ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ?| ಕಾಯ್ದೆ ತಿದ್ದುಪಡಿಗೆ ಚಿಂತನೆ: ಅಶೋಕ್‌

ಬೆಂಗಳೂರು[ಜ.25]: ದೇಶದ ವಿವಿಧ ರಾಜ್ಯಗಳಲ್ಲಿರುವಂತೆ ಜಿಲ್ಲಾಧಿಕಾರಿಗಳಿಗೆ ಕಲೆಕ್ಟರ್‌ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲೂ ಜಿಲ್ಲಾಧಿಕಾರಿ(ಡೀಸಿ)ಗಳನ್ನು ಕಲೆಕ್ಟರ್‌ಗಳೆಂದು ಮರುನಾಮಕರಣ ಮಾಡುವ ಚಿಂತನೆ ಇದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಹಣ ಬಿಡುಗಡೆ ಮಾಡದ ಅಧಿಕಾರಿಗೆ ಕೆನ್ನೆಗೆ ಭಾರಿಸಿದ ಜಿಲ್ಲಾಧಿಕಾರಿ

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅಬಕಾರಿ, ಬಿಬಿಎಂಪಿ ಮತ್ತು ಸಾರಿಗೆ ಇಲಾಖೆಯಲ್ಲೂ ಡೀಸಿ ಹೆಸರಿನ ಹುದ್ದೆಗಳಿವೆ. ಇದರಿಂದ ಗೊಂದಲವಾಗುತ್ತಿದೆ ಎಂದು ಹಲವು ಜಿಲ್ಲಾಧಿಕಾರಿಗಳೇ ಅಲವತ್ತುಕೊಂಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್‌ಗಳೆಂದು ಮರು ನಾಮಕರಣ ಮಾಡುವ ಸಂಬಂಧ ಕಾಯ್ದೆ ತಿದ್ದುಪಡಿ ಮಾಡುವ ಚಿಂತನೆಯಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಬಳಕೆಯಲ್ಲಿರುವ ಪರ್ಷಿಯನ್‌ ಹಾಗೂ ಉರ್ದು ಶಬ್ದಗಳನ್ನು ತೆಗೆದು ಕನ್ನಡ ಶಬ್ದ ಬಳಸುವ ಆಲೋಚನೆಯೂ ಇದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಡಿಸಿ ಮೇಡಂ ಏನು ಸ್ಕೂಟಿಯಲ್ಲಿ ಹೋಗ್ತಾರಾ..?