ಟ್ರಂಪ್ 2ನೇ ದಿನ: ಭಾರತ- ಅಮೆರಿಕಾ ನಡುವೆ ಮಹತ್ವದ ಒಪ್ಪಂದ?

ಭಾರತದಲ್ಲಿ ಟ್ರಂಪ್ ಎರಡನೇ ದಿನ ಪ್ರವಾಸ| ಇಂದಿನ ಟ್ರಂಪ್ ಕಾರ್ಯಕ್ರಮಗಳೇನು..?| ಮಹತ್ವದ ಒಪ್ಪಂದಗಳಿಗೆ ಸಹಿ

Donald Trump india visit 2nd Day here is complete schedule

ನವದೆಹಲಿ[ಫೆ.25]: ಅಮೆರಿಕಾ ಅಧ್ಯಕ್ಷ ಟ್ರಂಪ್ ಅವ್ರ ಎರಡು ದಿನಗಳ ಭಾರತ ಪ್ರವಾಸದಲ್ಲಿ ಒಂದು ದಿನ ಮುಕ್ತಾಯವಾಗಿದೆ. ಮೊದಲ ದಿನ ಸಾಬರಮತಿ ಆಶ್ರಮ, ನಮಸ್ತೆ ಟ್ರಂಪ್ ಕಾರ್ಯಕ್ರಮ.. ಹಾಗೂ ಪ್ರೇಮಸೌಧಕ್ಕೆ ಭೇಟಿ ನೀಡಿದ್ದ, ದೊಡ್ಡಣ್ಣ.. ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಸಭೆ, ಸಮಾರಂಭ, ಒಪ್ಪಂದಗಳು ಹಾಗೂ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆಯಿದೆ. 

ಇಂದಿನ ಟ್ರಂಪ್ ಕಾರ್ಯಕ್ರಮಗಳೇನು..? 

-  ರಾಷ್ಟ್ರಪತಿ ಭವನದಲ್ಲಿ ಟ್ರಂಪ್ಗೆ ಔಪಚಾರಿಕ ಸ್ವಾಗತ

- ಮಹಾತ್ಮ ಗಾಂಧಿ ಸ್ಮಾರಕ ರಾಜ್ ಘಾಟ್ಗೆ ತೆರಳಿ ಗೌರವ ನಮನ

- ದೆಹಲಿಯ ಹೈದ್ರಾಬಾದ್ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ

- ಅಮೆರಿಕಾ ರಾಯಭಾರ ಕಚೇರಿಯಲ್ಲಿ ದುಂಡು ಮೇಜಿನ ಸಭೆ

- ರಾಷ್ಟ್ರಪತಿ ಭವನದಲ್ಲಿ ಟ್ರಂಪ್ ರಾಮನಾಥ್ ಕೋವಿಂದ್ ಭೇಟಿ

- ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರಪತಿ ಭವನದಲ್ಲಿ ಔತಣಕೂಟ

- ರಾತ್ರಿ 10 ಗಂಟೆ ಭಾರತದಿಂದ ಡೊನಾಲ್ಡ್ ಟ್ರಂಪ್ ನಿರ್ಗಮನ

ಮೋದಿ ಹಾಗೂ ಟ್ರಂಪ್ ನಡುವೆ ಮಹತ್ವದ ಒಪ್ಪಂದಗಳ ಮಾತುಕತೆ ನಡೆಯುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ಇದ್ರ ಭಾಗವಾಗಿ ನಿನ್ನೆಯಷ್ಟೇ ದೊಡ್ಡಣ್ಣ ತಮ್ಮ ಭಾಷಣದಲ್ಲಿ ಕೆಲ ಒಪ್ಪಂದಗಳ ಸುಳಿವು ಬಿಟ್ಟು ಕೊಟ್ಟಿದ್ದಾರೆ.. ಅವುಗಳಲ್ಲಿ ಮುಖ್ಯವಾಗಿ.. 

ಭಾರತ - ಅಮೆರಿಕ ನಡುವಿನ ಒಪ್ಪಂದಗಳು..? 

* ಭಾರತ - ಅಮೆರಿಕ ನಡುವೆ 3 ಬಿಲಿಯನ್ ಡಾಲರ್ ಸೇನಾ ಒಪ್ಪಂದ

* ಅಡ್ವಾನ್ಸ್ಡ್ ಏರ್ ಡಿಫೆನ್ಸ್ & ಆನ್ಆರ್ಮ್ ವೆಹಿಕಲ್ ಒಳಗೊಂಡ ಒಪ್ಪಂದ

* ವ್ಯಾಪಾರ & ಭದ್ರತೆ ಸೇರಿ 5 ನಿಲುವಳಿ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ

* ಉಭಯ ನಾಯಕರ ನಡುವೆ ಒಪ್ಪಂದ & ಒಡಂಬಡಿಕೆಗಳ ವಿನಿಮಯ

 ನೀರಿಕ್ಷೆಗಳಂತೆ ಮಹತ್ವದ ಒಪ್ಪಂದಗಳಿಗೆ ಭಾರತ ಅಮೆರಿಕಾರ ಸಹಿ ಹಾಕಿದ್ರೆ, ದೊಡ್ಡಣ್ಣ, ನಮೋ ಸ್ನೇಹ ಮತ್ತಷ್ಟು ಗಟ್ಟಿಗೊಳ್ಳೋದ್ರಲ್ಲಿ ಎರಡು ಮಾತಿಲ್ಲ. 

"

Latest Videos
Follow Us:
Download App:
  • android
  • ios