ಜೆಎನ್‌ಯು ದಾಳಿಕೋರರ ಕುರಿತು ಮಹತ್ವದ ಸುಳಿವು|  ಭಾನುವಾರ ಮುಸುಕುಧಾರಿಗಳಿಂದ ನಡೆದ ದಾಳಿ

ನವದೆಹಲಿ[ಜ.09]: ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಕಳೆದ ಭಾನುವಾರ ಮುಸುಕುಧಾರಿಗಳಿಂದ ನಡೆದ ದಾಳಿ ಕುರಿತಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ಅವರು ಈ ಪ್ರಕರಣವನ್ನು ಭೇದಿಸುವ ಹಂತದಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ದೀಪಿಕಾ ಪಡುಕೋಣೆಗೆ ಆಲ್‌ ದ ಬೆಸ್ಟ್‌: ಪ್ರತಾಪ್‌ ಸಿಂಹ

ಈ ನಡುವೆ, ಜೆಎನ್‌ಯು ಕುಲಪತಿ ಎಂ. ಜಗದೀಶ್‌ ಕುಮಾರ್‌ ಅವರು ಬುಧವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಭೇಟಿ ವೇಳೆ, ವಿಶ್ವವಿದ್ಯಾಲಯವನ್ನು ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಯಾವುದೇ ಸಲಹೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ವಿ.ವಿ.ಯನ್ನು ಸಹಜಸ್ಥಿತಿಗೆ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಜಗದೀಶ್‌ ಕುಮಾರ್‌ ಅವರಿಂದ ವಿವಿ ಮುಚ್ಚುವ ಕುರಿತು ಯಾವುದೇ ಸಲಹೆ ಬಂದಿಲ್ಲ ಎಂದು ಅಧಿಕಾರಿಗಳು ಕೂಡ ಹೇಳಿದ್ದಾರೆ.

JNU ಮೇಲೆ ದಾಳಿ: ವಿದ್ಯಾರ್ಥಿಗಳ ಮೇಲೆ ಬಿಜೆಪಿ ಬೆಂಬಲಿತ ಗೂಂಡಾಗಳಿಂದ ಹಲ್ಲೆ