ಅನಂತ್ ಕುಮಾರ್ ಹೆಗ್ಡೆ ಗಾಂಧೀಜಿ ವಿಚಾರವಾಗಿ ವಿವಾದಾತ್ಮಕ ಹೇಳಿಕೆ| ಬಜೆಟ್ ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ| ಬಿಜೆಪಿ ನಾಯಕರನ್ನು ರಾವಣನ ಮಕ್ಕಳೆಂದು ಹಣಿದ ಕಾಂಗ್ರೆಸ್ ನಾಯಕ

ನವದೆಹಲಿ[ಫೆ.04]: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಮಹಾತ್ಮ ಗಾಂಧಿ ಕುರಿತಾಗಿ ನೀಡಿರುವ ವಿವಾದಾತ್ಮ ಹೇಳಿಕೆಯಿಂದ ಕಮಲ ಪಾಳಯ ಭಾರೀ ಟೀಕೆಗೀಡಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನದ ನಾಲ್ಕನೇ ದಿನ ಮಂಗಳವಾರದಂದು ಉತ್ತರ ಕನ್ನಡದ ಬಿಜೆಪಿ ಸಂಸದ ಹೆಗ್ಡೆ ಹೇಳಿಕೆ ಚರ್ಚೆಯಾಗಿದೆ. ಈ ವೇಳೆ ಗುಡುಗಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೆಗ್ಡೆಯಂತಹ ಬಿಜೆಪಿ ನಾಯಕರು ರಾವಣನ ಮಕ್ಕಳು ಎಂದು ವಾಗ್ದಾಳಿ ನಡೆಸಿದ್ದರೆ. ಈ ವೇಳೆ ಬಿಜೆಪಿ ನಾಯಕರು ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗದ್ದಲದ ಬಳಿಕ ವಾಕೌಟ್ ಮಾಡಿದ್ದಾರೆ.

ಲೋಕಸಭೆಯ ಶೂನ್ಯ ಅವಧಿ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ 'ದೇಶದಾದ್ಯಂತ ಪೌರತ್ವ ಕಾಯ್ದೆ ಹಾಗೂ NRC ಸಂಬಂಧ ಪ್ರತಿಭಟನೆಗಳು ನಡೆಯುತ್ತಿವೆ. ನಾವು ಮಹಾತ್ಮ ಗಾಂಧೀಜಿಯವರ ಆದರ್ಶದಂತೆ ಶಾಂತಿಪೂರ್ವಕ ಪ್ರತಿಭಟನೆ ನಡೆಸುತ್ತಿದ್ದೇವೆ. ದೇಶದಾದ್ಯಂತ ಗಾಂಧೀಜಿಯವರ ಆದರ್ಶಗಳನ್ನು ಹೊಗಳುತ್ತಿದ್ದಾರೆ. ಆದರೆ ಇವರ ಕಡೆಯಿಂದ[ಬಿಜೆಪಿ] ಅವರ ಗಾಂಧೀಜಿ ಕುರಿತು ತಪ್ಪು ಹೇಳಿಕೆಗಳನ್ನು ನೀಡಲಾಗುತ್ತಿದೆ' ಎಂದಿದ್ದಾರೆ.

Scroll to load tweet…

ಅಲ್ಲದೇ 'ಗಾಂಧೀಜಿ ದೇಶವನ್ನು ಪರಾತಂತ್ರದಿಂದ ಮುಕ್ತಿಗೊಳಿಸಿದರು. ಆದರೆ ಇಂದು ಇವರು ಗಾಂಧೀಜಿಯನ್ನೇ ಕೆಟ್ಟ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಇವರು ರಾಮ ಭಕ್ತ[ಗಾಂಧಿಜಿ]ಗೆಯನ್ನು ಅವಮಾನಿಸುತ್ತಿದ್ದಾರೆ. ಇವರು ರಾವಣನ ಮಕ್ಕಳು' ಎಂದು ಕಿಡಿ ಕಾರಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಚೌಧರಿ ಮುಂದೆ ನಾಥೂರಾಮ್ ಗೋಡ್ಸೆ ವಿಚಾರವನ್ನೂ ಉಲ್ಲೇಖಿಸಿ 'ಈ ಸರ್ಕಾರ ಗೋಡ್ೆ ಸರ್ಕಾರ' ಎಂದು ಗುಡುಗಿದ್ದಾರೆ.