ಫೇಸ್‌ಬುಕ್‌ನಲ್ಲಿ ಹುಡುಗಿ ಎಂದು ಚಾಟ್‌ ಮಾಡಿದ್ರೆ ಬೀಳುತ್ತೆ ಪಂಗನಾಮ!

ಯುವತಿಯ ಹೆಸರಲ್ಲಿ ಪ್ರೀತಿಯ ನಾಟಕ| 15 ಲಕ್ಷ ರೂ. ವಂಚಿಸಿದ ವ್ಯಕ್ತಿ| ಹುಡುಗಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಐಡಿ ತೆರೆದು ಯುವಕನ ಜತೆ ಸ್ನೇಹ ಬೆಳೆಸಿದ್ದ ವ್ಯಕ್ತಿ| ಹಣದ ಅಡಚಣೆ ಇದೆ ಎಂದು ಹೇಳಿ ಪ್ರತಾಪಗೌಡ ಹಂತಹಂತವಾಗಿ ವಿವಿಧ ಅಕೌಂಟ್‌ಗಳಿಗೆ ಹದಿನೈದು ಲಕ್ಷ ರೂಪಾಯಿ ಟ್ರಾನ್ಸ್‌ಫರ್ ಮಾಡಿಸಿಕೊಂಡು ವಂಚನೆ|

Person Cheat on Fake Facebook Account in Hubballi

ಹುಬ್ಬಳ್ಳಿ(ಜ.09): ಯುವತಿಯ ಹೆಸರಲ್ಲಿ ಪ್ರೀತಿಯ ನಾಟಕವಾಡಿ ಯುವಕನಿಂದ ಹಣ ಸುಲಿಗೆ ಮಾಡಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ರುದ್ರಗೌಡ ಪಾಟೀಲ್‌ ಎಂಬಾತನೇ ಮೋಸ ಹೋದ ವ್ಯಕ್ತಿಯಾಗಿದ್ದಾನೆ. 

ಏನಿದು ಪ್ರಕರಣ? 

ಹಾಸನದ ಗಿಣಗೇರಿಯ ಜಿ.ಎಸ್. ಪ್ರತಾಪಗೌಡ ಮೂರ್ತಿ ಎಂಬಾತ ಸುಷ್ಮಾ ಎಂಬ ಹುಡುಗಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಐಡಿ ತೆರೆದು ರುದ್ರಗೌಡ ಪಾಟೀಲ್‌ ಜತೆ ಸ್ನೇಹ ಬೆಳೆಸಿದ್ದನು. ಸ್ನೇಹ ಪ್ರೀತಿಗೆ ತಿರುಗಿತು ಎಂಬಂತೆ ನಾಟಕವಾಡಿ ನಿನ್ನನ್ನು ಪ್ರೀತಿಸುವುದಾಗಿ ಹೇಳಿ ರುದ್ರಗೌಡ ಜೊತೆ ನಿರಂತರವಾಗಿ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದ. ನನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳಿ ಮೂರು ವರ್ಷಗಳಿಂದ ಸುಷ್ಮಾ ಹೆಸರಲ್ಲಿ ಪ್ರತಾಪಗೌಡ ಚಾಟ್ ಮಾಡುತ್ತಿದ್ದನು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಂತರ ಹಣದ ಅಡಚಣೆ ಇದೆ ಎಂದು ಹೇಳಿ ಪ್ರತಾಪಗೌಡ ಹಂತಹಂತವಾಗಿ ವಿವಿಧ ಅಕೌಂಟ್‌ಗಳಿಗೆ ಹದಿನೈದು ಲಕ್ಷ ರೂಪಾಯಿ ಟ್ರಾನ್ಸ್‌ಫರ್ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ. ನಾನು ಹುಡುಗಿ ಜತೆ ಮಾತನಾಡುತ್ತಿದ್ದೇನೆ ಎಂದು ರುದ್ರಗೌಡ ಪಾಟೀಲ್‌ ನಂಬಿದ್ದನು. ಬಳಿಕ ಗೊತ್ತಾಗಿದೆ ನಾನು ಮಾತನಾಡಿದ್ದು ಹುಡುಗಿ ಅಲ್ಲ ಹುಡುಗ ಅಂತ. 

ಪುಷ್ಪಾ, ಲಕ್ಷ್ಮಿ, ಪ್ರತಾಪಗೌಡ ಎಂಬುವರ ಅಕೌಂಟ್‌ಗೆ ರುದ್ರಗೌಡ ಅವರು ಹಣ ಹಾಕಿದ್ದರು. ಹಣ ವಾಪಸ್ ಕೇಳಿದಾಗ ಪ್ರತಾಪಗೌಡ ಫೋನ್ ಸ್ವಿಚ್‌ಆಫ್ ಮಾಡಿದ್ದಾನೆ. ಫೋನ್ ಸ್ವಿಚ್‌ಆಫ್ ಮಾಡಿದ ಮೇಲೆ ನಾನು ಮೋಸ ಹೋಗಿದ್ದೇನೆ ಎಂದು ರುದ್ರಗೌಡ ಪಾಟೀಲ್‌ಗೆ ಅರಿವಾಗಿದೆ. ಈ ಸಂಬಂಧ ರುದ್ರಗೌಡ ಪಾಟೀಲ್ ಧಾರವಾಡದ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.  
 

Latest Videos
Follow Us:
Download App:
  • android
  • ios