Asianet Suvarna News Asianet Suvarna News

ದೇಶದಲ್ಲಿ ಮತ್ತೆ 1120 ಮಂದಿಗೆ ಕೊರೋನಾ: 12,000 ಗಡಿದಾಟಿದ ಸೋಂಕಿತರು!

12000 ಗಡಿದಾಟಿದ ಸೋಂಕಿತರು| ನಿನ್ನೆ 1120 ಜನರಿಗೆ ಸೋಂಕು, 39 ಜನರ ಸಾವು

Coronavirus In India With 1120 new cases country tally nears 12000
Author
Bangalore, First Published Apr 16, 2020, 7:12 AM IST

ನವದೆಹಲಿ(ಏ.16): ಕೊರೋನಾ ವೈರಸ್‌ ತಡೆಗೆ ಸರ್ಕಾರ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಯಾದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬುಧವಾರ ಒಂದೇ ದಿನ ದೇಶಾದ್ಯಂತ 1,120 ಜನರಿಗೆ ವೈರಸ್‌ ತಗುಲಿದೆ. ಈ ಮೂಲಕ ಸತತ ಎರಡನೇ ದಿನವೂ ಹೊಸ ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆ 1000ದ ಗಡಿ ದಾಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12220ಕ್ಕೇರಿದೆ. ಇನ್ನು ಬುಧವಾರ 36 ಜನ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 417ಕ್ಕೆ ತಲುಪಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜ್ಯದಲ್ಲಿ 3 ದಿನದಲ್ಲಿ ಸಾವಿನ ಸಂಖ್ಯೆ ಡಬಲ್‌!

ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಅನ್ವಯ, ಬುಧವಾರ 1344 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 11933ಕ್ಕೆ ತಲುಪಿದೆ. ಜೊತೆಗೆ ಸಾವಿನ ಸಂಖ್ಯೆ 392ಕ್ಕೆ ಏರಿದೆ. ಇನ್ನು 1,343 ಜನರು ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,197 ಇದೆ ಎಂದೂ ಸರ್ಕಾರ ತಿಳಿಸಿದೆ.

ಆಪತ್ತಿಗೆ ಆದ ರಷ್ಯಾ ಸ್ನೇಹಿತ, ಮೋದಿ ಮಾತಿಗೆ ದೊಡ್ಡ ಮೊತ್ತವ ದೇಣಿಗೆ ನೀಡಿದ

ಬುಧವಾರ ಮಹಾರಾಷ್ಟ್ರದಲ್ಲಿ 232, ಮಧ್ಯಪ್ರದೇಶದಲ್ಲಿ 197, ಗುಜರಾತ್‌ನಲ್ಲಿ 114, ಉತ್ತರಪ್ರದೇಶದಲ್ಲಿ 75, ತಮಿಳುನಾಡಿನಲ್ಲಿ 38, ರಾಜಸ್ಥಾನದಲ್ಲಿ 41 ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಹೆಚ್ಚು ಸಾವು ಸಂಭವಿಸಿದ ರಾಜ್ಯಗಳೆಂದರೆ ಮಹಾರಾಷ್ಟ್ರ 187, ಮಧ್ಯಪ್ರದೇಶದಲ್ಲಿ 53, ಗುಜರಾತ್‌ನಲ್ಲಿ 33, ತಮಿಳುನಾಡಿನಲ್ಲಿ 41, ದೆಹಲಿಯಲ್ಲಿ 30, ರಾಜಸ್ಥಾನ 11.

Follow Us:
Download App:
  • android
  • ios