Asianet Suvarna News Asianet Suvarna News

ಕೊರೋನಾ ಕಾಟ: ಸರ್ಕಾರಿ ಬಸ್‌ನಲ್ಲಿ ಫ್ರಿ ಮಾಸ್ಕ್‌!

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಉಚಿತ ಮಾಸ್ಕ್ ವಿತರಣೆ| ಹುಬ್ಬಳ್ಳಿಯಿಂದ ಯರಗುಪ್ಪಿಗೆ ಪ್ರಯಾಣಿಸುವ ಬಸ್‌ನಲ್ಲಿ ಮಾಸ್ಕ್ ವಿತರಿಸಿದ ನಿರ್ವಾಹಕ, ಚಾಲಕ| ಪ್ರಯಾಣಿಕರೇ ನಮ್ಮ ದೇವರು ಎಂದ ಸಾರಿಗೆ ಸಿಬ್ಬಂದಿ| 

NWKRTC Staff Free Mask Distribution to Passengers Coronavirus in Hubballi
Author
Bengaluru, First Published Mar 14, 2020, 3:02 PM IST

ಹುಬ್ಬಳ್ಳಿ(ಮಾ.14): ಪ್ರಯಾಣಿಕರೇ ನಮ್ಮ ದೇವರು ಎಂದು ಹೇಳುವ ಮೂಲಕ ಸಾರ್ವಜನಿಕರ ಸೇವೆಗೆ ಶ್ರಮಿಸುತ್ತಿರುವ ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರು ಸಾರ್ವಜನಿಕ ಪ್ರಯಾಣಿಕರ ಹಿತಾಸಕ್ತಿಗಾಗಿ ಹೊಸ ಪ್ರಯೋಗವೊಂದನ್ನು ಕೈಗೊಂಡಿದ್ದಾರೆ.

ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಯರಗುಪ್ಪಿಗೆ ಪ್ರಯಾಣಿಸುವ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಿರ್ವಾಹಕ ಎಂ.ಎಲ್.ನದಾಫ್ ಹಾಗೂ ಚಾಲಕ ಎಚ್.ಟಿ.ಮಾಯನವರ ಎಂಬುವವರು ಸ್ವಯಂ ಪ್ರೇರಿತರಾಗಿ ಹಾಗೂ ಸ್ವಂತ ಖರ್ಚಿನಲ್ಲಿಯೇ ಪ್ರಯಾಣಿಕರಿಗೆ ಟಿಕೆಟ್ ಮೂಲಕ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲೂ ಕೊರೋನಾ ವೈರಸ್‌ ಭೀತಿ: ವಾಣಿಜ್ಯ ನಗರಿಯ ವ್ಯಾಪಾರಕ್ಕೆ ಬಿತ್ತು ಹೊಡೆತ

ಸಾರಿಗೆ ಸಂಸ್ಥೆ ಅಭಿವೃದ್ಧಿಗೆ ಪ್ರಯಾಣಿಕರೇ ಆಧಾರ ಸ್ಥಂಭ. ಪ್ರಯಾಣಿಕರು ಆರೋಗ್ಯವಾಗಿದ್ದರೇ ಸಂಸ್ಥೆ ಕೂಡ ಉತ್ತಮ ರೀತಿಯಲ್ಲಿ ಇರುತ್ತದೆ ಎಂಬುವ ಸದುದ್ದೇಶದಿಂದ ನಿರ್ವಾಹಕ ಎಂ.ಎಲ್.ನದಾಫ್ ಹಾಗೂ ಚಾಲಕ ಎಚ್.ಟಿ.ಮಾಯನವರ ಅವರು ತಮ್ಮ ಹಣದಲ್ಲಿ ಸುಮಾರು ಮಾಸ್ಕ್ ಖರೀದಿಸಿ ಟಿಕೆಟ್ ಮೂಲಕ ಉಚಿತ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ.
 

Follow Us:
Download App:
  • android
  • ios