Asianet Suvarna News Asianet Suvarna News

ಶೋಧಿಸಿದ ಹೊಸ ಜೇಡಕ್ಕೆ ಸಚಿನ್ ಹೆಸರಿಟ್ಟ ಗುಜರಾತ್ ವಿಜ್ಞಾನಿ

ಕಂಡು ಹಿಡಿದ ಹೊಸ ಜೇಡಕ್ಕೆ ಕ್ರಿಕೆಟಿಗನ ಹೆಸರಿಟ್ಟ ಗುಜರಾತ್ ವಿಜ್ಞಾನಿ | ಅಹಮಹಾಬಾದ್‌ನ ಪರಿಸರ ವಿಜ್ಞಾನಿ ಧ್ರುವ ಪ್ರಜಾಪತಿ ಅವರು ‘ಸಚಿನ್ ತೆಂಡೂಲ್ಕರ್’ ದೊಡ್ಡ ಅಭಿಮಾನಿ | ಹಾಗಾಗಿ ಅವರ ಹೆಸರನ್ನೇ ಇಟ್ಟಿದ್ದಾರೆ  

Scientist names newly discovered spider species as Sachin Tendulkar
Author
Bengaluru, First Published Nov 13, 2019, 8:28 AM IST

ಅಹಮದಾಬಾದ್ (ನ. 13): ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೂ, ಜೇಡರ ಹುಳಕ್ಕೂ ಏನು ಸಂಬಂಧ? ಅರೇ ಇದೇನು ಪ್ರಶ್ನೆ ಅಂತೀರಾ? ಸಂಬಂಧ ಇದೆ! ಹೌದು. ಇತ್ತೀಚೆಗೆ ತಾವು ಶೋಧಿಸಿದ ಹೊಸ ತಳಿಯ ಜೇಡಕ್ಕೆ ಅಹಮಹಾಬಾದ್‌ನ ಪರಿಸರ ವಿಜ್ಞಾನಿ ಧ್ರುವ ಪ್ರಜಾಪತಿ ಅವರು ‘ಸಚಿನ್ ತೆಂಡೂಲ್ಕರ್’ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತೆಂಡೂಲ್ಕರ್ ಅವರಿಗೆ ದೊಡ್ಡ ಗೌರವ ಸಲ್ಲಿಸಿದ್ದಾರೆ.

 

ಧ್ರುವ ಅವರು ‘ಜೇಡ ಜೀವವರ್ಗೀಕರಣ’ ಎಂಬ ವಿಷಯದಲ್ಲಿ ಪಿಎಚ್‌ಡಿ ಕೂಡ ಮಾಡುತ್ತಿದ್ದು, ಅವರಿಗೆ ಸಚಿನ್ ಅವರು ನೆಚ್ಚಿನ ಕ್ರಿಕೆಟಿಗ. ಹೀಗಾಗಿ ಇತ್ತೀಚೆಗೆ ತಾವು ಕಂಡುಹಿಡಿದ ಹೊಸ ಜೇಡದ ತಳಿಗೆ ತೆಂಡೂಲ್ಕರ್ ಅವರ ಹೆಸರು ಇಡಲು ನಿರ್ಧರಿಸಿದ್ದಾರೆ. ಒಟ್ಟು 2 ಜೇಡದ ತಳಿಗಳನ್ನು ಧ್ರುವ ಸಂಶೋಧಿಸಿದ್ದು, ಒಂದಕ್ಕೆ ‘ಮರೆಂಗೋ ಸಚಿನ್ ತೆಂಡೂಲ್ಕರ್’ ಎಂದೂ, ಇನ್ನೊಂದಕ್ಕೆ ‘ಇನೊಮರೆಂಗೋ ಚವರಪಟೇರಾ’ ಎಂದೂ ನಾಮಕರಣ ಮಾಡಿದ್ದಾರೆ.

ಸಂತ ಎಲಿಯಾಸ್ ಚವರ ಅವರು ಕೇರಳದ ಸಂತ ಪಾದ್ರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ಕೊಟ್ಟವರು. ಚವರ ಅವರೂ ಧ್ರುವ ಅವರ ನೆಚ್ಚಿನ ವ್ಯಕ್ತಿ.

 

Follow Us:
Download App:
  • android
  • ios