀಟಿಂಗ್ ಕರೆದಿದ್ದೇನೆ ಅದಾದ ನಂತರ ಸಿಎಂ ಏನು ಹೇಳಿದ್ದಾರೆ,ಎಲ್ಲಾ ವಿಚಾರಗಳ ಕುರಿತು ತಿಳಿದುಕೊಳ್ಳುತ್ತೆ‌ನೆ ಎಂದು ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆ: ಹಾಲಿಗೆ ಮಾಜಿ ಅಬಕಾರಿ ಸಚಿವರ ಕ್ಲಾಸ್‌..!

Follow Us:
Download App:
  • android
  • ios