ಚಲಿಸುವ ರೈಲಿನಲ್ಲಿಯೇ ಮಗುವಿಗೆ ಜನ್ಮ, ಸೆಲ್ಯೂಟ್ ಬೆಂಗಳೂರು ಪೊಲೀಸ್
ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ/ ಅಧಿಕಾರಿಗಳ ಕಾರ್ಯದಿಂದ ಮಗು ಮತ್ತು ತಾಯಿ ಸೇಫ್/ ಶ್ರಮಿಕ್ ರೈಲಿನಲ್ಲಿ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ತೆರಳಿದ್ದ ದಂಪತಿ
ಬೆಂಗಳೂರು(ಮೇ 24) ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ ರೈಲಿನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ನಗರದ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ದಂಪತಿ ಊರಿಗೆ ಹಿಂದಿರುಗುತ್ತಿದ್ದರು.
ಉತ್ತರಪ್ರದೇಶ ಮೂಲದ ಸಂಗೀತಾ ಹಾಗೂ ಸಂದೀಪ್ ದಂಪತಿ ಇದೇ 21 ರಂದು ಶ್ರಮಿಕ್ ರೈಲಿನಲ್ಲಿ ತವರು ರಾಜ್ಯಕ್ಕೆ ಹೊರಟಿದ್ದರು. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಮಹಿಳೆ ರೈಲಿನಲ್ಲಿಯೇ ಜನ್ಮ ನೀಡಿದ್ದಾರೆ. ಸದ್ಯ ಕ್ಷೇಮವಾಗಿ ತವರು ಸೇರಿದ್ದಾರೆ.
ಎಲ್ಲಾ ಲಾಕ್ ಡೌನ್ ಎಫೆಕ್ಟ್; ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ
ತುಂಬು ಗರ್ಭಿಣಿಗೆ ಸಹಾಯಹಸ್ತ ಚಾಚಿದ ಇಬ್ಬರು ಆಧಿಕಾರಿಗಳನ್ನು ಮರೆಯುವಂತೆ ಇಲ್ಲ. ರಾಜ್ಯದ ಐಪಿಎಸ್ ಹಾಗೂ ಐಎಫ್ಎಸ್ ಆಧಿಕಾರಿಗಳು ನೆರವು ನೀಡಿದ್ದಾರೆ. ತವರೂರಿಗೆ ಹೋಗಲೇಬೇಕೆಂದು ಮಹಿಳೆ ಪಟ್ಟು ಹಿಡಿದಿದ್ದರು . ಗರ್ಭಿಣಿಯಾಗಿದ್ದರಿಂದ ಟ್ರಾವೆಲ್ ಮಾಡೋದು ಬೇಡ ಎಂದು ಮಹಿಳಾ ಐಎಫ್ಎಸ್ ಅಧಿಕಾರಿ ಬುದ್ಧಿಮಾತು ಹೇಳಿದ್ದರು. ಆದರೆ ಮಹಿಳೆ ಪಟ್ಟು ಸಡಿಲಿಸಿರಲಿಲ್ಲ.
ಈ ಕಾರಣಕ್ಕೆ ಡಿಸಿಪಿ ಎಂ.ಎನ್. ಅನುಚೇತ್ ಸೇವಾಸಿಂದು ಪೋರ್ಟಲ್ ನಲ್ಲಿ ದಂಪತಿಯ ನೋಂದಣಿ ಮಾಡಿಸಿದ್ದರು. ನೋಂದಣಿ ಮಾಡಿ ಟಿಕೆಟ್ ಕೊಡಿಸಿ ರೈಲಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಸಹ ಮಾಡಿಸಿದ್ದರು.
ಮಾರ್ಗ ಮಧ್ಯೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಶನಿವಾರ ರೈಲು ಉತ್ತರ ಪ್ರದೇಶದ ಲಕ್ನೋ ತಲುಪಿದೆ. ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಗೆ ಪೋಟೋ ಶೇರ್ ಮಾಡಿರೋ ದಂಪತಿ ಧನ್ಯವಾದ ತಿಳಿಸಿದ್ದರೆ. ಡಿಸಿಪಿ ಅನುಚೇತ್ ಹಾಗೂ ಐಎಫ್ಎಸ್ ಅಧಿಕಾರಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.