ಭಾರತದ ಚೊಚ್ಚಲ ಸೋಂಕು ಪತ್ತೆ ಕಿಟ್ ಅಭಿವೃದ್ಧಿ ಯಶಸ್ವಿ!
ಭಾರತದ ಚೊಚ್ಚಲ ಸೋಂಕು ಪತ್ತೆ ಕಿಟ್ ಅಭಿವೃದ್ಧಿ ಯಶಸ್ವಿ| ಎರಡೂವರೆ ಗಂಟೆಯಲ್ಲಿ 90 ಮಾದರಿ ಪರೀಕ್ಷೆ ಸಾಮರ್ಥ್ಯ
ನವದೆಹಲಿ(ಮೇ.11): ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ವಿರುದ್ಧ ಹೋರಾಟದ ನಿಟ್ಟಿನಲ್ಲಿ ಭಾರತವು ಕೊರೋನಾದ ಚೊಚ್ಚಲ ಕಿಟ್‌ವೊಂದನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ನೂತನ ಸೋಂಕು ಪತ್ತೆ ಕಿಟ್ ಮೂಲಕ ಕೇವಲ ಎರಡೂವರೆ ಗಂಟೆಯಲ್ಲಿ ಒಮ್ಮೆಲೇ 90 ಕೊರೋನಾ ಮಾದರಿಗಳನ್ನು ಪರೀಕ್ಷಿಸಬಹುದಾಗಿದ್ದು, ಕೊರೋನಾ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರತಿಪಾದಿಸಿದ್ದಾರೆ.
ತಬ್ಲೀಘಿ ಆಯ್ತು, ಈಗ ಅಜ್ಮೀರ್ ಕಂಟಕ: ಕೊರೋನಾ ಕಾಟಕ್ಕೆ ಬೆಳಗಾವಿ ಸುಸ್ತೋ ಸುಸ್ತು..!
ಈ ಬಗ್ಗೆ ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ ನೂತನ ಹಾಗೂ ಮಹತ್ವದ ಕೊರೋನಾ ಪತ್ತೆ ಕಿಟ್ ಒಂದನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಕೋವಿಡ್-19ಗೆ ತುತ್ತಾಗಿರುವ ನಾಗರಿಕರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ.
ಅಲ್ಲದೆ, ಭಾರತೀಯ ನಾಗರಿಕರಲ್ಲಿ ಕೊರೋನಾ ವಿರುದ್ಧ ಹೋರಾಡುವ ಪ್ರತಿಕಾಯ ಸಾಮರ್ಥ್ಯವಿದೆಯೇ ಎಂಬುದರ ಅಧ್ಯಯನಕ್ಕೂ ಈ ನೂತನ ಟೆಸ್ಟಿಂಗ್ ಕಿಟ್ ನೆರವಾಗಲಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.