ಬೆಳಗಾವಿಗೆ ಬಂದಿಳಿದ ಶಿವಸೇನೆ ಮುಖಂಡ | ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂಜಯ್ ರಾವತ್| ರಾವತ್ ಅವರನ್ನು ಸ್ವಾಗತಿಸಿದ ಶಿವಸೇನಾ ಬೆಂಬಲಿಗರು| ರಾವತ್ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಪೊಲೀಸರು?|
ಬೆಳಗಾವಿ(ಜ.18): ಶಿವಸೇನೆ ಮುಖಂಡ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಬೆಳಗಾವಿಗೆ ಬಂದಿಳಿದಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
Scroll to load tweet…
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂಜಯ್ ರಾವತ್ ಅವರನ್ನು ಶಿವಸೇನಾ ಬೆಂಬಲಿಗರು ಸ್ವಾಗತಿಸಿದರು. ಆದರೆ ಸಂಜಯ್ ರಾವತ್ ಅವರನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
Scroll to load tweet…
ಇದಕ್ಕೂ ಮೊದಲು ಮುಂಬೈನಲ್ಲಿ ಮಾತನಾಡಿದ್ದ ಸಂಜಯ್ ರಾವತ್, ತಮ್ಮನ್ನು ನಗರಕ್ಕೆ ಬರದಂತೆ ಆದೇಶ ನೀಡಿದ್ದ ಬೆಳಗಾವಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು.
Scroll to load tweet…
ಪಾಕಿಸ್ತಾನಿಯರು ಭಾರತಕ್ಕೆ ಬಂದು ಆಶ್ರಯ ಪಡೆಯಬಹುದಾದರೆ ಮಹಾರಾಷ್ಟ್ರಿಗರು ಬೆಳಗಾವಿಗೆ ಏಕೆ ಬರುವಂತಿಲ್ಲ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದರು.
