ಕಾಯ್ದೆ ವಿರೋಧಿಸುವ ಪೌರರು: ಆಂಬುಲೆನ್ಸ್‌ಗೆ ದಾರಿಬಿಟ್ಟ ಜಾಮಿಯಾ ಪ್ರತಿಭಟನಾಕಾರರು!
ಪೌರತ್ವ ಕಾಯ್ದೆ ವಿರೋಧಿಸಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ| ಪ್ರತಿಭಟನೆಯ ಆಕ್ರೋಶದ ನಡುವೆಯೂ ಮಾನವೀಯತೆ ಮೆರೆದ ವಿದ್ಯಾರ್ಥಿಗಳು| ಆ್ಯಂಬುಲೆನ್ಸ್‌ಗೆ ದಾರಿ, ಟ್ರಾಫಿಕ್ ಜಾಮ್ ಆಗದಂತೆ ನಿಗಾ ವಹಿಸಿದ ವಿದ್ಯಾರ್ಥಿಗಳು
ನವದೆಹಲಿ[ಡಿ.18]: ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸೇರಿದಂತೆ, ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಿದ್ದರೂ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದ್ದು, ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಜಾಮಿಯಾ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಆಋಂಭಿಸಿದ್ದಾಋಎ. ಆಷದರೀಗ ಈ ಪ್ರತಿಭಟನೆಯ ತೀವ್ರತೆಯ ನಡುವೆಯೂ ವಿದ್ಯಾರ್ಥಿಗಳ ಮಾನವೀಯ ನಡೆ ನೆಟ್ಟಿಗರ ಮನಗೆದ್ದಿದೆ.
ಹೌದು ಪೌರತ್ವ ಕಾಯ್ದೆ ವಿರುದ್ಧ ಸಿಡಿದೆದ್ದಿರುವ ವಿದ್ಯಾರ್ಥಿಗಳು ಿದನ್ನು ಹಿಂಪಡೆಯುವಂತೆ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಕ್ಕೂ ಜಗ್ಗದೇ ದೆಹಲಿಯ ರಸ್ತೆಗಳಲ್ಲಿ ಈ ಕಾಯ್ದೆ ವಿರುದ್ಧ ಘೋಷಣೆ ಕೂಗಲಾರಂಭಿಸಿದ್ದಾರೆ. ಹೀಗಿದ್ದರೂ ವಿದ್ಯಾರ್ಥಿಗಳು ತಮ್ಮ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿ ಎಂಬಂತಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಆ್ಯಂಬುಲೆನ್ಸ್‌ಗೆ ಶಿಸ್ತಿನಿಂದ ದಾರಿ ಮಾಡಿಕೊಟ್ಟಿರುವ ದೃಶ್ಯಗಳಿವೆ.
ರಾಜಕೀಯ ನಾಯಕರು ತೆರಳುವಾಗ ಜೀರೋ ಟ್ರಾಫಿಕ್ ಮಾಡುವ ಭರದಲ್ಲಿ ಆ್ಯಂಬುಲೆನ್ಸ್‌ಗಳನ್ನು ತಡೆ ಹಿಡಿಯುವುದು, ಟ್ರಾಫಿಕ್ ಜಾಮ್ ಆದಾಗ ಆ್ಯಂಬುಲೆನ್ಸ್‌ಗೆ ದಾರಿ ಕೊಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ವೈರಲ್ ಆಗುತ್ತವೆ. ಹೀಗಿರುವಾಗ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪರಿಸ್ಥಿತಿಯನ್ನು ಅರಿತು ಇಂತಹ ಮಾನವೀಯತೆ ಮೆರೆದಿರುವುದು ನೆಟ್ಟಿಗರ ಮನ ಗೆದ್ದಿದೆ. ಇಷ್ಟೇ ಅಲ್ಲದೇ ಟ್ರಾಫಿಕ್ ಜಾಮ್ ಆಗದಂತೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ದಾರಿ ಮಾಡಿಕೊಟ್ಟು ಜನ ಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯಾರ್ಥಿಗಳು ನಿಗಾ ವಹಿಸುತ್ತಿದ್ದಾರೆ. ಈ ವಿಡಿಯೋಗಳೂ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
ಪ್ರತಿಭಟನೆ ಕಾವಿನಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ ಜಾಮಿಯಾ ವಿದ್ಯಾರ್ಥಿಗಳು!
ಇನ್ನು ಕಳೆದೆರಡು ದಿನಗಳ ಹಿಂದಷ್ಟೇ ಜಾಮಿಯಾ ವಿದ್ಯಾರ್ಥಿಗಳು ಪ್ರತಭಟನೆಯ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಕಸವನ್ನೆತ್ತಿ ಸ್ವಚ್ಛತೆಗೆ, ಸ್ವಚ್ಛ ಭಾರತ ಅಭಿಯಾನಕ್ಕೆ ಮಹತ್ವ ನೀಡಿದ್ದ ವಿಚಾರವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರತಿಭಟನೆ ನಡೆಸುತ್ತಿದ್ದರೂ ಮೌಲ್ಯ್ಗಳನ್ನು ಮರೆಯದೆ, ತಮ್ಮ ಕರ್ತವ್ಯವನ್ನರಿತು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ನಡೆ ಅನೇಕರ ಮನ ಗೆದ್ದಿದೆ.