Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಶಿವಸೇನೆ- ಬಿಜೆಪಿ ಸರ್ಕಾರ ಪಕ್ಕಾ? ಶಾ ಕೊಟ್ರು ಸುಳಿವು

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ| ಮುರಿದು ಬಿದ್ದ ಬಿಜೆಪಿ, ಶಿವಸೇನೆ ಮೈತ್ರಿ| ಕಾಂಗ್ರೆಸ್, NCPಜೊತೆ ಕೈ ಮಿಲಾಯಿಸಿ ಸರ್ಕಾರ ರಚಿಸಲು ಶಿವಸೇನೆ ಸಜ್ಜು| ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕುತೂಹಲ ಮೂಡಿಸಿದೆ ಅಮಿತ್ ಶಾ ಹೇಳಿಕೆ

Don't Worry Ramdas Athawale Quotes Amit Shah On Maharashtra
Author
Bangalore, First Published Nov 18, 2019, 1:43 PM IST

ಮುಂವಬೈ[ನ.18]: ಬಿಜೆಪಿ ಹಾಗೂ ಶಿವಸೇನೆ ನಡುವಿನ ಅಸಮಾಧಾನದಿಂದಾಗಿ ಮಹಾರಾಷ್ಟದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಹೀಗಿರುವಾಗ ಕಾಂಗ್ರೆಸ್, NCP ಹಾಗೂ ಶಿವಸೇನೆ ಸರ್ಕಾರ ರಚಿಸುವ ತಯಾರಿ ನಡೆಸುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದ್ದಾರೆಂಬ ಹೇಳಿಕೆ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೆಬ್ಬಿಸಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಕುರಿತು ಯಾವುದೇ ಆತಂಕ ಬೇಡ. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯೇ ಸರ್ಕಾರ ರಚಿಸಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.

ಠಾಕ್ರೆಗೆ ನಮಿಸಲು ಬಂದ ಫಡ್ನವೀಸ್‌ಗೆ ಮುಜುಗರ!

NDA ಮಿತ್ರಪಕ್ಷಗಳ ಸಭೆ ಬಳಿಕ ಪ್ರತಿಕ್ರಿಯಿಸಿರುವ ಸಚಿವ ಅಠಾವಳೆ 'ಸರ್ಕಾರ ರಚನೆಗೆ ಸಂಬಂಧಿಸಿದಂತೆ ಶಿವಸೇನೆ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. ನೀವು ಮಧ್ಯಸ್ಥಿಕೆ ವಹಿಸಿದ್ರೆ ಯಾವುದಾದರೂ ಮಾರ್ಗ ಕಂಡುಕೊಳ್ಳಲು ಸಾಧ್ಯ ಎಂದು ನಾನು ಅಮಿತ್ ಶಾ ಬಳಿ ತಿಳಿಸಿದ್ದೆ. ಇದಕ್ಕೆ ಉತ್ತರಿಸಿದ ಶಾ, ಆತಂಕ ಪಡಬೇಕಾಗಿಲ್ಲ. ಎಲ್ಲವೂ ಅರಿಯಾಗಲಿದೆ. ಬಿಜೆಪಿ ಹಾಗೂ ಶಿವಸೇನೆ ಶೀಘ್ರದಲ್ಲೇ ಒಂದಾಗಿ ಸರ್ಕಾರ ರಚಿಸಲಿದೆ' ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ, ತರುವಾಯ ಮುಖ್ಯಮಂತ್ರಿ ಸ್ಥಾನಕ್ಕಾಗಿ 50:50 ಅಧಿಕಾರ ಹಂಚಿಕೆಗೆ ಒಪ್ಪದೆ ದೂರವಾಗಿವೆ. ಹೀಗಾಗಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಸದ್ಯ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಈ ಮೂರೂ ಪಕ್ಷದ ಹಿರಿಯ ನಾಯಕರು ಸಭೆ ನಡೆಸಿ ಸರ್ಕಾರ ರಚಿಸಲು ನಡೆಸುತ್ತಿದ್ದಾರೆ. ಈಗಾಗಲೇ ಕಾರ್ಯಸೂಚಿ ತಯಾರಾಗಿದ್ದು, ಸರ್ಕಾರ ಯಾವಾಗ ರಚನೆಯಾಗುತ್ತೆ ಎಂಬುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios