ರಾಷ್ಟ್ರಪತಿ ಭವನಕ್ಕೂ ಕೊರೋನಾ ಭಯ!
ರಾಷ್ಟ್ರಪತಿ ಭವನಕ್ಕೂ ಕೊರೋನಾ ಭಯ| ಭವನದ ಕಾರ್ಮಿಕನ ಬಂಧು ಕೊರೋನಾಗೆ ಬಲಿ| ಈತನ ಅಂತ್ಯಕ್ರಿಯೆಗೆ ಹೋಗಿದ್ದ ಕಾರ್ಮಿಕ| ಕಾರ್ಮಿಕ ಕ್ವಾರಂಟೈನ್‌ಗೆ, ಈತನ ಮನೆ ಸೀಲ್
ನವದೆಹಲಿ(ಏ.19): ರಾಷ್ಟ್ರಪತಿ ಭವನಕ್ಕೆ ಮತ್ತೆ ಕೊರೋನಾ ವೈರಸ್ ಭೀತಿ ಶುರುವಾಗಿದೆ. ಭವನದ ಸ್ವಚ್ಛತಾ ಕಾರ್ಮಿಕನೊಬ್ಬನ ಬಂಧು ಕೊರೋನಾದಿಂದ ಮೃತಪಟ್ಟಿರುವುದೇ ಈ ಆತಂಕಕ್ಕೆ ಕಾರಣವಾಗಿದೆ.
ವಿಷಯ ತಿಳಿದ ಕೂಡಲೇ ಈ ಸ್ವಚ್ಛತಾ ಕಾರ್ಮಿಕ ಹಾಗೂ ಆತನ ಕುಟುಂಬವನ್ನು ಭವನದ ಆವರಣದಲ್ಲೇ ಇರುವ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಹಾಗೂ ಆತನ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಇದೇ ಪ್ರದೇಶದಲ್ಲಿರುವ ಇತರ 30 ಮನೆಗಳ ಜನರನ್ನು ಸ್ವಯಂಪ್ರೇರಿತ ಏಕಾಂತವಾಸದಲ್ಲಿ ಇರುವಂತೆ ಸೂಚಿಸಲಾಗಿದೆ.
ದೇಶದಲ್ಲಿ ಕೊರೋನಾಗೆ 500 ಸಾವು, 15,000 ಮಂದಿಗೆ ಸೋಂಕು!
ಈ ಸ್ವಚ್ಛತಾ ಕಾರ್ಮಿಕ, ತನ್ನ ಮೃತ ಬಂಧುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ. ಅಲ್ಲದೆ, ಈ ಬಂಧು ಆಸ್ಪತ್ರೆಯಲ್ಲಿ ಇರುವ ವೇಳೆ ಆತನ ಕುಟುಂಬದವರು ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.
ಇತ್ತೀಚೆಗೆ ಕೊರೋನಾ ಪೀಡಿತ ಗಾಯಕಿ ಕನಿಕಾ ಕಪೂರ್‌ರನ್ನು ಭೇಟಿ ಮಾಡಿದ್ದ ಬಿಜೆಪಿ ಸಂಸದ ದುಷ್ಯಂತ ಸಿಂಗ್, ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿ ಮಾಡಿದ್ದರು. ಆಗ ಕೋವಿಂದ್‌ಗೂ ಕೊರೋನಾ ಭಯ ಕಾಡಿ, 14 ದಿನದ ಏಕಾಂತವಾಸ ಘೋಷಿಸಿಕೊಂಡಿದ್ದರು.