ಕಳೆದ ಬಾರಿ ಬೆಂಗಳೂರಗೆ ಬಂದಿದ್ದ ಪ್ರಯಾಣಿಕರಿಂದ ಕ್ವಾರಂಟಟ್‌ಗೆ ವಿರೋಧ| ಕೊನೆಗೂ ಮನವೊಲಿಸಿ ಕ್ವಾರಂಟನ್ ಮಾಡಿದ್ದ ಬಿಬಿಎಂಪಿ| ಕ್ವಾರಂಟನ್‌ಗೆ ಒಪ್ಪದ 19 ಜ‌ನರನ್ನ ಮರಳಿ‌‌ ದೆಹಲಿಗೆ| ಇಂದೂ ಸಹ ದೆಹಲಿಯಿಂದ ಬೆಂಗಳೂರಿಗೆ 800 ಜನರ ಆಗಮನ| 

ಬೆಂಗಳೂರು(ಮೇ.16): ಲಾಕ್‌ಡೌನ್‌ ಆಗಿದ್ದರಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದವರನ್ನ ತವರಿಗೆ ಕರೆತರಲು ಕೇಂದ್ರ ಸರ್ಕಾರ ವಿಶೇಷ ರೈಲು ಸಂಚಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಿಂದ ಇಂದು(ಶನಿವಾರ) ಬೆಂಗಳೂರಿಗೆ ಎರಡನೇ‌ ರೈಲು ಆಗಮಿಸಿದೆ. 

Add Asianetnews Kannada as a Preferred SourcegooglePreferred

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಶ್ರಮಿಕ್ ರೈಲಿನಲ್ಲಿ ಒಟ್ಟು 800 ಜನ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಗುರುವಾರ ಸಂಜೆ ದೆಹಲಿಯಿಂದ ಹೊರಟ್ಟಿದ್ದ ಶ್ರಮಿಕ್ ಎಕ್ಸ್‌ಪ್ರೆಸ್‌ ಇಂದು ಬೆಳಿಗ್ಗೆ 7 ಗಂಟೆಗೆ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಎಲ್ಲ 800 ಜನರನ್ನೂ ಬಿಬಿಎಂಪಿ ಕ್ವಾರಂಟನ್ ಮಾಡಲಿದೆ.

ಲಾಕ್‌ಡೌನ್‌ ಸಡಿಲ: ಮೇ. 17,18 ರಂದು ಉತ್ತರ ಪ್ರದೇಶಕ್ಕೆ ಸ್ಪೆಷಲ್‌ ರೈಲು

ಕಳೆದ ಎರಡು ದಿನಗಳ‌ ಹಿಂದೆ ದೆಹಲಿಯಿಂದ ಬೆಂಗಳೂರಿಗೆ‌ ಮೊದಲ ರೈಲು ಆಗಮಿಸಿತ್ತು. ಈ ವೇಳೆ 19 ಮಂದಿ ಕ್ವಾರಂಟೈನ್‌ ಆಗಲು ಒಪ್ಪದಿದ್ದ ಕಾರಣ ಅಧಿಕಾರಿಗಳು ಮಧ್ಯೆ ತೀವ್ರವಾದ ವಾಗ್ವಾದ ನಡೆದಿತ್ತು. ಹೀಗಾಗಿ ಕ್ವಾರಂಟೈನ್‌ಗೆ ಒಪ್ಪದ 19 ಮಂದಿಯನ್ನ ಮತ್ತೊಂದು ರೈಲಿನ ಮೂಲಕ ವಾಪಸ್‌ ದೆಹಲಿಗೆ ಕಳುಹಿಸಲಾಗಿತ್ತು. ಉಳಿದದವರನ್ನ ನಗರದ ವಿವಿಧ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. 

ಈ ಕಾರಣದಿಂದ ಪೊಲೀಸರು ಇಂದು ರೈಲ್ವೆ ನಿಲ್ದಾಣದ ರಸ್ತೆಯನ್ನ ಸಂಪೂರ್ಣವಾಗಿ ಬಂದ್ ಮಾಡಿದ್ದರು. ಇಂದೂ ಸಹ ದೆಹಲಿಯಿಂದ 800 ಜನ ಆಗಮಿಸಿದ್ದರು. ಹೀಗಾಗಿ ಈ ಬಾರಿ ರೈಲು ನಿಲ್ದಾಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.