Asianet Suvarna News Asianet Suvarna News

ಚಿದಂಬರಂಗೆ ಬಿಗ್ ರಿಲಿಫ್ : 105 ದಿನಗಳ ಜೈಲುವಾಸ ಮುಕ್ತಾಯ

ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರ 105 ದಿನಗಳ ಜೈಲುವಾಸ ಮುಕ್ತಾಯವಾಗಿದೆ. ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 

Cong leader P Chidambaram gets bail in INX Media case by SC to walk out from Tihar Jail
Author
Bengaluru, First Published Dec 4, 2019, 10:58 AM IST

ನವದೆಹಲಿ [ಡಿ.04]:  ಮಾಜಿ ಸಚಿವ ಪಿ. ಚಿದಂಬರಂಗೆ ಬಿಗ್ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್ ಪಿ. ಚಿದಂಬರಂಗೆ ಜಾಮೀನು ಮಂಜೂರು ಮಾಡಿದೆ. 

"

105 ದಿನಗಳ ಕಾಲ ತಿಹಾರ ಜೈಲಿನಲ್ಲಿದ್ದ ಚಿದಂಬರಂಗೆ INX ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಷರತ್ತು ಬದ್ಧ ಜಾಮೀನು ನೀಡಿದ್ದು, 2 ಲಕ್ಷ ರು. ಬಾಂಡ್ ಇಡಲು ಸೂಚನೆ ನಡಲಾಗಿದೆ.ಅಲ್ಲದೇ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ತಿಳಿಸಲಾಗಿದೆ. 

ನ್ಯಾ. ಭಾನುಮತಿ ನೆತೃತ್ವದ ತ್ರಿ ಸದಸ್ಯ ಪೀಠವು ಚಿದಂಬರಂ ಜಾಮೀನು ನೀಡಿದ್ದು, ಇಬ್ಬರು ವ್ಯಕ್ತಿಗಳಿಂದ ಶೂರಿಟಿ ಪಡೆಯಲಾಗುತ್ತದೆ. ಅಲ್ಲದೇ ಅವರ ಪಾಸ್ ಪೋರ್ಟ್ ಕೂಡ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಸಂದರ್ಶನ ನೀಡುವಂತಿಲ್ಲ. ಸಾಕ್ಷ್ಯ ನಾಶ ಮಾಡುವಂತಿಲ್ಲ. ಸಾಕ್ಷಿ ಭೇಟಿ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಬೇಲ್‌ ನಿರಾಕರಿಸಲು ನಾನು ಬಿಲ್ಲಾ- ರಂಗಾ ಅಲ್ಲ: ಚಿದಂಬರಂ...

ಈ ಹಿಂದೆ ನ.15 ರಂದು ನಡೆದ ವಿಚಾರಣೆ ವೇಳೆ ದೆಹಲಿ ಹೈ ಕೋರ್ಟ್ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 

ಐಎನ್‌ಎಕ್ಸ್‌ ಕೇಸಲ್ಲಿ ಚಿದುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್...

ಇದರ ವಿರುದ್ಧ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ನವೆಂಬರ್ 28 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟ ಮಾಡಿದೆ. 

ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಸಾಕ್ಷಿದಾರರ  ಮೇಲೆ ಚಿದಂಬರಂ ಪ್ರಭಾವ ಬೀರುತ್ತಿದ್ದಾರೆ ಎಂದು ಇಡಿ ಆರೋಪಿಸಿತ್ತು.

Follow Us:
Download App:
  • android
  • ios