ಬಿಬಿಎಂಪಿ ವ್ಯಾಪ್ತಿಯ ಭಾರತೀಯ ವಿದ್ಯಾಭವನ ಶಾಲೆಯಲ್ಲಿ 2025-26ನೇ ಸಾಲಿನ ನರ್ಸರಿ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಕೊನೆಯ ದಿನಾಂಕವಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಬೆಂಗಳೂರು (ಫೆ.24): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಿಕ್ಷಣ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಮತ್ತು ಬಿಬಿಎಂಪಿ ಪಬ್ಲಿಕ್ ಶಾಲೆಯ ಜಂಟಿ ಸಹಭಯೋಗದಲ್ಲಿ ನಡೆಯುತ್ತಿರುವ ನರ್ಸರಿ ತರಗತಿ(ಸಿ.ಬಿ.ಎಸ್.ಸಿ ಪಠ್ಯಕ್ರಮ)ಗೆ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್, ನಂ. 215ನೇ ಮುಖ್ಯ ರಸ್ತೆ ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಂಗಳೂರು-21 ಈ ವಿದ್ಯಾಸಂಸ್ಥೆಯಲ್ಲಿ ಫ್ರೀ ನರ್ಸರಿ ತರಗತಿಗೆ ದಿನಾಂಕ: 25-02-2025 ರಿಂದ 11-03-2025 ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು.
* ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 11-03-2025 ರಿಂದ 25-03-2025 ರವರೆಗೆ
* ಭರ್ತಿ ಮಾಡಿದ ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ(ಶಿಕ್ಷಣ) 1ನೇ ಮಹಡಿಯ ಅನೆಕ್ಸ್- 3 ಕಟ್ಟಡ,
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು.
* 20-04-2025 ರಂದು ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯಲಿದೆ.
ಇದನ್ನೂ ಓದಿ: ಬೆಂಗಳೂರು ಹಳದಿ ಮಾರ್ಗ ಮೆಟ್ರೋ: ಚಾಲಕ ರಹಿತ ರೈಲು ಪರೀಕ್ಷಾರ್ಥ ಸಂಚಾರ ಯಶಸ್ವಿ!
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:
1 . ಮಗುವಿನ ಪಾಸ್ ಪೋರ್ಟ್ ಸೈಜ್ ಫೋಟೋ - 5 ಸಂಖ್ಯೆ
2. ಮಗುವಿನ ಜೊತೆಗಿರುವ ತಂದೆ ತಾಯಿಯ ಭಾವಚಿತ್ರ(ಕುಟುಂಬ ಭಾವ ಚಿತ್ರ)2B Size
3. ಮಗುವಿನ ಜನನ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. ಜಾತಿ ಪ್ರಮಾಣ ಪತ್ರ
6. ತಂದೆ / ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
7. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್
8. ತಂದೆ / ತಾಯಿಯ ಖಾಯಂ ವಿಳಾಸವಿರುವ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ(ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಮೀ. ಸುತ್ತಮುತ್ತಲಿನ ಅಂತರದಲ್ಲಿ ವಾಸವಾಗಿರಬೇಕು.)
9. ಮಗುವಿನ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. (ಎತ್ತರ, ತೂಕ, ರಕ್ತದ ಗುಂಪು)
10. ಮಗುವಿನ ವರ್ಷ ದಿನಾಂಕ 31-05-2025ಕ್ಕೆ 03 ವರ್ಷ ತುಂಬಿರಬೇಕು ಹಾಗೂ 04 ವರ್ಷದ ಒಳಗಿನ ವಿದ್ಯಾರ್ಥಿಗಳು ನರ್ಸರಿ ತರಗತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸೂಚನೆ: ಅರ್ಜಿ ಪರಿಶೀಲನೆಯ ದಿನ (ದಿ:20-04-2025) ಪೋಷಕರು ಮಗುವಿನ ಜೊತೆಗೆ ದಾಖಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ತರುವುದು ಕಡ್ಡಾಯ.
