Asianet Suvarna News Asianet Suvarna News

ಬೆಂಗಳೂರು: ವೃತ್ತಿಜೀವನದ ಬಗ್ಗೆ ಜಿಗುಪ್ಸೆಗೊಂಡು ಟೆಕ್ಕಿ ಆತ್ಮಹತ್ಯೆ

ಜೀವನದಲ್ಲಿ ಭದ್ರತೆ ಬೇಕಿದ್ದರೆ ಆಗ ಶಾಶ್ವತ ಉದ್ಯೋಗ ಎನ್ನುವುದು ಅತೀ ಅಗತ್ಯವಾಗಿರುವುದು. ಪ್ರತಿಯೊಬ್ಬರು ಕೂಡ ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗಲಿ ಎನ್ನುವ ಆಸೆ ಹೊಂದಿರುತ್ತಾರೆ. ಆದ್ರೆ, ಅದು ಆಗದಿದ್ದಾಗ ಮನಸ್ಸಲ್ಲಿ ನೂರು ಪ್ರಶ್ನೆಗಳು ಕಾಡಲಾರಂಭಿಸುತ್ತವೆ. ಅಷ್ಟೇ ಅಲ್ಲದೇ ಉದ್ಯೋಗ ಸಿಗದಿದ್ದಾಗ ಜಿಗುಪ್ಸೆಯಾಗುವ ಸಾಧ್ಯತೆಗಳು ಹೆಚ್ಚಿ. ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. 28 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ವೃತ್ತಿಜೀವನದಲ್ಲಿ ಯಶಸ್ವಿಯಾಗದೆ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

28 Year Old techie commits suicide By Jumping from building Over Job
Author
Bengaluru, First Published Jan 12, 2020, 2:55 PM IST

ಬೆಂಗಳೂರು, ಜ.12): ತನ್ನ ವೃತ್ತಿಜೀವನದಲ್ಲಿ ಯಶಸ್ವಿಯಾಗದೆ ಖಿನ್ನತೆಗೆ  ಒಳಗಾಗಿದ್ದ 28 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ  ಜೆಪಿ ನಗರ ಸಮೀಪದ ಕೊಣನಕುಂಟೆಯಲ್ಲಿನ ಅಪಾರ್ಟ್ಮೆಂಟ್ ಸಂಕೀರ್ಣದ 3ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಟೀಂನಲ್ಲಿ ಸ್ಮಾರ್ಟ್ ವರ್ಕರ್ ಆಗಲು ನಿಮ್ಮಲ್ಲಿವೆಯೇ ಈ ಗುಣಗಳು? ಚೆಕ್ ಮಾಡಿಕೊಳ್ಳಿ

ಆತ್ಮಹತ್ಯೆಗೆ ಶರಣಾಗಿರುವ ಯುವಕನನ್ನು ಪಂಚವಟಿ ಬಿಡಿಎ ಅಪಾರ್ಟ್ಮೆಂಟ್ ನಿವಾಸಿ ಗಿರೀಶ್ ಕೆ ಜೆ ಎಂದು ಗುರುತಿಸಲಾಗಿದೆ. ಅಪಾರ್ಟ್ಮೆಂಟಿನ ನಿವಾಸಿಗಳು ಕೆಳಗೆ ಕಿರುಚಾಟ ನಡೆಸುತ್ತಿರುವುದು ಕೇಳಿದಾಗ ಗಿರೀಶ್ ಸ್ನೇಹಿತರಿಗೆ ತಿಳಿದಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಅಷ್ಟೊತ್ತಿಗೆ ಗಿರೀಶ್ ಸಾವನ್ನಪ್ಪಿದ್ದಾನೆ.

ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಕೋರ್ಸ್ ಪೂರ್ಣಗೊಳಿಸಿದ್ದ ಮುಳಬಾಗಿಲು ಮೂಲದ ಗಿರೀಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ವಾಸವಿದ್ದನು.

ಲೇಆಫ್‌ ಯುಗದಲ್ಲಿ ಕೆಲಸ ಉಳಿಸಿಕೊಳ್ಳುವುದು ಹೇಗೆ?

ತನ್ನದೇ ಸ್ವಂತ ಸಾಫ್ಟ್‌ವೇರ್ ಸಂಸ್ಥೆಯನ್ನು ತೆರೆಯಲು ಬಯಸಿದ್ದ. ಆದ್ರೆ, ಅದ್ಯಾವುದು ಆಗದಿರುವುದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ರಾತ್ರಿ 7.30 ರ ಸುಮಾರಿಗೆ ಗಿರೀಶ್ ತನ್ನ ರೂಮ್‌ಮೇಟ್‌ಗಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow Us:
Download App:
  • android
  • ios