Asianet Suvarna News Asianet Suvarna News

ಪೌರತ್ವ ಹೋರಾಟ: ಸಿದ್ದು, ಡಿಕೆಶಿ, ಖಾದರ್, ಉಗ್ರಪ್ಪ, ಜಮೀರ್ ಏನಂದ್ರು?

ಮಂಗಳೂರು ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ/ ಡಿಕೆ ಶಿವಕುಮಾರ್, ಸಿದ್ದರಾಮಯ್ಯರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ/ ಇದು ಸಂವಿಧಾನ ವಿರೋಧಿ ಬಿಲ್ ಎಂದ ಡಿಕೆಶಿ/ ಕರ್ನಾಟಕದಲ್ಲಿ ಏನಾಗ್ತಿದೆ ಎಂದು ಪ್ರಶ್ನೆ ಮಾಡಿದ ಜಮೀರ್

CAA Protest Mangaluru Incident Karnataka Congress Leaders Reaction
Author
Bengaluru, First Published Dec 20, 2019, 10:08 PM IST

ಬೆಂಗಳೂರು(ಡಿ. 20)  ಪೌರತ್ವ  ಕಾಯ್ದೆ ತಿದ್ದುಪಡಿ ಸಂಬಂಧ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಮಂಗಳೂರಿನಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ಪೊಲೀಸ್ ಭದ್ರತೆಯಲ್ಲಿ ಇಡೀ ನಗರ ಇದೆ.  ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಉಗ್ರಪ್ಪ, ಜಮೀರ್ ಅಹಮದ್ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ

ಡಿಕೆ. ಶಿವಕುಮಾರ್: ಈ ಬಿಲ್ ಸಂವಿಧಾನ ವಿರೋಧಿ. ಇದು ಲೋಪಗಳನ್ನೇ ಹೊತ್ತಿಕೊಂಡಿರುವ ಬಿಲ್. ಸಂವಿಧಾನದ ಚೌಕಟ್ಟಿನಿಂದ ಇದು ಹೊರಗಿದೆ. ಅಮಿತ್ ಶಾ ಅವರ ಈ ನಿರ್ಧಾರದಿಂದ ದೇಶ ಹೊತ್ತಿಕೊಂಡು ಉರಿಯುತ್ತಿದೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"

ಯುಟಿ ಖಾದರ್: ಮಂಗಳೂರಿನಲ್ಲಿ ಹಿಂಸಾಚಾರ ನಡೆದಿರುವ ಬಗ್ಗೆ ನೋವಿದೆ. ಮಂಗಳೂರಿನಲ್ಲಿ ಯಾಕೆ ಗೋಲಿಬಾರ್ ಆಯಿತು. ನನ್ನ ತಪ್ಪಿದ್ದರೆ ದೂರು ದಾಖಲಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಯುಟಿ ಖಾದರ್ ಹೇಳಿದ್ದಾರೆ.

"

ಜಮೀರ್ ಅಹಮದ್: ಕರ್ನಾಟಕದಲ್ಲಿ ಏನು ಆಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಮಂಗಳೂರಿನಲ್ಲಿ ಪ್ರತಿಭಟನೆಗೆ ಮೊದಲೇ ಅನುಮತಿ ಪಡೆದುಕೊಳ್ಳಲಾಗಿತ್ತು. ಈಗ 144 ಸೆಕ್ಷನ್ ಹಾಕುವುದು ಎಷ್ಟು ಸರಿ? ಎಂದು ಜಮೀರ್ ಅಹಮದ್ ಖಾನ್ ಪ್ರಶ್ನೆ ಮಾಡಿದ್ದಾರೆ.

"

ಸಿದ್ದರಾಮಯ್ಯ: ಮಂಗಳೂರಿನಲ್ಲಿ ಪೊಲೀಸರು ವಿನಾಕಾರಣ ಗುಂಡು ಹಾರಿಸಿ ಇಬ್ಬರು ಅಮಾಯಕರ ಹತ್ಯೆ ಮಾಡಿದ್ದಾರೆ. ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"

ಉಗ್ರಪ್ಪ: ಮಂಗಳೂರಿಗೆ ಧಾವಿಸಿದ್ದ ಉಗ್ರಪ್ಪ ಅವರನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರು ನೀಡುವ ಹೇಳಿಕೆಗಳಲ್ಲೇ ಅರ್ಥವಿಲ್ಲ. ಹೆಣ ಬೀಳುವಂತೆ ಗುಂಡು ಹೊಡೆಯಿರಿ ಎಂದು ಪೊಲೀಸರು ಹೇಳುತ್ತಿರುವ ಬಗ್ಗೆ ದಾಖಲೆ ಇದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

"

Follow Us:
Download App:
  • android
  • ios