ಬಿಜೆಪಿ 55 ಸೀಟು ಗೆದ್ರೆ ಅಚ್ಚರಿಪಡಬೇಡಿ: ಮನೋಜ್ ತಿವಾರಿ!

ದೆಹಲಿ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ| ಆಪ್ 53 ಕ್ಷೇತ್ರಗಳಲ್ಲಿ, ಬಿಜೆಪಿ 16 ಹಾಗೂ ಕಾಂಗ್ರೆಸ್ 01 ಕ್ಷೇತ್ರಗಳಲ್ಲಿ ಮುನ್ನಡೆ|  ಬಿಜೆಪಿ 55 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದ ಮನೋಜ್ ತಿವಾರಿ| ಪಕ್ಷದ ಗೆಲುವಿನ ಭರವಸೆ ವ್ಯಕ್ತಪಡಿಸಿದ ದೆಹಲಿ ಬಿಜೆಪಿ ಅಧ್ಯಕ್ಷ| 48 ಕ್ಷೇತ್ರಗಳಲ್ಲಿ ಜಯಗಳಿಸುವುದು ಶತಸಿದ್ಧ ೆದ್ದ ಮನೋಜ್ ತಿವಾರಿ|

Delhi BJP Chief Manoj Tiwari Confident Of Winning 55 Seats

ನವದೆಹಲಿ(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕ್ರಿಯೆ ಆರಂಭಗೊಂಡಿದ್ದು, ಮತದಾನ ಎಣಿಕೆ ಕಾರ್ಯ ಆರಂಭವಾಗಿದೆ.

ಈಗಾಗಲೇ ಆಡಳಿತಾರೂಢ ಆಪ್ 53 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 16 ಹಾಗೂ ಕಾಂಗ್ರೆಸ್ 01 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಮಧ್ಯೆ ಬಿಜೆಪಿ 55 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ಪಕ್ಷ ದೆಹಲಿಯಲ್ಲಿ ಅಧಿಕಾರ ಪಡೆದರೆ ಅಚ್ಚರಿಪಡಬೇಡಿ ಎಂದು ಹೇಳಿದ್ದಾರೆ.

ದಿಲ್ಲಿ ಕುರ್ಚಿ ಯಾರಿಗೆ? ಬೆಳಗ್ಗೆ 11ಕ್ಕೆ ಚಿತ್ರಣ, ಆಪ್‌ಗೆ ಸತತ 3ನೇ ಸಲ ಗೆಲ್ಲುವ ವಿಶ್ವಾಸ !

ಮತ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೇ ಬಿಜೆಪಿ ಜಯದ ಭರವಸೆ ವ್ಯಕ್ತಪಡಿಸಿದ ಮನೋಜ್ ತಿವಾರಿ, 11 ಗಂಟೆಗೆ ಎಲ್ಲವೂ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ನಾವು 48 ಕ್ಷೇತ್ರಗಳಲ್ಲಿ ಜಯಗಳಿಸುವುದು ಶತಸಿದ್ಧ ಎಂದಿರುವ ಮನೋಜ್ ತಿವಾರಿ, ಒಂದು ವೇಳೆ ಬಿಜೆಪಿ 55 ಕ್ಷೇತ್ರಗಳನ್ನು ಗೆದ್ದರೆ ಅಚ್ಚರಿಪಡಬೇಡಿ ಎಂದು ಹೇಳಿದರು.

ಅದಾಗ್ಯೂ ಚುನಾವಣಾ ಫಲಿತಾಂಶ ಏನೇ ಆದರೂ ಎಲ್ಲರೂ ಅದನ್ನು ಒಪ್ಪಬೇಕು ಎಂದಿರುವ ತಿವಾರಿ, ಬಿಜೆಪಿ ಕಾರ್ಯಾಲಯದಲ್ಲಿ ಗೆಲುವಿನ ಸಂಭ್ರಮಾಚರಣೆಗೆ ಭರದ ಸಿದ್ಧತೆ ನಡೆದಿದೆ ಎಂದು ಹೇಳಿದರು.

"

Latest Videos
Follow Us:
Download App:
  • android
  • ios