Asianet Suvarna News Asianet Suvarna News

ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!

ವಿದೇಶದಲ್ಲಲ್ಲ, ಮುಂಬೈನಲ್ಲಿ ರೋಗಿಗಳಿಗೆ ಕೊರೋನಾ ಪೀಡಿತರ ಬಳಿ ಚಿಕಿತ್ಸೆ| ಇತ್ತ ಹೆಣಗಳ ರಾಶಿ, ಅಲ್ಲೇ ಮಲಗುತ್ತಿದ್ದಾರೆ ರೋಗಿಗಳು| ಮುಂಬೈ ಆಡಳಿತದ ಇದೆಂತಹ ನಿರ್ಲಕ್ಷ್ಯ?

Viral video shows bodies of coronavirus victims lying next to patients at Sion hospital mumbai
Author
Bangalore, First Published May 7, 2020, 5:13 PM IST

ಮುಂಬೈ(ಮೇ.05): ಇರಾನ್, ಲಂಡನ್, ಈಕ್ವೆಡಾರ್ ಹೀಗೆ ವಿದೇಶಗಳಲ್ಲಿ ಕೊರೋನಾದಿಂದ ಮೃತಪಟ್ಟವರ ಶವ ಪ್ಲಾಸ್ಟಿಕ್‌ಗಳಲ್ಲಿ ಸುತ್ತಿಡುವ ಸುದ್ದಿ ಕಳೆದೊಂದು ತಿಂಗಳಿನಿಂದ ಓದಿದ್ದೇವೆ, ವಿಡಿಯೋಗಳನ್ನು ನೋಡಿದ್ದೇವೆ. ಆದರೀಗ ನಮ್ಮದೇ ದೇಶದಲ್ಲಿ ನೆರೆ ರಾಜ್ಯದಲ್ಲಿ ಇಂತ ಶಾಕಿಂಗ್ ಘಟನೆ ನಡೆದಿದ್ದು, ಸದ್ಯ ಇದರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. 

ಮುಂಬೈನ ಆಸ್ಪತ್ರೆಯೊಂದರ ವಿಡಿಯೋ ಇದಾಗಿದ್ದು, ಕೊರೋನಾದಿಂದ ಮೃತಪಟ್ವರನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಸುತ್ತಿಡಲಾಗಿದ್ದು, ಇಲ್ಲೇ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯಗಳು ಇದರಲ್ಲಿವೆ. ಇದನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಇದು ಮುಂಬೈನ ಸಿಯೋನ್ ಆಸ್ಪತ್ರೆಯ ದೃಶ್ಯಗಳೆನ್ನಲಾಗಿದೆ. ಇದು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಒಂದು. 

ರಸ್ತೆ ಬದಿ ಗುಂಡಿಯಲ್ಲಿ ಕೊರೋನಾಗೆ ಬಲಿಯಾದವರ ಸಮಾಧಿ: ಶಾಕಿಂಗ್ ದೃಶ್ಯ ರಿವೀಲ್

ಇನ್ನು ವಿಡಿಯೋದಲ್ಲಿ ಬರೋಬ್ಬರಿ ಏಳು ಶವಗಳು ಕಂಡು ಬರುತ್ತಿದ್ದರೆ, ಅತ್ತ ಆ ಹೆಣಗಳ ಪಕ್ಕದಲ್ಲೇ ಸೋಂಕಿತರೊಬ್ಬರಿಗೆ ಚಿಕಿತ್ಸೆ ನೀಡುತ್ತಿರುವುದನ್ನೂ ಗಮನಿಸಬಹುದಾಗಿದೆ. ಸೋಂಕಿತರ ಕೆಲ ಕುಟುಂಬ ಸದಸ್ಯರೂ ಅಲ್ಲಿರುವುದನ್ನು ನೋಡಬಹುದಾಗಿಎ. ಇನ್ನು ಶವದ ಪಕ್ಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಇದೇನೂ ಹೊಸತಲ್ಲ ಎಂಬಂತಿದ್ದಾರೆ. 

ಮಾರಾಷ್ಟ್ರದ ವಿಪಕ್ಷ ನಾಯಕ, ಬಿಜೆಪಿ ಶಾಸಕ ನಿತೀಶ್ ರಾಣೆ ಬುಧವಾರ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಸಿಯೋನ್ ಆಸ್ಪತ್ರೆಯಲ್ಲಿ ರೋಗಿಗಳು ಹೆಣದ ಪಕ್ಕದಲ್ಲೇ ಮಲಗುತ್ತಿದ್ದಾರೆ. ಇದು ಅತಿಯಾಯ್ತು, ಇದು ಯಾವ ಬಗೆಯ ಆಡಳಿತ? ಇದು ತೀವ್ರ ನಾಚಿಕೆಗೇಡಿನ ವಿಚಾರ ಎಂದು ಬರೆದಿದ್ದಾರೆ.

ಕೊರೋನಾದಿಂದ ಸಾವು, ತಿಂಗಳ ಬಳಿಕ ಜೀವಂತವಾದಳು!

ಮಹಾರಾಷ್ಟ್ರದಲ್ಲಿ ಆಡಳಿತರೂಢ ಮೈತ್ರಿ ಪಕ್ಷದ, ಕಾಂಗ್ರೆಸ್ ನಾಯಕ  ಮಿಲಿಂದ್ ದೇವವ್ರಾ ಕೂಡಾ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಯೋನ್ ಆಸ್ಪತ್ರೆಯಲ್ಲಿ ರೋಗಿಗಳ ಪಕ್ಕದಲ್ಲಿ ಹೆಣಗಳನ್ನು ನೋಡಿ ಬೇಜಾರಾಯಿತು. ಬಿಎಂಸಿ ಯಾಕೆ ನಿಯಮಗಲನ್ನು ಪಾಲಿಸುತ್ತಿಲ್ಲ? ಈ ಕುರಿತು ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

Follow Us:
Download App:
  • android
  • ios