Asianet Suvarna News Asianet Suvarna News

ರಫೆಲ್ ತೀರ್ಪು: ತನಿಖೆಯ ವಿಸ್ತಾರವಾದ ಬಾಗಿಲು ತೆರೆದಿದೆ ಎಂದ ರಾಹುಲ್!

ರಫೆಲ್ ತೀರ್ಪು ತನಿಖೆಯ ವಿಸ್ತಾರವಾದ ಬಾಗಿಲು ತೆರೆದಿದೆ ಎಂದ ರಾಹುಲ್| ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದ ರಾಹುಲ್ ಗಾಂಧಿ| ರಫೆಲ್ ಒಪ್ಪಂದದ ತನಿಖೆಗೆ ಸುಪ್ರೀಂಕೋರ್ಟ್ ಹಾದಿ ಮಾಡಿಕೊಟ್ಟಿದೆ ಎಂದ ರಾಹುಲ್| 'ಬಿಜೆಪಿ ಸಂಭ್ರಮಾಚರಣೆಯನ್ನು ನಿಲ್ಲಿಸಿ ತನಿಖೆಯತ್ತ ಗಮನ ಹರಿಸಬೇಕು'|

Rahul Gandhi Called All-Party Parliamentary Inquiry On Rafale Scam
Author
Bengaluru, First Published Nov 14, 2019, 7:48 PM IST

ನವದೆಹಲಿ(ನ.14): ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಮರುಪರಿಶೀಲನೆ ಅರ್ಜಿ ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಆದೇಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶ ತನಿಖೆಯ ವಿಸ್ತಾರವಾದ ಬಾಗಿಲನ್ನು ತೆರೆದಿದ್ದು, ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.

ರಫೇಲ್ ಹಗರಣದ ಅರ್ಜಿ ವಜಾ: ಮೋದಿಗೆ ಕ್ಲೀನ್ ಚಿಟ್, ರಾಹುಲ್‌ಗೆ ಮುಖಭಂಗ!

ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸುಪ್ರೀಂಕೋರ್ಟ್ ವಿಸ್ತಾರವಾದ ಬಾಗಿಲು ತೆರೆದಿದೆ. ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸಬೇಕಾಗಿದ್ದು, ಜಂಟಿ ಸಂಸದೀಯ ಸಮಿತಿ ರಚಿಸುವ ಮೂಲಕ ತನಿಖೆಗೆ ಮುಂದಾಗಬೇಕೆಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ರಫೆಲ್ ಒಪ್ಪಂದದ ತನಿಖೆಗೆ ಸುಪ್ರೀಂಕೋರ್ಟ್ ಹಾದಿ ಮಾಡಿಕೊಟ್ಟಿದ್ದು, ಬಿಜೆಪಿ ಸಂಭ್ರಮಾಚರಣೆಯನ್ನು ನಿಲ್ಲಿಸಿ ತನಿಖೆಯತ್ತ ಗಮನ ಹರಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜಿವಾಲಾ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

'ರಫೇಲ್ ಕುರಿತು ಸುಳ್ಸುದ್ದಿ ಹಬ್ಬಿಸಿದ ರಾಹುಲ್ ದೇಶದ ಕ್ಷಮೆ ಯಾಚಿಸ್ಬೇಕು'

ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿಯಲ್ಲಿ ಯಾವುದೇ ಅರ್ಹ ಅಂಶಗಳು ಕಂಡುಬಾರದ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್  ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತು.

ಗರ್ವಿಷ್ಠ ರಾಹುಲ್ ಹಿಂದಿರುವ ಶಕ್ತಿ ಯಾರು?: ಬಿಜೆಪಿ ಪ್ರಶ್ನೆ!

Follow Us:
Download App:
  • android
  • ios