ಕೊರೋನಾ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚಿರುವ 30 ದೇಶಗಳ ಪಟ್ಟಿಯಲ್ಲಿ ಭಾರತ!

ಭಾರತಕ್ಕೂ ಕೊರೋನಾ ವೈರಸ್‌ ಅಪಾಯ| ಮಾರಕ ವೈರಾಣು ಹಬ್ಬುವ ಸಾಧ್ಯತೆ ಹೆಚ್ಚಿರುವ 30 ದೇಶಗಳ ಪಟ್ಟಿಯಲ್ಲಿ ಭಾರತ| ಜನರ ಚಲನವಲನ ಆಧರಿಸಿ ಬ್ರಿಟನ್‌ನ ಸೌಥಾಂಪ್ಟನ್‌ ವಿಶ್ವವಿದ್ಯಾಲಯ ಸಮೀಕ್ಷೆ

India among top 30 countries at high risk from coronavirus spread Study

ನವದೆಹಲಿ[ಜ.30]: ಚೀನಾದಲ್ಲಿ ಕೆಲವೇ ದಿನಗಳ ಅಂತರದಲ್ಲಿ 132 ಮಂದಿಯನ್ನು ಬಲಿ ಪಡೆದು ತೀವ್ರ ಆತಂಕ ಹುಟ್ಟಿಸಿರುವ ಮಾರಕ ಕೊರೋನಾ ವೈರಸ್‌ನಿಂದ ಅಪಾಯಕ್ಕೆ ತುತ್ತಾಗಬಹುದಾದ ಸಂಭಾವ್ಯ 30 ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಇದೆ ಎಂಬ ಆಘಾತಕಾರಿ ಸಂಗತಿಯೊಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಕೊರೋನಾ ವೈರಸ್‌ ತಾಂಡವವಾಡುತ್ತಿರುವ ಚೀನಾದಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನ ಪ್ರಯಾಣಿಕರ ಸಂಖ್ಯೆ ಮತ್ತು ಅವರ ಚಲನವಲನವನ್ನು ಆಧರಿಸಿ ಬ್ರಿಟನ್‌ ಮೂಲದ ಸೌಥ್‌ಹ್ಯಾಂಪ್ಟನ್‌ ವಿಶ್ವವಿದ್ಯಾಲಯದ ಸಂಶೋಧಕರು ಅಪಾಯದಲ್ಲಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಹೀಗಿದೆ ಕೊರೋನಾ ಬಿಟ್ಕೊಂಡ ವುಹಾನ್ ನಗರ: ಮೂಲೆ ಮೂಲೆಯೂ ವೈರಸ್ ಆಗರ!

ಈ ಪಟ್ಟಿಯಲ್ಲಿ ಥಾಯ್ಲೆಂಡ್‌ ಮೊದಲ ಸ್ಥಾನದಲ್ಲಿದ್ದರೆ, ಭಾರತ 23ನೇ ಸ್ಥಾನದಲ್ಲಿದೆ. ಜಪಾನ್‌ (2), ಹಾಂಕಾಂಗ್‌ (3), ಅಮೆರಿಕ (6), ಆಸ್ಪ್ರೇಲಿಯಾ (10) ಕೂಡ ಸ್ಥಾನ ಪಡೆದಿವೆ. ಬ್ರಿಟನ್‌ 17ನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಸಿಡ್ನಿ ಮತ್ತು ನ್ಯೂಯಾರ್ಕ್ ನಗರಗಳು ಅಪಾಯದಲ್ಲಿರುವ ಅಗ್ರ 20 ಪ್ರಮುಖ ಅಂತಾರಾಷ್ಟ್ರೀಯ ನಗರಗಳ ಪೈಕಿ ಒಂದೆನಿಸಿವೆ.

ಕೊರೋನಾ ವೈರಸ್‌ ಯಾವ ರೀತಿಯಾಗಿ ಹರಡುತ್ತಿದೆ ಎಂಬುದನ್ನು ತಿಳಿಯಲು ಚೀನಾ ಜನರ ಚಲನವಲನಗಳ ವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಸೌಥ್‌ಹ್ಯಾಂಪ್ಟನ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಆ್ಯಂಡ್ರ್ಯೂ ಟಟೆಮ್‌ ಹೇಳಿದ್ದಾರೆ. ಅದರಂತೆ ಮೊಬೈಲ್‌ ಫೋನ್‌ ಹಾಗೂ ಐಪಿ ವಿಳಾಸದ ಮಾಹಿತಿಯನ್ನು ಆಧರಿಸಿ ಚೀನಾದಲ್ಲಿ ಚಂದ್ರಮಾನ ಹೊಸ ವರ್ಷದ ನಿಮಿತ್ತ 40 ದಿನಗಳ ರಜಾ ದಿನದ ಅವಧಿಯಲ್ಲಿ ಚೀನಾದ ಒಳಗಡೆ ಮತ್ತು ವಿಶ್ವದೆಲ್ಲೆಡೆ ಜನರ ಚಲನ ವಲನಗಳ ವಿಧಾನವನ್ನು ಸಂಶೋಧನಾ ತಂಡ ಕಲೆ ಹಾಕಿದೆ.

ಬೆಂಗಳೂರಲ್ಲಿ ಮತ್ತೆ ನಾಲ್ವರಿಗೆ ಕೊರೋನಾ ವೈರಸ್ ಭೀತಿ! ಆತಂಕದಲ್ಲಿ ಜನತೆ

ಈ ಪೈಕಿ ಹೆಚ್ಚಿನ ಜನರು ಕೊರೋನಾ ವೈರಸ್‌ನ ರೋಗ ಲಕ್ಷಣ ಕಾಣಿಸಿಕೊಳ್ಳುವ ಮೊದಲ ಹಂತದಲ್ಲೇ ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಚೀನಾದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡಿದ ಬಳಿಕ ಈಗ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಚೀನಾದಿಂದ ಹೆಚ್ಚಿನ ಮಂದಿ ಮೊದಲೇ ಬಂದಿರುವುದರಿಂದ ಅವರಲ್ಲಿ ರೋಗ ಇರುವುದು ಪತ್ತೆ ಆಗಿಲ್ಲ. ಅಲ್ಲದೇ ಚೀನಾದ ಪ್ರಮುಖ ನಗರಗಳು ಈಗ ಸಂಪೂರ್ಣ ನಗರಗಳು ಸಂಪೂರ್ಣ ಸ್ತಬ್ಧಗೊಂಡಿರುವುದರಿಂದ ಅವರು ತಮ್ಮ ದೇಶಕ್ಕೆ ಪುನಃ ಮರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವ್ಯಕ್ತಿಗಳು ತಾವು ಪ್ರಯಾಣಿಸಿದ ದೇಶಗಳಲ್ಲಿ ಕೊರೋನಾ ವೈರಸ್‌ ಅನ್ನು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

Latest Videos
Follow Us:
Download App:
  • android
  • ios