Asianet Suvarna News Asianet Suvarna News

ಗರ್ವಿಷ್ಠ ರಾಹುಲ್ ಹಿಂದಿರುವ ಶಕ್ತಿ ಯಾರು?: ಬಿಜೆಪಿ ಪ್ರಶ್ನೆ!

ರಫೆಲ್ ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್| ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಸುಪ್ರೀಂಕೋರ್ಟ್| ಪ್ರಧಾನಿ ಹಾಗೂ ದೇಶದ ಮುಂದೆ ರಾಹುಲ್ ಕ್ಷಮೆಯಾನೆಗೆ ಬಿಜೆಪಿ ಆಗ್ರಹ| 'ಪ್ರಧಾನಿ ತೆಜೋವಧೆ ಮಾಡಲೆತ್ನಿಸಿದ ರಾಹುಲ್ ದೇಶದ ಕ್ಷಮೆಯಾಚಿಸಬೇಕು'| ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಒತ್ತಾಯ| ರಾಹುಲ್ ಗಾಂಧಿ ಹಿಂದಿರುವ ಅಗೋಚರ ಶಕ್ತಿ ಯಾವುದು ಎಂದು ಕೇಳಿದ ರವಿಶಂಕರ್|

Who Were The Forces Behind Rahul Gandhi Asks BJP
Author
Bengaluru, First Published Nov 14, 2019, 6:28 PM IST

ನವದೆಹಲಿ(ನ.14): ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ಆರೋಪ ಕುರಿತ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ರಫೆಲ್ ಕುರಿತು ದೇಶದ ಮುಂದೆ ಸುಳ್ಳುಗಳ ಸರಮಾಲೆ ಕಟ್ಟಿದ್ದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

'ರಫೇಲ್ ಕುರಿತು ಸುಳ್ಸುದ್ದಿ ಹಬ್ಬಿಸಿದ ರಾಹುಲ್ ದೇಶದ ಕ್ಷಮೆ ಯಾಚಿಸ್ಬೇಕು'

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಪ್ರಧಾನಿ ಅವರ ವೈಯಕ್ತಿಕ ತೆಜೋವಧೆ ಮಾಡಲೆತ್ನಿಸಿದ ರಾಹುಲ್ ಮೋದಿ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ರಫೆಲ್ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ತಪರಾಕಿ ನೀಡಿದೆ. ಈ ಹಿನ್ನೆಲೆಯಲ್ಲಿ ಅವರು ಮೋದಿ ಅವರ ಹಾಗೂ ದೇಶದ ಕ್ಷಮೆಯಾಚಿಸಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದರು.

ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

ರಫೆಲ್ ವಿಚರದಲ್ಲಿ ರಾಹುಲ್ ಗಾಂಧಿ ಭಂಡತನ ಪ್ರದರ್ಶಿಸಿದ್ದು, ಅವರ ಈ ಗರ್ವದ ಹಿಂದಿರುವ ಶಕ್ತಿ ಯಾರೆಂಬುದನ್ನು ರಾಹುಲ್ ಹೇಳಲಿ ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದರು. 

Follow Us:
Download App:
  • android
  • ios